ಜೆಜೆಎಂ ಕಾಮಗಾರಿಯ ತಗ್ಗು ಗುಂಡಿ ಮುಚ್ಚಿ ಅಂದಿದಕ್ಕೆ, ಅಮಾಯಕನ ಮೇಲೆ – ಶರಣಪ್ಪಗೌಡ ನಿಂದ ಹಲ್ಲೆ.
ನಕ್ಕುಂದಿ ಫೆ.12

ಜೆಜೆಎಂ ಕಾಮಗಾರಿಯ ತಗ್ಗು ಗುಂಡಿಗಳನ್ನು ಸರಿಯಾಗಿ ಮುಚ್ಚಿ ಸಿ.ಸಿ ರಸ್ತೆ ನಿರ್ಮಾಣ ಮಾಡಿ ಕೊಡಿ ಎಂದಿದ್ದಕ್ಕೆ ಅದೆಲ್ಲ ನೀನೇನು ಕೇಳುತ್ತೀಯಾ ಎಂದು ಬಿಜೆಪಿ ಮುಖಂಡ ನಕ್ಕುಂದಿ ಶರಣಪ್ಪಗೌಡ ಅಮಾಯಕ ವ್ಯಕ್ತಿ ಮಲ್ಲಿಕಾರ್ಜುನನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ನಡೆದಿದ್ದು, ಗೌಡ ಸರಿಯಾಗಿ ಕೆಲಸ ಮಾಡಿಲ್ಲ ನೀರು ಸರಿಯಾಗಿ ಬರುತ್ತಿಲ್ಲ ಹಾಗೆಯೇ ಗುಂಡಿಗಳನ್ನು ಮುಚ್ಚದೆ ಸಿ.ಸಿ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಸಾರ್ವಜನಿಕರ ಮಧ್ಯದಲ್ಲಿ ಮಲ್ಲಿಕಾರ್ಜುನ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನು ನೀನು ಕೇಳೋಕೆ ಯಾರು ನಾನು ಕೆಲಸ ಹಿಡಿದಿದ್ದು ಯಾಕೆ ಪ್ರಶ್ನೆ ಮಾಡುತ್ತೀಯಾ ಎಂದು ಸಲಕೆಯಿಂದ ಹಲ್ಲೆ ಮಾಡಿದ್ದು, ನನಗೆ ತುಂಭಾ ನೋವಾಗಿದೆ ಎಂದು ಮಲ್ಲಿಕಾರ್ಜುನ ಮಾಧ್ಯಮದ ಮುಂದೆ ಅಳಲು ತೋಡಿ ಕೊಂಡಿದ್ದಾರೆ.

ಬಿಜೆಪಿ ಮುಖಂಡ ನಕ್ಕುಂದಿ ಶರಣಪ್ಪಗೌಡ ಅವರೆ ನೀವು ಜೆಜೆಎಂ ಕೆಲಸ ಹಿಡಿದರೆ ಗ್ರಾಮಸ್ಥರು ಸರಿಯಾಗಿ ಕೆಲಸ ಮಾಡಿ ಅಂತ ಹೇಳಿದ್ದಕ್ಕೆ ಹಲ್ಲೆ ಮಾಡುತ್ತೀರಾ ಅಂದ ಮೇಲೆ ಬಿಜೆಪಿ ಕಲಿಸಿರುವ ನೀತಿ ಪಾಠ ಸಂಸ್ಕೃತಿ ಇದೇನಾ ನಿಮ್ಮ ನಕ್ಕುಂದಿ ಗ್ರಾಮದಲ್ಲಿರುವ ಜನರು ಹಲ್ಲೆ ಮಾಡಿರುವ ಘನ ಕಾರ್ಯಕ್ಕೆ ಜನರೆ ಛೀ ಮಾರಿ ಹಾಕುತ್ತಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ