ಅಂಜುಮನ್ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ – ಕಾರ್ಯಕ್ರಮ ಜರಗಿತು.
ರೋಣ ಫೆ.23

ಅಂಜುಮನ್ ಪ್ರೌಢ ಶಾಲೆಯಲ್ಲಿ 2024-25 ನೇ. ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡು ಸಮಾರಂಭವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎನ್ ಹುರಳಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾ ಪರೀಕ್ಷೆ ಬಹಳ ಸಮೀಪವಿದೆ ಉಳಿದ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪ್ರಯತ್ನ ಮಾಡಿ ಹೆಚ್ಚು ಅಂಕ ಪಡೆದು ಕೊಳ್ಳಲು ಪ್ರಯತ್ನಿಸಿ ಕಡಿಮೆ ಅಂಕ ಬಂದರೆ ಬೇಸರ ಬೇಡ ಜೀವನದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ವಿರುತ್ತದೆ ಜೀವನದಲ್ಲಿ ಒಳ್ಳೆಯ ವ್ಯಕ್ತಿಗಳಾಗಿರಿ ಪಾಲಕರಿಗೆ ಶಾಲೆಗೆ ಸಮಾಜಕ್ಕೆ ಕೀರ್ತಿ ತರುವಂತ ಕಾರ್ಯಗಳನ್ನು ಮಾಡಿ ಎಂದು ಹಾರೈಸಿದರು. ಈ ಸಮಯದಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಬಿ.ಆರ್ ಬೆಟಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಆರ್.ಎನ್ ಹುರಳಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಎನ್ ಅಬ್ಬಿಗೇರಿ ಉಪಾಧ್ಯಕ್ಷರಾದ ಎಸ್.ಎಸ್ ಖಾಜಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಾಯ್.ಆರ್ ಬೆನ್ಹಾಳ್ ಗುರುಗಳು ನಿರೂಪಣೆ ಮಾಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ಎ.ಆಯ್ ಶೇಖ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಆಯ್.ಎಂ ಕಾಂಟ್ರಾಕ್ಟರ್ ಗುರುಗಳು ವಂದನಾರ್ಪಣೆ ಮಾಡಿದರು. ಶಾಲಾ ಸಿಬ್ಬಂದಿಗಳಾದ ಎಂ.ಎ ಯಾದವಾಡ, ಆಯ್.ಎಂ ಬೇಸ್ಗರ, ಎನ್.ಆಯ್ ನಾಯಕ, ಎಸ್.ಕೆ ಪೂಜಾರ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ. ರೋಣ.ಗದಗ