ಗಿಡದ ಟೊಂಗೆಗಳಿಗೆ ನೀರಿನ ಬಟ್ಟಲು ಕಟ್ಟಿ ವಿಶ್ವ ಗುಬ್ಬಚ್ಚಿ ದಿನ ಆಚರಿಸಿದ ಭೀಮಣ್ಣ ಯಂಭತ್ನಾಳ.
ಮಾರ್ಕಬ್ಬಿನಹಳ್ಳಿ ಮಾರ್ಚ್.20

ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು.ಈ ಬಿಸಿಲು ಪಕ್ಷಿಗಳಿಗೂ ತಟ್ಟುತ್ತಿದೆ. ಇದನ್ನು ಮನಗಂಡು ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿಯ ಯುವಕ ಗಿಡಗಳ ಕಾವಲುಗಾರರಾದ ಭೀಮಣ್ಣ ಹಂಪಣ್ಣ ಯಂಭತ್ನಾಳ ಅವರು ಮಾರ್ಕಬ್ಬಿನಹಳ್ಳಿ ಕ್ರಾಸ್ ದಿಂದ ದೇವರ ಹಿಪ್ಪರಗಿ ಮಾರ್ಗ ಮದ್ಯ ರಸ್ತೆಯ ಬದಿ ಗಿಡದ ಟೊಂಗೆಗಳಿಗೆ 100 ಕ್ಕೂ ಹೆಚ್ಚು ಬಟ್ಟಲು ಕಟ್ಟಿ ವಿಶ್ವ ಗುಬ್ಬಚ್ಚಿ ದಿನ ಆಚರಿಸಿದ್ದಾರೆ. ಪಕ್ಷಿಗಳ ಅನುಕೂಲಕ್ಕಾಗಿ ಸ್ಟೀಲ್ ಬಟ್ಟಲು ತಂತಿ ಹಾಕಿ ಗಿಡದಲ್ಲಿ ಟೊಂಗೆಗಳಿಗೆ ಕಟ್ಟಿದ್ದಾರೆ. ಗಿಡಗಳಿಗೆ ಪಕ್ಷಿಗಳಿಗೆ ನೀರು ಹಾಕುತ್ತಿದ್ದಾರೆ.ದೇವರ ಹಿಪ್ಪಗಿ ಹೋಗುವ ಮಾರ್ಗದಲ್ಲಿ ರಸ್ತೆಯ ಬದಿಯಲ್ಲಿ ಬೇವಿನ ಮರ ಹಾಗೂ ಹಲವು ಗಿಡಗಳು ಇರುವುದರಿಂದ ನೆರಳು ಹುಡುಕಿ ಕೊಂಡು ಗುಬ್ಬಿಗಳು, ಹಕ್ಕಿಗಳು, ಕಾಗೆ ಹತ್ತಾರು ರೀತಿಯ ಪಕ್ಷಿಗಳು ಬರುತ್ತಿವೆ. ಪಕ್ಷಿಗಳಿಗೆ ನೀರಿನ ಬವಣೆ ನೀಗಿಸಲು ಮರದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಭೀಮಣ್ಣ ಮಾಡಿದ್ದಾನೆ.ಬೇಸಿಗೆ ಇರುವುದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಪಕ್ಷಿಗಳು ಮಧ್ಯಾಹ್ನದಲ್ಲಿ ಹೆಚ್ಚಿಗೆ ಕಂಡು ಬರುತ್ತವೆ. ಪ್ರತಿ ದಿನ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ರಾತ್ರಿ ನೀರು ಹಾಕುವ ಮೂಲಕ ಮೂಕ ಪಕ್ಷಿಗಳ ಬಾಯಾರಿಕೆ ತಣಿಸುವ ಪ್ರಯತ್ನ ಮಾಡಿದ್ದಾರೆ. ಭಿಮಣ್ಣ ಯಂಭತ್ನಾಳ ರವರು ಜನರ ಮೆಚ್ಚಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿಕಾಶಿನಾಥ ಯಾಳವಾರ ,ಶಿವು ರೊಳ್ಳಿ,ಪೂಜಾರಿ, ಇದ್ದರು.
ವರದಿ: ಮಹಾಂತೇಶ.ಹಾದಿಮನಿ.ವಿಜಯಪುರ