ಒಂದುಶಿಶು ಅಭಿವೃದ್ಧಿ ಕೇಂದ್ರದಲ್ಲಿ ಕಾಮ್ ಚೋರ್, ಶಿಕ್ಷಕಿಯರ ಕರ್ಮಕಾಂಡ ಬಯಲು – ಸ್ಥಳೀಯರ ಆಕ್ರೋಶ ವ್ಯಕ್ತ.
ಹೂವಿನ ಹಿಪ್ಪರಗಿ ಸ.02

ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 01 ಮತ್ತು 07 ಒಂದೇ ಸೂರಿನಡಿಯಲ್ಲಿ ಅಸಮರ್ಪಕವಾಗಿ ನಡೆಸುತ್ತಾ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು. ಇಂದು ನಮ್ಮ ಪತ್ರಿಕಾ ತಂಡವು ದಿನಾಂಕ 01/09/2025 ರಂದು ಮಧ್ಯಾಹ್ನ ಸಮಯ 3:00ಗೆ ಅಂಗನವಾಡಿ ಕೇಂದ್ರ ಸಂಖ್ಯೆ ಒಂದು ಮತ್ತು ಏಳರಲ್ಲಿ ಭೇಟಿ ನೀಡಿದಾಗ ಅಂಗನವಾಡಿ ಕೇಂದ್ರಗಳ ಬಾಗಿಲುಗಳನ್ನು ಹಾಕಿಕೊಂಡು ಮಧ್ಯಾಹ್ನ 12:00 ಗಂಟೆಗೆ ಮನೆಗೆ ಹೋಗಿದ್ದಾರೆಂದು ಗ್ರಾಮದ ಸ್ಥಳಿಯರು ತಿಳಿಸಿದರು. ಸರ್ಕಾರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶಿಶುಗಳಿಗೆ ಪೌಷ್ಟಿಕ ಆಹಾರ ನೀಡುವ ಸಲುವಾಗಿ ಮತ್ತು ಆ ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣವನ್ನು ನೀಡುವ ಸಲುವಾಗಿ ಸರ್ಕಾರ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಅಲ್ಲದೆ ಆ ಒಂದು ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಂಶ ನೀಡುವ ಸಲುವಾಗಿ ಕಾಳು ಕಡಿ ತರಕಾರಿ ಮೊಟ್ಟೆ ಮುಂತಾದವುಗಳನ್ನು ನೀಡಲು ಈ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುತ್ತಾ ಇಲ್ಲಿ ಕಾರ್ಯಕರ್ತರು ಹಾಗೂ ಸಹಾಯಕಿ ಅವರು ನೇಮಕ ಮಾಡಲಾಗಿರುತ್ತದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತಿದೆ.

ಆದರೆ ಇಲ್ಲಿ ಮಾತ್ರ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಮಕ್ಕಳಿಗೆ ಸರಿಯಾಗಿ ಆಹಾರವನ್ನು ಕೂಡ ವಿತರಿಸದೆ ಹಾಗೂ ಗರ್ಭಿಣಿ ಮಹಿಳೆಯರಿಗೂ ಕೂಡ ಸರಿಯಾಗಿ ಬಂದಿರುವ ಸೌಲಭ್ಯಗಳನ್ನು ಪೂರೈಸದೆ ಬೆಳಗಿನ ಜಾವ ತಮ್ಮ ಮಸ್ಸೋ ಇಚ್ಛೆ ಬಂದು ಬಾಗಿಲು ತೆರೆದು ಇಲ್ಲಿನ ಅಂಗನವಾಡಿ ಸಹಾಯಕಿ ಅವರು ನಾಲ್ಕೈದು ಮಕ್ಕಳನ್ನು ಕರೆದುಕೊಂಡು ಬಂದು ಜೀವಸತ್ವವಿಲ್ಲದ ಆಹಾರವನ್ನು ತಯಾರಿಸಿ ಅರ್ಧಂ ಬರ್ಧ ಬೆಂದ ಅಡಿಗೆಯನ್ನ ಮಕ್ಕಳಿಗೆ ತಿನ್ನಲು ಹೇಳಿ ಮಕ್ಕಳನ್ನು ಮನೆಗೆ ಕಳುಹಿಸಿ ಕೊಟ್ಟು ಬಿಡುತ್ತಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದರು. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರ ವೇತನವನ್ನು ತಡೆ ಹಿಡಿದು. ಇವರನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆಯನ್ನು ಮಾಡಿ ಇವರನ್ನು ಈ ಕರ್ತವ್ಯದಿಂದ ವಜಾ ಗೊಳಿಸ ಬೇಕೆಂದು ಸ್ಥಳೀಯ ಗ್ರಾಮಸ್ಥರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ನಿಂಗಪ್ಪ.ಬಿ. ಗೊರಗುಂಡಗಿ.ಬಸವನ ಬಾಗೇವಾಡಿ