ಪಟ್ಟಣದಲ್ಲಿ ನಕಲಿ ಅಕ್ರಮ ಮದ್ಯ ಮಾರಾಟದ ಹಾವಳಿಗೆ – ಇನ್ನೇಷ್ಟು ಬಡವರ ಬಲಿ.
ಮಾನ್ವಿ ಫೆ.15





ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಕೂಡ ನಿದ್ರೆಗೆ ಜಾರಿದ್ರಾ ಅಬಕಾರಿಗಳು ಇಲ್ಲವೇ ಇವರ ಸಹಕಾರ ದಿಂದಲೇ ನಡೆಯುತ್ತಿದೆಯೇ ಈ ಅಕ್ರಮ ಮದ್ಯೆ ಮಾರಾಟ ಅನುಮಾನದ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಮಾನ್ವಿ ತಾಲೂಕಿನ ಕೆಲ ಪಾನ್ ಬಿಡಾ ಅಂಗಡಿ ಹಾಗೂ ತರಕಾರಿ ಅಂಗಡಿಗಳಲ್ಲಿ ಮನೆಗಳಲ್ಲಿ ಮದ್ಯ ಮಾರಾಟ ತಾಲೂಕಿನಲ್ಲಿ 24 ಗಂಟೆ ಮದ್ಯ ಮಾರಾಟ ಮಾಡುತ್ತಿದ್ದರು. ಕಣ್ಮುಚ್ಚಿ ಕುಳಿತಿರುವ ತಾಲೂಕ ಆಡಳಿತ ಮತ್ತು ತಾಲೂಕ ಅಬಕಾರಿ ಅಧಿಕಾರಿಗಳು ಕಣ್ತೇರೆದು ನೋಡಿ ಬಡವರ ಪ್ರಾಣವನ್ನು ಉಳಿಸುವ ಕೆಲಸವಾಗ ಬೇಕಾಗಿದೆ.
ನಕಲಿ ಮದ್ಯ ಮಾರಾಟಕ್ಕೆ ಈಗಾಗಲೇ ವಿವಿಧ ವಾರ್ಡುಗಳಲ್ಲಿ ಸುಮಾರು ಎಂಟು ಯುವಕರು ಬಲಿ ಯಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ವಿಶೇಷವಾಗಿ ಮಾನ್ವಿ ಪಟ್ಟಣದ ವಾರ್ಡ್ ನಂ 21 ರ ಜೈ ಭೀಮ್ ನಗರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಕುಡುಕರ ಹಾವಳಿ ಹೆಚ್ಚಾಗುತ್ತಿದೆ ಎಂದು ಜನರು ಮನೆಯಿಂದ ಆಚೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರು ಅದೆಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾರು ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟ ದಿಂದ ಪಕ್ಕದಲ್ಲಿಯೇ ಮೂರು ಶಾಲಾ ಕಾಲೇಜಿಗೆ ಹೋಗುವಂತ ಮಕ್ಕಳಿಗೆ ತೊಂದರೆ ಆಗುತ್ತಿದೆ ಕೂಡಲೇ ಕ್ರಮ ತೆಗೆದು ಕೊಂಡಿಲ್ಲಾ ಅಂದ್ರೆ ಅದೆಷ್ಟೋ ಜೀವಗಳಿಗೆ ಅಬಕಾರಿ ಅಧಿಕಾರಿ ಯಮನೂರ ಸಾಬ್ ನೇರ ಹೊಣೆಗಾರ ಆಗುತ್ತಾರೆ ಎಂದು ಸ್ಥಳೀಯರು ಹಿಡೀ ಶಾಪ ಹಾಕುತ್ತಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ