ಗ್ರಾಮ ಆಡಳಿತ ಅಧಿಕಾರಿಗಳ – ಅನಿರ್ದಿಷ್ಟಾವಧಿ ಮುಷ್ಕರ.
ತರೀಕೆರೆ ಫೆ.11

ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆ ಎಂದು ಪರಿವರ್ತಿಸಲು ಒತ್ತಾಯಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಆಡಳಿತ ಸೌಧದ ಎದುರು ಇಂದು 25 ಜನ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಸುಸಜ್ಜಿತವಾದ ಕಚೇರಿ, ಮೊಬೈಲ್ ಫೋನ್, ಲ್ಯಾಪ್ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ನೀಡಬೇಕು. ಮತ್ತು ಅಂತರ್ ಜಿಲ್ಲಾ ವರ್ಗಾವಣೆಗೆ ಅನುವು ಮಾಡಿ ಕೊಡಬೇಕು, ಅವೈಜ್ಞಾನಿಕವಾಗಿ ರೂಪಿಸಿರುವ ಇ-ಪಾವತಿ ಆಂದೋಲನವನ್ನು ಕೈಬಿಡಬೇಕು, ಆಪತ್ತಿನ ಭಥ್ಯಯನ್ನು ಮಂಜೂರು ಮಾಡಬೇಕು, ಪ್ರಯಾಣ ಭತ್ಯೆಯನ್ನು 500 ರಿಂದ 5000 ರೂ, ಗಳಿಗೆ ಹೆಚ್ಚಿಸಬೇಕು ಕರ್ತವ್ಯದ ಅವಧಿಯಲ್ಲಿ ನೌಕರ ಮೃತ ಪಟ್ಟರೆ ನೌಕರರ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನ ನೀಡಬೇಕು.
ಪ್ರಸ್ತುತ ಜನ ಸಂಖ್ಯೆಗೆ ಅನುಗುಣವಾಗಿ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು ಪುನಃ ರಚಿಸಲು ಪೊಲೀಸ ಇಲಾಖೆಯಲ್ಲಿ ಇರುವಂತೆ ಮಾಸಿಕ 3000 ಗಳ ಆಪತ್ತು ಭತ್ಯ ನೀಡಬೇಕು, ಒಂದು ತಿಂಗಳ ಹೆಚ್ಚಿನ ವೇತನ ನೀಡಬೇಕು, ಎಂದು ಎಲ್ಲಾ ಬಗೆಯ 21 ಮೊಬೈಲ್ ವೆಬ್ ಅಪ್ಲಿಕೇಶನ್ ಕೆಲಸಗಳು ಮತ್ತು ಲೇಖಣಿ ಸ್ಥಗಿತ ಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ವೀಣಾ ರವರು ಪತ್ರಿಕೆಗೆ ತಿಳಿಸಿದರು. ಉಪಾಧ್ಯಕ್ಷರಾದ ಕಾರ್ತಿಕ್ ಮತ್ತು ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್, ಹಾಗೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್. ವೆಂಕಟೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಿಲ್ಟ್ರಿ ಶ್ರೀನಿವಾಸ್, ತಾಲೂಕು ಲಂಬಾಣಿ ಬಂಜಾರ ಸಮಾಜದ ಮುಖಂಡರಾದ ಸತ್ಯಪ್ಪ ಅಹಿಂದ ಚಳುವಳಿಯ ತಾಲೂಕು ಅಲ್ಪಸಂಖ್ಯಾತರ ಸಂಚಾಲಕರಾದ ಆದಿಲ್ ಪಾಷಾ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು