ತಾಲೂಕ ಆಡಳಿತದ ಅವ್ಯವಸ್ಥೆ ವಿರುದ್ಧ ಅಮೂಲಾಗ್ರ ಬದಾಲಾವಣೆಗೆ ಆಗ್ರಹಿಸಿ – ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಒತ್ತಾಯ.
ದೇವದುರ್ಗ ಫೆ.25

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೇವದುರ್ಗ ತಾಲೂಕಾ ಘಟಕ ಪದಾಧಿಕಾರಿಗಳು ಮತ್ತು ಅರಕೇರಾ ತಾಲೂಕ ಪದಾಧಿಕಾರಿಗಳ ಜಂಟಿ ನೇತೃತ್ವದಲ್ಲಿ ಅರಕೇರಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಸಂಬಂಧಪಟ್ಟ ತಾಲೂಕಾ ವೈದ್ಯರನ್ನು ಸ್ಥಳಕ್ಕೆ ಕರೆದು ತರಾಟೆಗೆ ತೆಗೆದು ಕೊಳ್ಳಲಾಯಿತು.ಆಸ್ಪತ್ರೆಯಲ್ಲಿ ರೋಗಿಗಳ ಸರಿಯಾದ ನಿರ್ವಹಣೆ ಮತ್ತು ಔಷಧ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಹೊರ ರೋಗಿಗಳ ಪರದಾಡುವಿಕೆ ಕುರಿತು ಹಿರಿಯ ತಾಲೂಕಾ ವ್ಯೆದ್ಯರ ಗಮನ ಸೆಳೆದು ಕೂಡಲೇ ಇನ್ನೂ ಇಬ್ಬರು ವ್ಯೆದ್ಯರನ್ನು ನೇಮಿಸಿ ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ಸರಿ ಪಡಿಸಬೇಕೆಂದು ಒತ್ತಾಯಿಸಲಾಯಿತು.ಇದಕ್ಕೆ ಮಾನ್ಯ ತಾಲೂಕ ವೈದ್ಯಾಧಿಕಾರಿಗಳು ನೀವು ಹೇಳಿರುವ ಬೇಡಿಕೆಗಳನ್ನು ಆದಷ್ಟು ಬೇಗನೆ ನಾನು ಸರಿ ಪಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಸದಸ್ಯರು ಮತ್ತು ಹಸಿರು ಸೇನೆ ದೇವದುರ್ಗ ತಾಲೂಕಾ ಘಟಕದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ.ಇಲಕಲ್ಲ.ಬಾಗಲಕೋಟೆ