ರಕ್ತದಲ್ಲಿ ಮುಖ್ಯ ಮಂತ್ರಿಗಳಿಗೆ ಪತ್ರ – ಬರೆದ ಯುವಕ.
ಲಗಳೂರು ಫೆ.23

ಗಜೇಂದ್ರಗಡ ಇಂದಿನ ಕಾಲದ ಯುವಕರು ಪ್ರೀತಿಗಾಗಿ, ತನ್ನ ಪ್ರೇಯಸಿಗಾಗಿ ರಕ್ತದಲ್ಲಿ ಪತ್ರ ಬರೆಯುವದನ್ನು ನೋಡಿದ್ದೇವೆ ಆದರೆ ಇಲ್ಲಿ ಯುವಕನೊಬ್ಬ ರಕ್ತದಲ್ಲಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ ಆ ಯುವಕ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ಹನಮಂತ ಈರಪ್ಪ ಲಗಳೂರು ಯುವಕ ಒಂದು ಅಭೂತ ಪೂರ್ವ ಸಾಮಾಜಿಕ ಕಾರ್ಯ ಯೋಜನೆ ಯೊಂದನ್ನು ಮಾಡಿದ್ದಾನೆ. ಅದು ಏನು ಅಂದ್ರೆ ಸಮಾಜ ಸೇವೆಗಾಗಿ ತನ್ನ ರಕ್ತವನ್ನು ಪತ್ರದ ರೂಪದಲ್ಲಿ ತೋರಿಸಿದ್ದಾನೆ ವಿಷಯ ಏನು ಅಂದ್ರೆ ಶ್ರೀ ಸಿದ್ದರಾಮಯ್ಯನವರು ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಪದವಿ ಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಘು ಉಪಹಾರ ಅಥವಾ ಬಿಸಿ ಊಟವನ್ನು ಕೊಡಬೇಕು ಮತ್ತು ಎಂಟ ನೇ. ತರಗತಿಯ ವಿದ್ಯಾರ್ಥಿಗಳಿಗೆ ಸೈಕಲನ್ನು ಕೊಡಬೇಕು ಎಂದು ಕೇಳಿ ಕೋಳ್ಳುತ್ತೇನೆ ಎಂದು ತನ್ನ ರಕ್ತದಿಂದ ತಾನೇ ಪತ್ರ ಬರೆದಿದ್ದಾನೆ.

ಹನುಮಂತನನ್ನು ನಮ್ಮ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್ ತಂಡವು ಭೇಟಿ ಮಾಡಿದಾಗ ಹಲವಾರು ಮಹತ್ವವಾದ ವಿಷಯಗಳನ್ನು ಹಂಚಿ ಕೊಂಡಿದ್ದಾನೆ ಇವರ ಈ ಕಾರ್ಯಕ್ಕೆ ನಮ್ಮ ಎಸ್ ಕೆ ನ್ಯೂಸ್ ಕನ್ನಡ ಚಾನೆಲ್ ತಂಡವು ಕೃತಜ್ಞತೆ ಸಲ್ಲಿಸುತ್ತದೆ. ಎಷ್ಟೋ ಜನರು ನಮಗೆ ಯಾಕೆ ಬೇಕು ನಮ್ಮ ಮನೆ, ನಮ್ಮ ಮಕ್ಕಳು, ಎಲ್ಲಾ ಚನ್ನಾಗಿ ಇದ್ದರೆ ಸಾಕು ಎನ್ನೋ ಕಾಲದಲ್ಲಿ ಇಂತಹ ಯುವಕರನ್ನು ನಾವು ಪ್ರೋತ್ಸಾಹ ಮಾಡಬೇಕು ಅಲ್ವಾ ಸ್ನೇಹಿತರೆ ಇವರ ಈ ಕಾರ್ಯಕ್ಕೆ ಜಯ ಸಿಗಲು ನಮ್ಮ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್ ತಂಡವು ಸದಾ ಬೆನ್ನೆಲು ಬಾಗಿರುತ್ತದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ.ರೋಣ.ಗದಗ