ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ – ಶಾಸಕ ಹಂಪಯ್ಯ.ನಾಯಕ.
ಮಾನ್ವಿ ಸ.23





ನಗರವನ್ನು ಸ್ವಚ್ಛವಾಗಿಡುವ ಸೇವೆ ಯಾರು ಮಾಡುವುದಕ್ಕಾಗಲ್ಲ ಯಾಕಂದರೆ ಪುರಸಭೆಯ ಪೌರ ಕಾರ್ಮಿಕರು ಚಳಿ ಗಾಳಿ ಮಳೆ ಎನ್ನದೆ ಮುಂಜಾನೆ ಎದ್ದು ಸೇವೆ ಸಲ್ಲಿಸುವುದು ನೋಡಿದರೆ ನಗರ ಸೈನಿಕರು ಎಂದು ಶಾಸಕ ಹಂಪಯ್ಯ ನಾಯಕ ಬಣ್ಣಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಸೇವೆ ಮಾಡುತ್ತಾರೆ ಆದರೆ ಅವರಿಗಾಗಿ ದಿನಾಚರಣೆ ಇರುವ ಕಾರ್ಯಕ್ರಮ ಮೆಚ್ಚುವಂತದ್ದು, ಪೌರ ಕಾರ್ಮಿಕರ ಪರವಾಗಿ ಸರಕಾರ ಇರುತ್ತೆ ನಾನು ಶಾಸಕನಾಗಿದ್ದರು ಸಹ ಅವರ ಪರವಾಗಿ ಸೌಲಭ್ಯ ಕೊಡಿಸುವ ಕೆಲಸ ಮಾಡುವೆ ಎಂದರು.
ಪುರಸಭೆಯ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ದೊರೆ ಮಾತನಾಡಿ, ಪೌರ ಕಾರ್ಮಿಕರು ಅಂದರೆ ಮುಂಜಾನೆ ಎದ್ದು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಅಂದರೆ ಅವರ ಸೇವೆಗೆ ನಾವೆಲ್ಲರೂ ಚಿರರುಣಿಯಾಗಬೇಕು ಎಂದರು.
ಪೌರ ಕಾರ್ಮಿಕರ ಪರವಾಗಿ ಮಾನ್ವಿ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಸಹ ಇರುತ್ತಾರೆ.ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕು0ದಿ.ಮಾನ್ವಿ