ಶಾಲಾ ಕಟ್ಟಡ ನಿರ್ಮಾಣ ಇತಿಹಾಸ ದಾಖಲೆ – ಜಿ.ಎಚ್ ಶ್ರೀ ನಿವಾಸ್.
ತರೀಕೆರೆ ಫೆ.23

ತನಗೆ ಶಿಕ್ಷಣ ಕೊಟ್ಟ ಶಾಲೆಯನ್ನು ಪುನರ್ ನಿರ್ಮಾಣಕ್ಕೆ ಒಂದು ಕೋಟಿ ಹಣದೊಂದಿಗೆ ನೂತನವಾಗಿ ಶಾಲಾ ಕಟ್ಟಡದ ನಿರ್ಮಾಣಕ್ಕೆ ಕೈ ಹಾಕಿರುವ ಬಿ.ಬಿ.ಎಂ.ಪಿಯ ಮಾಜಿ ಕಾರ್ಪೊರೇಟರ್ ಡಾ. ಎಸ್ ರಾಜು ರವರ ನಿರ್ಧಾರ ಜನ ಮಾನಸದಲ್ಲಿ ಉಳಿಯುವ ಕಾರ್ಯ, ತರೀಕೆರೆಯ ಇತಿಹಾಸ ದಾಖಲೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಶನಿವಾರ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತರೀಕೆರೆ ಕ್ಷೇತ್ರದಲ್ಲಿ 18 ಶಾಲೆಗಳು ನೂರು ವರ್ಷ ತುಂಬಿದೆ ಎಂದು ಹೇಳಿದರು. ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಡಾ, ಎಸ್ ರಾಜು ಮಾತನಾಡಿ ಇಂದು ಈ ಶಾಲೆಯಲ್ಲಿ ಓದಿದ ನನ್ನ ಎಲ್ಲಾ ಸ್ನೇಹಿತರನ್ನು ನೋಡುವ ಭಾಗ್ಯ ನನ್ನದಾಗಿದೆ ಶಾಲೆಯ ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗಣಪತಿ ಪೂಜೆ, ಸರಸ್ವತಿ ಪೂಜೆ, ಹಾಗೂ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರುವುದು ನೆನಪಿಸಿ ಕೊಂಡರು.
ಮಾಜಿ ಪುರಸಭಾ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಆದ ಡಿ.ವಿ ಪದ್ಮರಾಜ್ ಮಿಲಿಟರಿ ಶ್ರೀನಿವಾಸ್, ಕಾರ್ಯದರ್ಶಿ ಹಾಗೂ ಕ.ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಟಿ.ಆರ್ ಬಸವರಾಜ್, ಅಶೋಕ್ ಕುಮಾರ್, ಮತ್ತು ಈ ಶಾಲೆಯ ನಿವೃತ್ತ ಶಿಕ್ಷಕರಾದ ರೇವಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಮಾತನಾಡಿದರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹಳೆಯ ವಿದ್ಯಾರ್ಥಿಗಳಾದ ವಗ್ಗಪ್ಪರ ಮಂಜುನಾಥ್, ರವಿಕುಮಾರ್, ಲೋಕೇಶ್, ಲಾಯರ್ ಮಹದೇವಸ್ವಾಮಿ, ಮಿಲ್ಟ್ರಿ ಕುಮಾರ, ಅರವಿಂದ, ಅಣ್ಣಪ್ಪ, ಲೋಕೇಶ್ ಹೀಗೆ ನೂರಾರು ಜನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ ಚನ್ನೋಜಿ ರಾವ್, ಹನುಮಂತಮ್ಮ, ರೇವಣ್ಣ ರವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶಕುಂತಲಾ ರವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು