“ನಗು ಆಯುಷ್ಮಾನದ ಗರಿ”…..

ಪುಸ್ತಕ ಓದುವ ಹವ್ಯಾಸವು
ಮಸ್ತಕದ ಬುದ್ಧಿಸಿದ್ದಿ
ಅಂತರಾತ್ಮದ ಅರಿವು
ನಿಜ ಸ್ನೇಹ ಸಿರಿ
ಪ್ರಾಮಾಣಿಕ ನಿಷ್ಠೆಯ ಕಾಯಕ
ಬದುಕಿನ ಸಂತೃಪ್ತಿ
ಹೆತ್ತವರ ಸೇವೆಯು ಭಾಗ್ಯದ ಗರಿ
ಜನ್ಮಧಾತರ ಏದಿರು ಅಹಂ ಧ್ವನಿ
ಕಸಕಿಂತ ಕಡಿ
ಗೌರವದಿ ಭಾಗುವವ ನಿಜ
ಅಪರಂಜಿ
ಅನಾವಶ್ಯಕ ವಿಚಾರವು ದೇಹ
ಮನದ ಆರೋಗ್ಯ ಹಾನಿ
ಜಗದಲಿ ಸಣ್ಣಸಣ್ಣ ಸಹಾಯಗುಣ
ಸುಂದರ ಬಾಳಿನ ಗುರಿ
ಕಲ್ಮಶವಿಲ್ಲದ ಮನದ ಮುಗುಳು
“ನಗು ಆಯುಷ್ಮಾನದ ಗರಿ”
ಅಧಿಕತಮ ಸ್ನೇಹ ಬಳಗಕಿಂತ
ಏಕೋಭಾವದಿ ಸ್ಪಂದಿಸುವವ
ನಿಜ ಶ್ರೇಷ್ಠ ಜೀವಿ
ಚೋಟಿಗೊಬ್ಬ ಸ್ವಾರ್ಥ
ಲೇಪಿತ ದಾನವ
ಕೋಟಿಗೊಬ್ಬ ನೈತಿಕತೆಯ
ಮಾನವ ರೂವಾರಿ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.