ಮಾದಿಗ ಸಮುದಾಯದ ನಾಯಕರು ಆತ್ಮಾವಲೋಕನ – ಮಾಡಿ ಕೊಳ್ಳಬೇಕು.
ಕುಷ್ಟಗಿ ಮಾ.04

ಮಾದಿಗ ಸಮುದಾಯಕ್ಕೆ ಅಗತ್ಯ ಮತ್ತು ಅನಿವಾರ್ಯತೆ ಇರುವ ಈ ಒಳ ಮೀಸಲಾತಿ ವಿಷಯದಲ್ಲಿ ಇಡೀ ರಾಜ್ಯದಲ್ಲಿ ಎಲ್ಲಾ ಹಿರಿಯರು ಮುಖಂಡರು ನಾಯಕರುಗಳಲ್ಲಿ ಒಳ ಮೀಸಲಾತಿ ಜಾರಿ ಆಗಲೇ ಬೇಕು ಮತ್ತು ಇದರಿಂದ ಮಾತ್ರ ನಮ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ ಎಂಬುದರ ಬಗ್ಗೆ ಒಮ್ಮತದ ಅಭಿಪ್ರಾಯ ಖಂಡಿತ ಇದೆ ಆದ್ರೇ ಮಾದಿಗ ಸಮುದಾಯಕ್ಕೆ ಒಗ್ಗಟ್ಟಿನ ಕೊರತೆಯಿದೆ ಮಾದಿಗ ಸಮುದಾಯದ ಉತ್ತರ ಕರ್ನಾಟಕ ಭಾಗದ ನಾಯಕರು ದಕ್ಷಿಣ ಭಾಗದ ನಾಯಕರು ಬೇರೆ ಬೇರೆ ಜಿಲ್ಲೆಗಳಲ್ಲಿ ಈ ರಾಜಕೀಯ ಕಾರಣಕ್ಕಾಗಿ ಮತ್ತು ವೈಯಕ್ತಿಕ ಹಿತಾಸಕ್ತಿಗಳ ಕಾರಣಕ್ಕೆ ಗುಂಪು ಗುಂಪಾಗಿ ಚೆದುರಿ ಹೋದಂತೆ ಕಾಣುತ್ತದೆ. ಈ ಎರೆಡು ಮುಖ್ಯ ಕಾರಣಗಳಿಂದ ಒಳ ಮೀಸಲಾತಿ ಜಾರಿ ಆಗಲು ವಿಳಂಬ ಆಗುತ್ತಿದೆ. ಈ ಮೇಲಿನ ಕಾರಣಗಳಿಂದ ಸರ್ಕಾರಕ್ಕೆ ಮತ್ತು ಅನ್ಯ ಸಮುದಾಯದ ನಮ್ಮ ವಿರೋಧಿಗಳಿಗೆ ನಮ್ಮ ಬಗ್ಗೆ ಭಯವಿಲ್ಲ ಮತ್ತು ಈ ಮಾದಿಗರು ನಮಗೇನು ಮಾಡ್ಯಾರ ಎಂದು ಎಂಬ ಉದಾಸೀನತೆ ಕಾಣುತ್ತದೆ ಏಕೆಂದರೆ ಮಾದಿಗರು ಒಗ್ಗಟ್ಟು ಇಲ್ಲಾ ಎಂದು ಅವರಿಗೆ ಮನವರಿಕೆ ಆಗಿದೆ.
1) ಮಾದಿಗ ಸಮುದಾಯದ ಒಗ್ಗಟ್ಟು ಹೊಡೆದು ಹೋಗಿದಿಯೇ?
2) ಮಾದಿಗ ಸಮುದಾಯದ ಒಗ್ಗಟ್ಟು ಹೊಡೆದು ಹೋಗಲು ಕಾರಣಗಳೇನು
3) ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷ ಮಾತ್ತು ಬಿಜೆಪಿ ಪಕ್ಷ ಇತರ ಪಕ್ಷಗಳ ಮುಖಂಡರುಗಳನ್ನು ನಮ್ಮ ಮಾದಿಗ ಸಮಾಜ ಹಿರಿಯ ನಾಯಕರು ಒಳ ಮೀಸಲಾತಿ ಹೋರಾಟಗಾರರು ಬುದ್ದಿ ಜೀವಿಗಳು ಒಂದೆಡೆ ಸೇರಿ ಪ್ರಶ್ನೆ ಮಾಡಬೇಕು ಮತ್ತು ಯಾವ ರೀತಿಯಲ್ಲಿ ಈ ಒಳ ಮೀಸಲಾತಿ ಜಾರಿಗೆ ಒಂದು ಅಂತಿಮ ರೂಪ ಕೊಡಲು ಪ್ರಯತ್ನ ಮಾಡಬೇಕು
4) ಮಾದಿಗ ಸಮುದಾಯಕ್ಕೆ ಒಗ್ಗಟ್ಟಿನ ಒಂದೇ ಒಂದು ಹೋರಾಟಕ್ಕೆ ಕೇವಲ ಒಂದು ವೇದಿಕೆ ಸಜ್ಜಾಗಬೇಕು ಮತ್ತು ಅಲ್ಲಿ ಸಮುದಾಯದ ಎಲ್ಲಾ ಹಿರಿಯ ನಾಯಕರು ಮತ್ತು ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸ ಬೇಕು ಇನ್ನೂ ಅನೇಕ ರೀತಿಯಲ್ಲಿನ ನಮ್ಮ ಒಳಗಿನ ಸಮಸ್ಯೆಗಳಿಗೆ ನಾವೇ ಪರಿಹಾರಕ್ಕೆ ಕ್ರಮ ದಾರಿಗಳನ್ನು ಕಂಡು ಕೊಳ್ಳುಬೇಕು.ಮಾದಿಗ ಸಮುದಾಯದ ಹಿರಿಯ ನಾಯಕರುಗಳು ಸಮಸ್ತ ಮುಖಂಡರು ಬುದ್ದಿ ಜೀವಿಗಳು ಸುಮಾರು ಮೂವತ್ತು ವರ್ಷಗಳ ಹಿಂದಿನಿಂದಲೂ ಒಳ ಮೀಸಲಾತಿ ಜಾರಿಗಾಗಿ ಸಾಕಷ್ಟು ಪ್ರಮಾಣದಲ್ಲಿ ಹೋರಾಟ ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮ ವಹಿಸಿ ದುಡಿದಿದ್ದಾರೆ ಆದರೇ ಈ ಸುಪ್ರೀಂ ಕೋರ್ಟ್ ಆದೇಶ ಬಂದು ನಮ್ಮ ಸಮುದಾಯಕ್ಕೆ ಆಶಾಕಿರಣ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಒಂದು ಸಾರಿ ವಿಚಾರ ಮಾಡಿ ನೋಡಿ ಆತ್ಮಾವಲೋಕನ ಮಾಡಿ ಕೊಳ್ಳಬೇಕು ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ಅರ್ಥೈಸಿ ಕೊಳ್ಳಿದಿದ್ದರೆ ನಮ್ಮಗಳಿಗೆ ಉಳಿಗಾಲವಿಲ್ಲ ಎಚ್ಚರಿಕೆ ನಮ್ಮ ಯುವ ಪೀಳಿಗೆಗಾಗಿ ಅವರ ಭವ್ಯ ಭವಿಷ್ಯಕ್ಕಾಗಿ ಒಂದು ದೃಢ ಸಂಕಲ್ಪದ ನಿಲುವು ತಳೆಯಲೇ ಬೇಕು ಜೈ ಮಾದಿಗ, ಜೈ ಕೃಷ್ಣಪ್ಪ, ಜೈ ಅಂಬೇಡ್ಕರ್,…..