ಪೌರ ಕಾರ್ಮಿಕರು ನಗರದ ಸ್ವಚ್ಛತೆಯನ್ನು ಕಾಪಾಡುವರು, ಅವರು ತಮ್ಮ ಕಾಯಕದಲ್ಲಿ ನಿಷ್ಠಾವಂತರು – ಅಂತಹವರನ್ನು ಗೌರವಿಸುವುದು ಮಹಾನ್ ಕಾರ್ಯವಾಗಿದೆ.
ಇಲಕಲ್ಲ ಫೆ.28

ಇಲ್ಲಿನ ದೃಡ ಸಂಕಲ್ಪ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಇಲಕಲ್ಲ (ರಿ) ಇವರ ಸಂಕಲ್ಪ ಫೌಂಡೇಶನ ಇಲಕಲ್ಲ ವತಿಯಿಂದ ರಸಮಂಜರಿ ಕಾರ್ಯಕ್ರಮ ಜರುಗಿತು, ಈ ಸಂದರ್ಭದಲ್ಲಿ ನಗರ ಸಭೆಯ ಪೌರ ಕಾರ್ಮಿಕರಿಗೆ ಸತ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹುನಗುಂದ ಕ್ಷೇತ್ರದ ಜನಪ್ರೀಯ ಶಾಸಕರಾದ ಡಾ, ವಿಜಯಾನಂದ.ಎಸ್ ಕಾಶಪ್ಪನವರ ಉದ್ಘಾಟಿಸಿದರು.

ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಪೌರ ಕಾರ್ಮಿಕರು ನಗರದ ಸ್ವಚ್ಛತೆಯನ್ನು ಕಾಪಾಡುವವರು, ಅವರು ತಮ್ಮ ಕಾಯಕದಲ್ಲಿ ನಿಷ್ಠಾವಂತರು ಅಂತಹವರನ್ನು ಗೌರವಿಸುವುದು ಮಹಾನ್ ಕಾರ್ಯವಾಗಿದೆ ಈ ನಿಟ್ಟಿನಲ್ಲಿ ದೃಡ ಸಂಕಲ್ಪ ಫೌಂಡೇಶನ ಇಲಕಲ್ಲ ಅತ್ಯುತ್ತಮ ಕೆಲಸ ಮಾಡಿದೆ ಎಂದು ಹೇಳಿದ ಶಾಸಕರು ಅದರ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಸಾನಿಧ್ಯ ವಹಿಸಿದ ನಿತ್ಯ ದಾಸೋಹ ಮಠದ ಶ್ರೀ ಕ್ಷೇತ್ರ ಸಿದ್ದನಕೊಳ್ಳದ ಶ್ರೀಗಳಾದ ಡಾ, ಶಿವಕುಮಾರ ಸ್ವಾಮೀಜಿಗಳು ಆಶೀರ್ವಚನ ನೀಡಿದರು, ಫೌಂಡೇಶನ ವತಿಯಿಂದ ಬೆಳಿಗ್ಗೆ ರಕ್ತದಾನ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಧಾರಾಣಿ ಸಂಗಮ, ಯೋಜನಾ ಪ್ರಾದಿಕಾರದ ಅಧ್ಯಕ್ಷ ಶ್ರೀ ರಾಘವೇಂದ್ರ ಚಿಂಚಮಿ, ನಗರ ಸಭೆಯ ಸದಸ್ಯರಾದ ಶ್ರೀ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮಲ್ಲು ಮಡಿವಾಳರ, ಫೌಂಡೇಶನ ನಗರ ಘಟಕದ ಅಧ್ಯಕ್ಷ ಈರಣ್ಣ ನಾಗರಹಾಳ, ಯಮನೂರ ಗುಡಿಹಿಂದಿನ, ರಾಜು ಚಲವಾದಿ ಮತ್ತಿತರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ