ಮಾಜಿ ಸಂಸದ ಚಂದ್ರಪ್ಪ ನವರಿಗೆ – ಛಲದಂತಕ ಮಲ್ಲನಾದ ಮಾಜಿ ಸಚಿವ ಎಚ್ ಆಂಜನೇಯ.
ಲಿಂಗದಹಳ್ಳಿ ಮಾ.04





ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ನಡೆದ ನೂತನ ದೇವಾಲಯ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಚಿತ್ರದುರ್ಗದ ಮಾಜಿ ಸಂಸಾದರಾದ ಬಿ.ಎನ್ ಚಂದ್ರಪ್ಪ ರವರು ಪ್ರಸ್ತುತ ರಾಜಕೀಯ ವಿಚಾರದಲ್ಲಿ ಗ್ರಾಮ ಪಂಚಾಯತ, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಗಳನ್ನು ಗೆಲ್ಲುವುದು ಬಹಳ ಕಷ್ಟಕರ ಇಂಥ ಸನ್ನಿವೇಶದಲ್ಲಿ 2014 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ವನಾದ ನನ್ನನ್ನು ಚಿತ್ರದುರ್ಗ ಸಂಸದನನ್ನಾಗಿ ಮಾಡಿದ ಕೀರ್ತಿ ಮಾಜಿ ಸಚಿವರಾದ ಆಂಜೆನಣ್ಣ (ಎಚ್. ಆಂಜನೇಯ) ಸಲ್ಲುತ್ತದೆ, ಅoಬೇಡ್ಕರ್, ಗಾಂಧೀಜಿ ಇಂದಿರಾ ಗಾಂಧಿ ಅಂತಹ ಮಹಾನ್ ನಾಯಕರು ಅಧಿಕಾರ ನಡೆಸಿದ ಪಾರ್ಲಿಮೆಂಟಿಗೆ ಕಳುಹಿಸಿದ ಕೀರ್ತಿ ಎಂದೆಂದಿಗೂ ಆಂಜೆನಣ್ಣಗೆ ಸಲ್ಲಬೇಕು ನನ್ನ ಜೀವನ ದುದ್ದಕ್ಕೂ ಈ ಕೀರ್ತಿಯನ್ನು ಪಸರಿಸಿದವರನ್ನು ನಿತ್ಯ ನೆನೆಯದೆ ಇರೋಲ್ಲ ಎಲ್ಲಾ ಸಮುದಾಯದ ವರನ್ನು ಸಮನಾಗಿ ಕಾಣುತ್ತ ಬೆಳೆದು ಬಂದಿರುವ ನನಗೆ ರಾಜಕೀಯವಾಗಿ ಅತ್ಯಂತ ಹೆಚ್ಚು ಸಹಾಯ ಮಾಡಿದವರು ನಮ್ಮ ಆಂಜನೇಯ ನವರು. ನಮ್ಮ ಸಮಾಜದಲ್ಲಿ ಅವರಂತಹ ಧೀರ ನಾಯಕರನ್ನು ಕಾಣಲು ಸಾಧ್ಯವಿಲ್ಲ ಎಲ್ಲಾ ಸಮಾಜದ ಬಗ್ಗೆ ಕಾಳಜಿ ಕಳಕಳಿ ಅವರಲ್ಲಿದೆ ರಾಜಕಾರಣದಲ್ಲಿ ಸೋಲು, ಗೆಲವು ಸಹಜ ಅವರು ತಮ್ಮ ಜನಪರ ಸೇವೆಯ ಹೋರಾಟವನ್ನು ಇಂದಿಗೂ ಅವರು ನಿಲ್ಲಿಸಿಲ್ಲಾ ಇಂತಹ ನಾಯಕರನ್ನು ರಾಜಕಾರದಲ್ಲಿ ನೋಡುವುದು ಅಪರೂಪ. 2013 ರಿಂದ 2018 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಹೇಗೆಲ್ಲ ಮಾಡ ಬೇಕೆಂಬುದರ ವಿಶಿಷ್ಟ ನಿರ್ಧಾರಗಳನ್ನು ಮತ್ತು ಜನಪರ ಯೋಜೆನೆಗಳನ್ನು ಇಡೀ ರಾಜ್ಯಕ್ಕೆ ತೋರಿಸಿ ಕೊಟ್ಟವರು, 2014 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಚಿತ್ರದುರ್ಗದ ಅಭ್ಯರ್ಥಿ ಯಾರು? ಎಂಬ ಸಮೀಕ್ಷೆ ನಡೆದಾಗ ಪಕ್ಷದ ವರಿಷ್ಟರು ಎಚ್ ಆಂಜನೇಯ ರವರನ್ನು ಆಯ್ಕೆ ಮಾಡಿದರೆ ಗೆಲುವು ನಿಶ್ಚಿತ ಎನ್ನುವಾಗ ಸಚಿವರಾಗಿ ಉತ್ತಮ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿ ಕೊಂಡ ಅವರು ಎಂ.ಪಿ ಆಗಲು ಯಾಕೋ ಮನಸ್ಸು ಒಪ್ಪದ ಕಾರಣ ನನಗೆ ಪಕ್ಷದಿಂದ ಕೊಡಿಸಿ ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಪಾವಗಡ, ಶಿರಾ, ಹೀಗೆ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ ನನ್ನನ್ನು ಗೆಲ್ಲಿಸಿದ ಅಪ್ರತಿಮ ಹೋರಾಟಗಾರ ಛಲದಂತಕ ಮಲ್ಲ ನಮ್ಮ ಆಂಜೆನಣ್ಣ ಎಂದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ. ಶಿರೂರು.ಬಾಗಲಕೋಟೆ