29 ಲಕ್ಷ ಅನುದಾನದಲ್ಲಿ ಹೈ ಮಾಸ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ – ಅಧ್ಯಕ್ಷೆ ಭಾಗ್ಯಶ್ರೀ ರೇವಡಿ.
ಹುನಗುಂದ ಫೆ.18

ಪಟ್ಟಣದ ಲಕ್ಷ್ಮೀ ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ 29 ಲಕ್ಷ ರೂ. ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಹೈ ಮಾಸ್ ಕಾಮಗಾರಿಗೆ ಪುರಸಭೆಯ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು. ಪೌರಾಡಳಿತ ಇಲಾಖೆ, ಜಿಲ್ಲಾ ಅಭಿವೃದ್ದಿ ಕೋಶ ಬಾಗಲಕೋಟ ಹಾಗೂ ಪುರಸಭೆ ಕಾರ್ಯಾಲಯ ಹುನಗುಂದ ಸಹಯೋಗದಲ್ಲಿ 2022-23 ನೇ. ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದ ಅಡಿಯಲ್ಲಿ ಪುರಸಭೆ ವ್ಯಾಪ್ತಿಯ ಲಕ್ಷ್ಮಿ ನಗರ ಸೇರದಂತೆ ವಿವಿಧ ಬಡಾವಣೆಗಳಿಗೆ ಹೈ ಮಾಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ವಿವಿಧ ಬಡಾವಣೆಗಳ ಸಾರ್ವಜನಿಕರ ಬಹು ದಿನದ ಬೇಡಿಕೆಯಾಗಿದ್ದ ಹೈ ಮಾಸ್ ಕಾಮಗಾರಿಗೆ ಸದ್ಯ ಭೂಮಿ ಪೂಜೆ ನೆರವೇರಿಸಿದ್ದು. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುತ್ತೆ. ಪುರಸಭೆ ಯಿಂದ ಪ್ರತಿ ವಾರ್ಡಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡುವ ಗುರಿ ಹೊಂದಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಮಾನ್ಯ ಶಾಸಕರಾದ ವಿಜಯಾನಂದ ಕಾಶಪ್ಪನವರ ಅವರಿಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಮನವಿ ಕೂಡ ಮಾಡಲಾಗಿದೆ. ಅನುದಾನ ಬಂದ ನಂತರ ಹಂತ ಹಂತವಾಗಿ ಪಟ್ಟಣದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಸದ್ಯ ಪಟ್ಟಣದ 7 ಹೈ ಮಾಸ್ ಕಾಮಗಾರಿ ಕೆಲಸ ಪ್ರಗತಿಯಲ್ಲಿದ್ದು ಕಾಮಗಾರಿ ಸಂಪೂರ್ಣವಾಗಿ ಮಗಿದ ನಂತರ ಮಾನ್ಯ ಶಾಸಕರು ಉದ್ಘಾಟಿಸಲಿದ್ದಾರೆ. ಪಟ್ಟಣದ ಅಭಿವೃದ್ದಿ ವಿಷಯದಲ್ಲಿ ಎಲ್ಲಾ ಸದಸ್ಯರಗಳನ್ನು ವಿಶ್ವಾಸ ಪಡೆದು ಪಟ್ಟಣದ ಅಭಿವೃದ್ದಿ ಪಡಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸದಸ್ಯರಾದ ಬಸವರಾಜ ಗೊಣ್ಣಾಗರ, ಮಹ್ಮದಲಿ ದೋಟಿಹಾಳ, ಮುಖಂಡರಾದ ಮಲ್ಲಿಕಾರ್ಜುನ ಹೂಗಾರ, ಹನಮಂತ ನಡುವಿನಮನಿ, ಶಾಂತಯ್ಯ ತಾವರಗೇರಿಮಠ, ಮಹಾಂತೇಶ ಚಿತ್ತವಾಡಗಿ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಅಭಿಯಂತರ ಜಿ.ಎಲ್. ಬಂಡಿವಡ್ಡರ,ಮಹಾAತೇಶ ತಾರಿವಾಳ, ಬಾಬು ಲೈನ್, ಹುಸೇನ ಭಾವಿಕಟ್ಟಿ ಸೇರಿದಂತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಉಪಸ್ಥಿತರಿದ್ದರು.
ಬಾಕ್ಸ್:-
ಶಾಸಕ ಕಾಶಪ್ಪನವರಿಂದ ಉದ್ಘಾಟನೆ,
ಪಟ್ಟಣದ 7 ಕಡೆಗೆ ನಿರ್ಮಿಸಲಾಗುತ್ತಿರುವ ಹೈ ಮಾಸ್ ಕಾಮಗಾರಿಗಳು ಅತ್ಯಂತ ಗುಣಮಟ್ಟ ದಿಂದ ಕೂಡಿರಲಿದೆ ಮತ್ತು ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸುವ ಮೂಲಕ ಹೈ ಮಾಸ್ ಕಾಮಗಾರಿಗಳು ಪೂರ್ಣ ಗೊಂಡ ಬಳಿಕ ಒಂದೇ ಬಾರಿಗೆ ಮಾನ್ಯ ಶಾಸಕರಿಂದ ಉದ್ಘಾಟಿಸ ಲಾಗುವುದು. ಭಾಗ್ಯಶ್ರೀ ರೇವಡಿ ಅಧ್ಯಕ್ಷರು ಪುರಸಭೆ ಹನಗುಂದ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ