ನಾಳೆ ಸಂಜೆ ಖ್ಯಾತ ನಟ ಚೇತನ್ ಕೂಡ್ಲಿಗಿಗೆ ಆಗಮನ – ಅಹಿಂಸಾ ರಿಂದ ಸಂವಾದ ಕಾರ್ಯಕ್ರಮ.
ಕೂಡ್ಲಿಗಿ ಫೆ.21

ಕನ್ನಡ ಚಲನಚಿತ್ರ ಕ್ಷೇತ್ರದ ಖ್ಯಾತ ನಟರು ಹಾಗೂ ಹೋರಾಟಗಾರರಾದ ಚೇತನ್ ಅಹಿಂಸಾ ರವರು ನಾಳೆ (ಫೆ.22ರಂದು) ಸಂಜೆ ಕೂಡ್ಲಿಗಿಗೆ ಆಗಮಿಸಲಿದ್ದಾರೆ. ಸಮಾನತೆ ಕರ್ನಾಟಕ ಸಂಘಟನೆಯ ವತಿಯಿಂದ ‘ಸಮಾನತೆಯ ಕರ್ನಾಟಕ ನಿರ್ಮಾಣದ ಭವಿಷ್ಯ’ ದ ಕುರಿತು ನಗರದಲ್ಲಿ ನಾಳೆ ಸಂಜೆ 7 ಗಂಟೆಗೆ ಹಮ್ಮಿಕೊಂಡಿರುವ ಸಂವಾದದಲ್ಲಿ ಯುವ ಹೋರಾಟಗಾರರಾದ ಚೇತನ್ ಅಹಿಂಸಾ ರವರು ಭಾಗವಹಿಸಿ, ಸಮಾನ ಮನಸ್ಕರಿಂದ ಎದುರಾಗುವಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ನಾಳೆ ನಡೆಯುವ ಈ ಸಂವಾದದಲ್ಲಿ ನಗರದಲ್ಲಿರುವ ವಿಚಾರವಂತರು. ಪ್ರಜ್ಞಾವಂತರು. ಪ್ರಬುದ್ಧರು. ವಿಶೇಷವಾಗಿ ವೈಚಾರಿಕತೆಯನ್ನು ಮೈಗೂಡಿಸಿ ಕೊಂಡಿರುವ ವಿದ್ಯಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯುವ ನಟ ಚೇತನ್ ಅಹಿಂಸಾ ರೊಂದಿಗೆ ಸಂವಾದದಲ್ಲಿ ಭಾಗವಹಿಸ ಬೇಕಾಗಿ ಕರ್ನಾಟಕ ಸಮಾನತೆ ಸಂಘಟನೆಯ ಚೇತನ್ ಅಹಿಂಸಾ ಆಪ್ತರು ಹಾಗೂ ಚೇತನ್ ಅಹಿಂಸಾ ಪೌಂಡೇಶನ್ ಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ ಸ್ಥಳ ಪ್ರವಾಸಿ ಮಂದಿರ ಕೂಡ್ಲಿಗಿ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ