ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ – ರೈತ ಹೊತ್ತ ನೇಗಿಲು ನಾಟಕ.
ಐಹೊಳೆ ಮಾ.05

ಪುಣ್ಯ ಮಾಲಿನಿಯ ಮಲ ಪ್ರಭಾ ನದಿ ತೀರದ ಮೇಲೆ ನೆಲೆಸಿರುವ ಐತಿಹಾಸಿಕ ಪುಣ್ಯ ಕ್ಷೇತ್ರ ಐಹೊಳೆಯ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದಂತ ಈ ವರ್ಷ ಕೂಡ ಅದ್ದೂಯಿಂದ ಜಾತ್ರೆ ನಡೆಯಲಿದೆ. ನಾಳೆ ದಿನ ಜಾತ್ರೆಯ ಸಲುವಾಗಿ ಪರಶುರಾಮ ದು.ಮಾದರ ಅವರ ವಿರಚಿತ “ರೈತ ಹೊತ್ತ ನೇಗಿಲು” ಎಂಬ ಸುಂದರ ಸಾಮಾಜಿಕ ನಾಟಕ ಅರ್ಥಾತ್ “ಶಿಕ್ಷೆ ಕೊಟ್ಟ ತಂಗಿ, ಭಿಕ್ಷೆ ಬೇಡಿದ ಅಣ್ಣ”…..! ಸಾಹುಕಾರ ಸಿದ್ದಪ್ಪನ ಪಾತ್ರದಲ್ಲಿ ಪರಶುರಾಮ ಮಾದರ, ಸಿಂಧೂರ ಪಾತ್ರದಲ್ಲಿ ಹನಮಂತ.ಬ ಆಡಿನ, ಮೇಘರಾಜ ಪಾತ್ರದಲ್ಲಿ ರವಿ ಎಚ್.ರಾಠೋಡ, ರವಿರಾಜ ಪಾತ್ರದಲ್ಲಿ ಅಶೋಕ ಬ.ಯರಗಟ್ಟಿ, ಪಿ.ಎಸ್.ಐ ಪಾತ್ರದಲ್ಲಿ ದುರಗೇಶ ಪ.ಮಾದರ ಇವರೆಲ್ಲರೂ ಸೇರಿ ನಾಟಕದಲ್ಲಿ ಹಾಸ್ಯ ಲಾಸ್ಯ ತುಂಬಿದ ರಂಗೀಲಾಗಳಾ ರಂಗೇರಿಸಿ ರಣರಂಗದಲ್ಲಿ ಧೂಳೆಬ್ಬಿಸಲು ಮುಂಚೂಣಿಯಲ್ಲಿ ಇದ್ದಾರೆ. ಐಹೊಳೆಯ ಸುತ್ತ ಹತ್ತಳ್ಳಿಯ ಗ್ರಾಮಾಂತರ ಪ್ರದೇಶದಲ್ಲಿನ ಮೌಢ್ಯತೆ, ಕಂದಾಚಾರಗಳ ಅಂಕು ಡೊಂಕುಗಳ ತಿದ್ದಲು ಬಂದ ಸುಂದರ ಸಾಮಾಜಿಕ ಸೊಗಡು ಇರುತ್ತದೆ. ದಿನಾಂಕ 06/06/2025 ರ ವಾರ ಗುರುವಾರ ಸಮಯ:10,30 ಕ್ಕೆ ತಾವು ಬನ್ನಿ, ತಾವೆಲ್ಲರೂ ಬನ್ನಿ, ತಮ್ಮ ಜೊತೆಗೆ ನೂರಾರು ಜನಗಳನ್ನು ಕರೆ ತಂದು ಪ್ರದರ್ಶನಕ್ಕೆ ಪಾತ್ರರಾಗಿರಿ.
ಪರಶುರಾಮ ದು.ಮಾದರ ಐಹೊಳೆ,