ಸಂಗೋಗಿಯಲ್ಲಿ ಜನಪದ ಶಿವರಾತ್ರಿಯ – ಸಂಭ್ರಮ ಕಾರ್ಯಕ್ರಮ ಜರಗಿತು.
ಸಂಗೋಗಿ ಫೆ.26


ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ಇಂದು ಜನಪದ ಶಿವರಾತ್ರಿ ಹಬ್ಬದ ನಿಮಿತ್ಯ ವಿವಿಧ ಭಜನಾ ಡೊಳ್ಳು ಕುಣಿತ, ಗೋಂದಳಿ ಪದಗಳು ಡೊಳ್ಳಿನ ಪದಗಳು ಲಾಗ್ಕುಣಿತಗಳು ಜರೂಗಿದವು ಕಾರ್ಯಕ್ರಮದ ಪಾವನ ಸಾನಿಧ್ಯ ಅಭಿನವ ಮುರುಗೇಂದ್ರ ಶಿವಾಚಾರ್ಯರು ವಹಿಸಿ ಜನಪದ ಸಾಹಿತ್ಯ ಎಲ್ಲಿಯವರೆಗೆ ಭಾರತದಲ್ಲಿ ಹಳ್ಳಿಗಳು ಇರುತ್ತದೋ ಅಲ್ಲಿಯವರೆಗೆ ಜನಪದ ಇದ್ದೇ ಇರುತ್ತದೆ.

ಅದು ಭಾರತೀಯರ ಆಚಾರ ವಿಚಾರ ಸಂಪ್ರದಾಯ ಸಂಸ್ಕೃತಿ ಬಿಂಬಿಸುವ ಅತ್ಯುತ್ತಮ ಕಾರ್ಯ ಕನ್ನಡ ಜಾನಪದ ಪರಿಷತ್ ಮಾಡುತ್ತದೆ ಜನರ ದಣಿವು ದುಃಖ ಹಂಚಿ ಕೊಳ್ಳಲು ಮತ್ತು ರೈತರು ದಣಿವು ಆಗದಂತೆ ಹಾಡು ಕುಣಿತ ನೃತ್ಯ ಮುಂತಾದ ಕಲೆಗಳೆ ಜನಪದರ ಜೀವಾಳ ಇದನ್ನು ಮುಂದಿನ ತಲೆ ಮಾರುಗಳಿಗೆ ಸಾಗಿಸುವ ಕೆಲಸ ಜನಪದ ಪರಿಷತ್ ಮಾಡುವುದು ಗುರುತರ ಜವಾಬ್ದಾರಿ ಎಂದು ಮಾತನಾಡಿದರು ಅಧ್ಯಕ್ಷತೆ ಪಂಡಿತ ಅವಜಿ ವಹಿಸಿ ಮಾತನಾಡಿದ ಜನಪದರ ಹಾಡುಗಳೆ ಜನಪದ ಜೀವಾಳ ಎಂದು ಹೇಳಿದರು.

ಕಲ್ಲಪ್ಪಗೌಡ ಪಾಟೀಲ ಉದ್ಘಾಟಿಸಿದರು ಆನಂದ ಕೆಂಬಾವಿ ಹಣಮಂತ ಬಿಸನಾಳ ಶ್ರೀಮಂತ ಬಿಸನಾಳ ಇದ್ದರೂ ಬಸವೇಶ್ವರ ಭಜನಾ ಸಂಘ ಅಮೋಘಸಿದ್ದ ಹೊಳ್ಳಿನಪದ ಸಂಗಮೇಶ್ವರ ಭಜನಾ ಸಿದ್ಧಾರೂಡ ಭಜನಾ ಸಂಘ ಮುಂತಾದ ಸಂಘದವರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರಾಗಿದವು ಜಟ್ಟೆಪ್ಪ ಮಾದರ ನಿರೂಪಿಸಿ ಸ್ವಾಗತಿಸಿದರು ಸುಭಾಶ್ಚಂದ್ರ ನಾವಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ