ಮಕ್ಕಳೆಂದರೆ ಮಾಂಸದ ಮುದ್ದೆ, ಮುದ್ದೆಗಳ ಮಾತು ಆಲಿಸಿ ತ್ವರಿತ ಕ್ರಮ ಜರುಗಿಸುವರೋ – ಸಾರ್ವಜನಿಕರ ಕೈಯಲ್ಲಿ ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿ ಕೊಳ್ಳುವ ಸಮಯ ಸನ್ನಿಹಿತವಾದೀತು ಎಚ್ಚರ.
ಅಸಂತಪುರ ಫೆ.22

ದೇವರ ಹಿಪ್ಪರಗಿ ತಾಲೂಕಿನ ಅಸಂತಪುರ ಗ್ರಾಮದಲ್ಲಿ ಶಾಲೆಯ ಪಕ್ಕದಲ್ಲಿ ಚರಂಡಿಗಳು ತುಂಬಿ ಹರಿದರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇದರ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಮಾಡುವ ವೇಳೆಯಲ್ಲಿ ಗಬ್ಬು ವಾಸನೆ ಬರುತ್ತಿದ್ದರು ಇದರಿಂದ ನಮಗೆ ಕಾಯಿಲೆಗಳು ಬರುತ್ತವೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಮನವಿ ಕೂಡ ಮಾಡಿ ಕೊಂಡರು ಈಗಲಾದರೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಅಧ್ಯಕ್ಷರು ಈಗಲಾದರೂ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದರು.

ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಈ ಶಾಲೆಯ ಪಕ್ಕದಲ್ಲಿ ಚರಂಡಿ ಇರುತ್ತದೆ ಆ ಚರಂಡಿ ಒಳಗೆ ಹಂದಿಗಳ ಕಾಟ ಸೊಳ್ಳೆ ಕಾಟ ಮಧ್ಯಾಹ್ನದ ಬಿಸಿ ಊಟದ ಮಾಡುವ ವೇಳೆಯಲ್ಲಿ ನಮಗೆ ಬಹಳ ಗಬ್ಬು ವಾಸನೆ ಬರುತ್ತಿದೆ ಬೇಗನೆ ಸ್ವಚ್ಛ ಗೊಳಿಸ ಬೇಕು ಎಂದು ವಿದ್ಯಾರ್ಥಿಗಳು ಮನವಿಯನ್ನು ಮಾಡಿ ಕೊಂಡರು ವಿದ್ಯಾರ್ಥಿಗಳು ಶಾಲೆ ಕಂಪೌಂಡ್ ದಲ್ಲಿಹಾಗೂ ಬಿಸಿ ಊಟದ ಕೋಣೆಗೆ ಹತ್ತಿರ ದಲ್ಲಿರುವ ಚರಂಡಿ ಇದೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿ ಊಟ ಮತ್ತು ವಿದ್ಯಾಭ್ಯಾಸ ಮೂಗು ಮುಚ್ಚಿ ಕೊಂಡೆ ಮಾತಾಡುವಂತಾಗಿದೆ.

ಊರಿನ ಗ್ರಾಮಸ್ಥರು ಕೂಡ ಗ್ರಾಮ ಪಂಚಾಯತಿಯವರು ಬೇಗನೆ ಈ ಚರಂಡಿ ಸ್ವಚ್ಛ ಗೊಳಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ನಮ್ಮ ಶಾಲೆಯ ಪಕ್ಕದಲ್ಲಿರುವ ಚರಂಡಿ ಬೇಗನೆ ಸ್ವಚ್ಛ ಗೊಳಿಸಬೇಕು ಈ ಚರಂಡಿ ಯಿಂದ ದುರ್ವಾಸನೆ ಬರುತ್ತವೆ ವಿದ್ಯಾರ್ಥಿಗಳಿಗೆ ಕಾಯಿಲೆ ಬಂದರೆ ಆಸ್ಪತ್ರೆ ನಮ್ಮೂರಲ್ಲಿ ಇಲ್ಲ ಸರಕಾರ ಸ್ವಚ್ಛ ಭಾರತ ಎಂದು ಹೇಳುವುದು ಆದರೆ ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲಿ ಚರಂಡಿ ಗಬ್ಬು ವಾಸನೆಯಿಂದ ನಮಗೆ ಮಧ್ಯಾಹ್ನದ ಊಟ ಕೂಡ ಹೋಗೋದಿಲ್ಲ ಆದ್ದರಿಂದ ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಚರಂಡಿಗಳ ಸ್ವಚ್ಛ ಗೊಳಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿ ಕೊಂಡರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ