ಸಾರ್ವಜನಿಕರು ಗ್ರಂಥಾಲಯದ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ – ಶಾಸಕ ಡಾ. ಶ್ರೀ ನಿವಾಸ್.
ಹೂಡೇಂ ಡಿಸೆಂಬರ್.2





ಗ್ರಂಥಾಲಯ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಸುಧಾರಣೆಯ ಚಿಂತನೆಗೆ ಬುತ್ತಿ ಆಗಬೇಕು. ಅಕ್ಷರ ಮೂಲಕ ಲೋಕದ ಅರಿವನ್ನು ವಿಸ್ತರಿಸಬೇಕೆಂದು ಶಾಸಕ ಡಾ ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಗಡಿ ಗ್ರಾಮ ಹೂಡೇಂ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಇದೊಂದು ಸುಸಜ್ಜಿತ ಕಟ್ಟಡವಾಗಿ ನಿರ್ಮಾಣಗೊಂಡಿದೆ. ಇಲ್ಲಿ ಒಳ್ಳೆಯ ಪುಸ್ತಕಗಳಿವೆ. ಸಾರ್ವಜನಿಕರು ಗ್ರಂಥಾಲಯದ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳ ಬೇಕು, ಇಲ್ಲಿನ ಗಡಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇದೆ. ಅಂತರಾಷ್ಟ್ರೀಯ ಮಟ್ಟದ ಏಕಲವ್ಯ ಶಾಲೆಯನ್ನು ಇಲ್ಲಿ ಸ್ಪಾಪಿಸಲಾಗುತ್ತದೆ. ಆ ಮೂಲಕ ಹೂಡೇಂ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಗುಣಮಟ್ಟದ ಜೀವನವನ್ನು ಬದಲಾಯಿಸುತ್ತದೆ. ಇಲ್ಲಿನ ಆರ್ಥಿಕ ಚಿತ್ರಣ ಬದಲಾವಣೆಯಾಗಲಿದೆ. ಹೂಡೇಂ ಗ್ರಾಮವನ್ನು ಒಂದು ಮಾದರಿಯಾಗಿ ರೂಪಿಸಬೇಕು. ಹೂಡೇಂ ಗ್ರಾಮದಿಂದ ಮುಷ್ಠಲಗುಮ್ಮಿವರೆಗೂ ಶಿಥಿಲಾವಸ್ಥೆಯಲ್ಲಿರುವ ರಸ್ತೆಗೆ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಮಟ್ಟದಲ್ಲಿ ರಸ್ತೆಗಾಗಿ ಸಾಕಷ್ಟು ಬಾರಿ ಪ್ರಯತ್ನಿಸಿದ್ದೇವೆ. ಭೂಮಿ ಪೂಜೆ ಮಾಡುವುದು ಅಷ್ಟೇ ಬಾಕಿ ಇದೆ ಎಂದೂ ಹೇಳಿದರು. *ಸಾರ್ವಜನಿಕರ ಅವಾಲು:* ಊರಿನ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಸೇರಿ ಗಡಿ ಭಾಗದ ಗ್ರಾಮಕ್ಕೆ ಒಂದು ನೂತನ ಕೆರೆ ನಿರ್ಮಿಸಿ ಕೊಡಬೇಕು, ಗಡಿಭಾಗದ ಜನರ ಆರೋಗ್ಯ ಹಿತ ದೃಷ್ಠಿಯಿಂದ ಆಸ್ಪತ್ರೆಗೆ ಒಂದು ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ವೈದ್ಯಾಧಿಕಾರಿಗಳ ನೇಮಕಕ್ಕೆ ಮುಂದಾಗಬೇಕು, ಹೂಡೇಂ ಗ್ರಾಮದಿಂದ ಹೊಸಹಳ್ಳಿ, ತಾಯಕನಹಳ್ಳಿ ಮುಷ್ಠಲಾಗುಮ್ಮಿ ರಸ್ತೆ ದುರಸ್ತಿ ಗೊಳಿಸಲು ಪ್ರಮುಖ ಬೇಡಿಕೆಗಳನ್ನು ಗ್ರಾಮಸ್ಥರು ಮನವಿ ಮಾಡಿ ಕೊಂಡರು. ಈ ವೇಳೆ ಶಾಸಕರು ಮಾತನಾಡಿ ಗಡಿಭಾಗದ ರಸ್ತೆಗಳು ತಾಯಕನಹಳ್ಳಿಯಿಂದ ಹೂಡೇಂ ಗೆ ಸಿಸಿ ರಸ್ತೆ ಅನುಮೋದನೆ ಆಗಿದೆ ಹಾಗೂ ಹೂಡೇಂ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಕೆಲವೇ ದಿನಗಳಲ್ಲಿ ಉದ್ಘಾಟನೆ ಗೊಳ್ಳಲಿದೆ ಎಂದರು.

ಈ ವೇಳೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವತಿಯಿಂದ ವಿವೇಕ ಯೋಜನೆ ಅಡಿಯಲ್ಲಿ ತಾಲೂಕಿನ ಕ್ಯಾಸನಕೆರಿ ಗೊಲ್ಲರಹಟ್ಟಿ, ಮಾಡ್ಲಕಹಳ್ಳಿ ಗೊಲ್ಲರಹಟ್ಟಿ, ಮಾಕನಡುಕು, ಚಿಕ್ಕಜೋಗಿಹಳ್ಳಿ ಗ್ರಾಮಗಳಲ್ಲಿ ಶಾಲೆ ಕೊಠಡಿ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಮಾಕನಡಕು ಗ್ರಾಮದ ಶಾಲೆಯಲ್ಲಿ ವಿದ್ಯುತ್ ಸಮಸ್ಯೆ, ಶಾಲಾ ತರಗತಿ ಕೊಠಡಿ ಕೊರತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಹಂತ ಹಂತವಾಗಿ ಇಡೇರಿಸುತ್ತೇವೆ. ಗುಣಮಟ್ಟದ ತರಗತಿ ಕೊಠಡಿಗಳು ನಿರ್ಮಾಣ ಆಗಬೇಕು. ಅವು ಸುಸಜ್ಜಿತವಾದ ಗಾಳಿ ಮತ್ತು ಬೆಳಕಿನಿಂದ ಕೂಡಿರ ಬೇಕು. ಪ್ರತಿ ಹಂತದಲ್ಲಿ ಶಾಲೆ ಕೊಠಡಿಗಳ ನಿರ್ಮಾಣವನ್ನು ನಾನು ಖುದ್ದಾಗಿ ಬಂದು ಪರಿಶೀಲನೆ ಮಾಡುವೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯರು, ಶಾಲೆ ಕೊಠಡಿ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಿ ರಾಮಚಂದ್ರಪ್ಪ, ತಾ.ಪಂ ಸದಸ್ಯ ಪಾಪ ನಾಯಕ, ಗ್ರಾ.ಪಂ ಸದಸ್ಯರಾದ ರಾಘವೇಂದ್ರ ಕೆ.ಎನ್, ಅಜ್ಜಣ್ಣ, ಕುಮಾರ್ ತಾಯಕನಹಳ್ಳಿ, ಪುಟ್ಟಮ್ಮ ಮಲ್ಲಿಕಾರ್ಜುನ್, ಶಶಿಕಲಾ ಜಯಣ್ಣ, ಎಲ್ಲಪ್ಪ, ಸುಂದರಮ್ಮ ಮಲ್ಲಿಕಾರ್ಜುನ್, ನಾಗಮ್ಮ ಗದ್ದಿ ಸ್ವಾಮಿ ಹಾಗೂ ಎಡಬ್ಲ್ಯೂ ಮಲ್ಲಿಕಾರ್ಜುನ್ ಹಾಗೂ ಊರಿನ ಮುಖಂಡರಾದ ಮೂರ್ತಿಪ್ಪ ಕೆ.ಟಿ, ಬೋಸಯ್ಯ, ಬಗ್ಲರ್ ಪಾಪಣ್ಣ, ಬೋಸ ಮಲ್ಲಯ್ಯ, ಜಿಪಿ ಅಶೋಕ್ ಪ್ರಥಮ ದರ್ಜೆ ಗುತ್ತಿಗೆದಾರರು, ಶಾಸಕರ ಆಪ್ತ ಸಹಾಯಕ ಎಂ ಮರಳಸಿದ್ದಪ್ಪ, ಪಿಡಿಒ ಲಕ್ಷ್ಮೀಬಾಯಿ, ಕಾರ್ಯದರ್ಶಿ ಚಂದ್ರಪ್ಪ, ತಿಪ್ಪೇರುದ್ರಪ್ಪ, ಗ್ರಂಥಾಲಯ ಮೇಲ್ಚಾಲಕರು ಗುರುರಾಜ್ ಸೇರಿದಂತೆ ಎಲ್ಲಾ ಶಾಲೆಯ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿಗಳು, ಸರ್ವ ಸದಸ್ಯರು, ಸಾರ್ವಜನಿಕರು, ಮುಖಂಡರು ಉಪಸಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ