“ನಿತ್ಯಂ ಧ್ಯಾನಂತಿಯೋಗಿನಃ ಮಹಾ ಶಿವರಾತ್ರಿ ಪುಣ್ಯ ಫಲಂ ಲಭ್ಯಂ”…..

ಓಂಕಾರಂ ಶಿವಶಂಕರ ಮಂಗಳಕರ ಶುಭಕರಂ
ದೇವ ಮಹಾದೇವಂ
ಶ್ರೇಷ್ಠ ಭಾವದ ಅಧಿಪತಿಂ
ಜೀವಸಂಕುಲಗಳ ರಕ್ಷಿಪಂ
ವಿಶ್ವ ಮಾನವ ಕುಲದ ಅರ್ದನಾರೀಶ್ವರಂ
ಮನಶಾಂತ ರೌದ್ರಂ ಗುಣ ನಾಶಕಂ
ಆದಿಯೋಗಿ ಆಧ್ಯಾತ್ಮಿಕ ವೈರಾಗ್ಯಂ
ವೀರಾಗಿ ದುಷ್ಟ ಸಂಹಾರಕಂ
ವಾಸುಕಿ ಮುಕ್ಕಣ್ಣ ಗಂಗಾಧರಂ
ಸ್ವಚ್ಛ ಹೃದಯ ಮಂದಿರದೊಳ ವಾಸಂ
ಶಿಷ್ಟ ರಕ್ಷಕಂ ತ್ರಿಶೂಲ ವೀರಭದ್ರ ಮಹೇಶ್ವರಂ
ಶುದ್ಧ ಮನದಿ ನೆನೆವಂಗೆ ಸದಾಶಿವಂ
ನಟರಾಜ ಆತ್ಮದ ಪರಮಾತ್ಮಂ
ಶುದ್ಧಾತ್ಮಜರ ಈಶ್ವರ ಲಿಂಗರೂಪಂ
ಜಗತ್ ಮಧ್ಯ ಸೋಮಶೇಖರ ಬೆಳಕಂ
ಸರ್ವಭಕ್ತರ ಸಲಹು ನಂದೀಶಂ
ಮಹಾ ಶಿವ ಅನುಕೂಲಕರ ಶುಭಕರಂ
ಶಂಭೋ ವರಪ್ರದಾಯಂ
ನಂಬಿದವರ ಶುಭಧಾಯಕಂ
ನಿಷ್ಕಲ್ಮಶ ಭಕ್ತಿ ಶಕ್ತಿಯುಕ್ತಂ
ಸೃಷ್ಠಿಕರ್ತ ಶಿವಶಂಕರಂ
ಶುದ್ಧ ಸಾತ್ವಿಕ ರಜಸ ತಮಸ್ಸು
ಶಂಬೋ ಶಂಕರ ಹರ ಹರ ಬಲಂ
ಬಾಳ್ವೇಗೆ ಮಹಾಬಲಂ
ಮಹಾಕಾಲ ನೀಲಕಂಠಂ
ಸರ್ವೋಚ್ಛ ನಿರ್ಗುಣ ನಿರಾಕಾರಂ
ಜ್ಯೋತಿರ್ಲಿಂಗ
ಪರಮಶಿವ ಅನಂತ ಸ್ವರೂಪಂ
ಜಗದ್ವಿಖ್ಯಾತ ಸೋಮನಾಥಾಯ
ಶ್ರೀಶೈಲ ಮಲ್ಲಿಕಾರ್ಜುನಂ
ಮಹಾಕಾಳೇಶ್ವರ ಓಂಕಾರೇಶ್ವರ
ಕೇದಾರನಾಥ ಭೀಮಾಶಂಕರಂ
ಕಾಶೀವಿಶ್ವನಾಥ ತ್ರ್ಯಂಬಕೇಶ್ವರ
ವೈದ್ಯನಾಥ ರಾಮೇಶ್ವರಂ
ಗೃಷ್ಣೇಶ್ವರ ದರ್ಶನಂ ಜೀವನ ಪಾವನಂ
ಓಂ ನಮಃ ಶಿವಾಯ
ಶುದ್ಧ ಮನಗಳಂ ಕ್ಷಣ ಕ್ಷಣನೆನವು
ಶಿವನೊಲಿಮೆ ನಿತ್ಯಂ ಧ್ಯಾನಂತಿಯೋಗಿನಃ
ಓಂಕಾರಾಯ ನಮೋನಮಃ
ಮಹಾ ಶಿವರಾತ್ರಿ ಪುಣ್ಯ ಫಲಂ ಲಭ್ಯಂ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.