ಒನಕೆ ಓಬವ್ವ ಉತ್ಸವಗೆ ಚಾಲನೆ ಕಲಾ ತಂಡಗಳಿಂದ – ಅದ್ದೂರಿ ಮೆರವಣಿಗೆ.

ಕೂಡ್ಲಿಗಿ ಫೆ.25

ಕೋಟೆ ಕೊತ್ತಲ ನಾಡು ಪಾಳೆಗಾರರ ನೆಲೆ ಬೀಡು ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವವು ಗ್ರಾಮದ ಹೊರ ವಲಯದಲ್ಲಿರುವ ಶಿವ ಪಾರ್ವತಿ ದೇವಸ್ಥಾನದಿಂದ ಶೋಭಾ ಯಾತ್ರೆಯಲ್ಲಿ ಮಹಿಳೆಯರು ಕಳಸ ಹೊತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೆ ಸಾಗಿದ್ದರು. ವಿವಿಧ ಕಲಾ ತಂಡದಿಂದ ಡೊಳ್ಳು ಕುಣಿತ ,ಕೋಲಾಟ , ವೀರಗಾಸೆ, ಹಾಗೂ ಎತ್ತಿನ ಬಂಡಿಯಲ್ಲಿ ಒನಕೆ ಓಬವ್ವನ ಭಾವ ಚಿತ್ರ ದೊಂದಿಗೆ ಪಾಳೆಗಾರರ ಕೋಟೆ ಕೊತ್ತಲ ಅರಮನೆಗಳ ಚಿತ್ರಗಳು ಎತ್ತಿನ ಗಾಡಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು.ನಮ್ಮ ತಾಲೂಕು ಕಲೆಯಲಿ ಶ್ರೀಮಂತ ನಾಡು ಒನಕೆ ಓಬವ್ವ ಉತ್ಸವವು ಅದ್ದೂರಿ ಕಾರ್ಯಕ್ರಮ ನಡೆಯಲೂ ಜನರ ಮತ್ತು ಅಧಿಕಾರ ವರ್ಗಗಳ ಸಹಕಾರ ಪ್ರಮುಖವಾಗಿದೆ ಈಗಾಗಲೇ ಐಟಿಐ ಕಾಲೇಜ್ ನಿರ್ಮಿಸಲು 14 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗಿದೆ.

ರಾಜ್ಯದ ಮೊದಲ ಬಾರಿಗೆ ಹುಣಸೆ, ಶೇಂಗಾ ಸಂಸ್ಕರಣಾ ಘಟಕಗಳ ಸ್ಥಾಪಿಸಲು ನಿರ್ಧಾರಲಾಗಿದೆ. ಗುಡೇಕೋಟೆ ಕೆರೆಯ ರಸ್ತೆ ಕಾಮಗಾರಿಗೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಎನ್.ಟಿ ಶ್ರೀನಿವಾಸ್ ಶಾಸಕರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.ಅಂಚೆ ಇಲಾಖೆ ವತಿಯಿಂದ ಅಂಚೆ ಲಕೋಟಿ ಬಿಡುಗಡೆಮೊದಲ ವರ್ಷದ ಒನಕೆ ಓಬವ್ವ ಸ್ಮಾರನಾತ್ಮಕವಾಗಿ 1.21 ಲಕ್ಷ ವೆಚ್ಚದಲ್ಲಿ ಅಂಚೆ ಲಕೋಟಿಯನ್ನು ಅಂಚೆ ಉತ್ತರ ವಲಯ ನಿರ್ದೇಶಕಿ ತಾರಾ ಮತ್ತು ಚಿದಾನಂದ ಅಂಚೆ ಅಧಿರೀಕರು ಅಂಚೆ ಇಲಾಖೆ ಸಹಯೋಗ ದೊಂದಿಗೆ ಬಿಡುಗಡೆ ಮಾಡಲಾಯಿತು.

ವಿಜಯನಗರ ಜಿಲ್ಲಾ ಆಡಳಿತ ಹಾಗೂ ತಾಲೂಕಾಡಳಿತ ಸಂಯೋಗದಲ್ಲಿ. ಕೋಟೆ ಕೊತ್ತಲಗಳ ನಾಡು, ಪಾಳೆಗಾರರ ನೆಲೆ ಬೀಡು ಓಬವ್ವಳ ತವರೂರಾದ ಗುಡೇಕೋಟೆಯಲ್ಲಿ. ನಾಡಿನ ವೀರನಾರಿ ಒನಕೆ ಓಬವ್ವ ಉತ್ಸವವನ್ನು, ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಎರೆಡು ದಿನಗಳ ಕಾಲ ಉತ್ಸವ ಆಚರಿಸಲಾಗುತ್ತಿದ್ದು, ಪ್ರಸಕ್ತವಾಗಿ ದ್ವಿತೀಯ ವರ್ಷದ ಒನಕೆ ಓಬವ್ವ ಉತ್ಸವ ಆಚರಿಸಲಾಗುತ್ತಿದೆ. ಮೊದಲ ದಿನದ ಉತ್ಸವ ಬಹು ವಿಜೃಂಭಣೆಯಿಂದ ನೆರವೇರಿತು. ಒನಕೆ ಓಬವ್ವ ಭಾವ ಚಿತ್ರವಿರುವ, ಹಾಗೂ ಒಬವ್ವಳ ಧಿರೂಸ್ಸು ತೊಟ್ಟ ಮಕ್ಕಳನ್ನು ಹೊಂದಿರುವ ವಾಹನದ ಮೆರವಣಿಗೆ ಜರುಗಿತು. ವಿವಿಧ ವಾದ್ಯ ವೃಂಧವುಳ್ಳ ಮೆರವಣಿಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ದಿಂದ ಆರಂಭವಾಯಿತು.

ಶಾಸಕರಾದ ಡಾ, ಎನ್.ಟಿ.ಶ್ರೀನಿವಾಸ್ ರವರು, ಪ್ರಮುಖ ಗಣ್ಯರ ಉಪಸ್ಥಿತಿಯೊಂದಿಗೆ ಚಾಲನೆ ನೀಡಿದರು. ಸರ್ಕಾರಿ ಪಿ.ಯು ಕಾಲೇಜಿನ ಆವರಣದಲ್ಲಿ, ಕಾರ್ಯಕ್ರದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತಹಶಿಲ್ದಾರರಾದ ಎಂ ರೇಣುಕಾ, ತಾಲೂಕು ಪಂಚಾಯಿತಿ ಇ.ಓ ನರಸಪ್ಪ, ಗುಡೇಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಕೃಷ್ಣ, ಜರ್ಮಲಿ ಇಮ್ಮಡಿ ಪಾಳೇಗಾರ ಸಿದ್ದಪ್ಪಪ್ಪ ನಾಯಕ ದೊರೆ, ಒನಕೆ ಓಬ್ಬವ ವಂಶಸ್ಥರಾದ ರಾಜಣ್ಣ, ಚಲವಾದಿ ಮಹಾಸಭಾ ಕೂಡ್ಲಿಗಿ ಅಧ್ಯಕ್ಷ ಮರಬನಹಳ್ಳಿ ಸಿ.ಮಾರಪ್ಪ, ಕಾನಮಡಗು ಶಶಿಧರ ಸ್ವಾಮಿ, ರಾಮದುರ್ಗ ಪಾಪಣ್ಣ, ಪಾಳೆಗಾರರ ರಾಜವಂಶರಾದ ಶಿವರಾಜ್ ವರ್ಮ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಪುರ ವೆಂಕಟೇಶ್, ಕೆಇಬಿ ಗೋವಿಂದಪ್ಪ, ಜೆ.ಎಂ ಬಸಣ್ಣ, ಅಂಚೆ ಇಲಾಖೆ ಅಧಿಕಾರಿ ಚಿದಾನಂದ ಪದ್ಮಶಾಲಿ, ಮುಖಂಡರಾದ ಎನ್ ಟಿ ತಮ್ಮಣ್ಣ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಗಳ ಮುಖಂಡರು ವೇದಿಕೆಯಲ್ಲಿದ್ದರು.ಕೂಡ್ಲಿಗಿ ಪಟ್ಟಣದ ನಾಗರೀಕರು ಸೇರಿದಂತೆ, ಗುಡೇಕೋಟೆ ಗ್ರಾಮಸ್ಥರು. ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಸಾವಿರಾರು ಸಾರ್ವಜನಿಕರು. ಗಣ್ಯರು, ವಿವಿಧ ವಾದ್ಯ ವೃಂಧಗಳು, ವಿವಿಧ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒನಕೆ ಓಬವ್ವ ಉತ್ಸವಕ್ಕೆ ಸಾಕ್ಷಿಯಾದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button