ಅತೀವೃಷ್ಟಿ ಯಿಂದ ಬೆಳೆ ಹಾನಿ ಪರಿಹಾರಕ್ಕಾಗಿ – ರೈತರ ಆಗ್ರಹ.
ಕೊಟ್ಟೂರು ಸ.10





ಕಳೆದ ಒಂದು ತಿಂಗಳಿನಿಂದ ಸುರಿದ ನಿರಂತರ ಮಳೆಯಿಂದಾಗಿ ತಾಲೂಕಿನ ತೂಲಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳ ರೈತರ ಜಮೀನುಗಳಲ್ಲಿ ನೀರು ನಿಂತ ಪರಿಣಾಮವಾಗಿ ಮುಸುಕಿನ ಜೋಳ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃಷಿ ಮಾಡಿದ ರೈತರ ಮೊಗದಲ್ಲಿಗ ಆಂತಕ ಛಾಯೆ ಮೂಡಿರುವುದಂತು ಸತ್ಯ.

ಈ ಬಗ್ಗೆ ರೈತರು ವಾಹಿನಿಯೊಂದಿಗೆ ಮಾತನಾಡಿ ನಮಗೆ ಆಗಿರುವ ಅನ್ಯಾಯವನ್ನು ಸರ್ಕಾರ ನ್ಯಾಯುತವಾಗಿ ಪರಿಹಾರ ಒದಗಿಸಿ ಹಾನಿಗೆ ಒಳಗಾದ ರೈತರ ಬೆಳೆಗಳ ಸಮೀಕ್ಷೆ ನಡೆಸಿ ರೈತರ ನೆರವಿಗೆ ಕೂಡಲೇ ಧಾವಿಸ ಬೇಕು. ಸರ್ಕಾರದಿಂದ ಬೆಳೆ ಪರಿಹಾರವನ್ನು ಶೀಘ್ರವಾಗಿ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಬೆಳೆ ಹಾನಿಗೆ ಒಳಗಾದ ರೈತರು, ಮುಖಂಡರು, ರೈತ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಪ್ರದೀಪ್. ಕುಮಾರ್.ಸಿ.ಕೊಟ್ಟೂರು