ಮರೂರು ಗ್ರಾಮಸ್ಥರ ಆಕ್ರೋಶ, ಸೌತೆಕಾಯಿ ಸೀಡ್ಸ್ ಕಂಪನಿ ಬಂದ್ ಮಾಡುವಂತೆ – ಒತ್ತಾಯಿಸಿ ಆಕ್ರೋಶ.
ಮರೂರು ಸ.10

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಯ್ಯನಳ್ಳಿ ಗ್ರಾಮ ಪಂಚಾಯಿತಿಗೆ ಸೇರಿರುವ ಮರೂರ ಎಂಬ ಕುಗ್ರಾಮದ ಸಾರ್ವಜನಿಕರಿಗೆ ಸಮಸ್ಯೆ ಮಾಡಲು ಮುಂದಾಗಿರುವ ಸೌತೆಕಾಯಿ ಸೀಡ್ಸ್ ಕಂಪನಿ, ಮರೂರು ಗ್ರಾಮದ ಪಕ್ಕದಲ್ಲಿ ಸೌತೆಕಾಯಿ ಸೀಡ್ಸ್ ಕಂಪನಿಗೆ ಪರವಾನಿಗೆ ನೀಡದಿರಲು ಮನವಿಯನ್ನು ಮಾನ್ಯ ತಹಶೀಲ್ದಾರ್ ರವರಿಗೆ ಕೊಟ್ಟರು, ಕ್ಯಾರೆ ಅನ್ನದೆ ಮರೂರು ಗ್ರಾಮದ ರೈತರ ಮನವಿಗಳನ್ನು ಆಲಿಸದೆ ಹಾಗೂ ಸ್ಥಳ ಮಹಜರು ಮಾಡದೆ ಕೊಟ್ಟೂರು ತಹಶೀಲ್ದಾರರು ಪರವಾನಿಗೆ ನೀಡಿದ್ದಾರೆ ಎಂಬ ರೈತರ ಆಕ್ರೋಶ. ಮರೂರು ಗ್ರಾಮ ರೈತಾಪಿಗಳಿಗೆ ಅನ್ಯಾಯ ಮಾಡುತ್ತಿರುವ ಕೊಟ್ಟೂರಿನ ತಹಶೀಲ್ದಾರ್ ಮರೂರು ಗ್ರಾಮಸ್ಥರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮರೂರು ಗ್ರಾಮದ ಸಮಸ್ತ ಜನತೆಗೆ ಸೌತೆಕಾಯಿ ಸೀಡ್ಸ್ ಕಂಪನಿಯ ಮಾಲೀಕರಿಂದ ಬೆದರಿಕೆ ಮಾತುಗಳು ಮರೂರು ಗ್ರಾಮದ ಸಾರ್ವಜನಿಕರಿಗೆ ಧಮ್ಕಿ ಹಾಕುತ್ತಿರುವ ಸೌತೆ ಸೀಡ್ಸ್ ಕಂಪನಿಯ ಮಾಲೀಕ ಚೇತನ್ ರವರ ಉಪಟಳ ಯಾವುದೇ ಅಧಿಕಾರಿಗಳು ಮರೂರು ಗ್ರಾಮದ ರೈತರಿಗೆ ಸ್ಪಂದಿಸದೆ ಸೌತೆಕಾಯಿ ಸೀಡ್ಸ್ ಕಂಪನಿಯ ಪರ ಬೆಂಬಲವಾಗಿ ನಿಂತಿರುವ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು, ಆರೋಪ ಮಾಡುತ್ತಿರುವ ಮರೂರು ಗ್ರಾಮಸ್ಥರು. ಮರೂರು ಗ್ರಾಮದ ಪಕ್ಕದಲ್ಲಿ ಮಿಡಿ ಸೌತಿ ಕಾಯಿ ಸಂಸ್ಕರ್ಣ ಘಟಕದಲ್ಲಿ ಬಳಸುತ್ತಿರುವ ಕೆಮಿಕಲ್ ನಿಂದಾಗಿ ಸುತ್ತ ಮುತ್ತಲಿನ ಬೋರ್ವೆಲ್ ಗಳು ನೀರು ಕಲುಷಿತ ಗೊಂಡು ವಿಷಕಾರಿ ಆಗುವ ಸಂಭವ ಉಂಟಾಗುತ್ತದೆ ಎಂಬ ಮರೂರ ಗ್ರಾಮಸ್ಥರ ಆತಂಕ.ಮಿಡಿ ಸೌತೆಕಾಯಿ ಸೀಡ್ಸ್ ಕಂಪನಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಜಿಲ್ಲಾ ಪಂಚಾಯತರವರು ಸ್ಥಳಕ್ಕೆ ಭೇಟಿ ನೀಡಿದರು,

ಮರೂರ ಗ್ರಾಮಸ್ಥರಿಗೆ ಸಿಗದ ನ್ಯಾಯ ಎಲ್ಲಾ ಅಧಿಕಾರಿಗಳಿಗೆ ಮರೂರ ಗ್ರಾಮಸ್ಥರು ಮನವಿ ಪತ್ರದ ಮೂಲಕ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿ ಕೊಂಡರು ಸೌತೆಕಾಯಿ ಸೀಡ್ಸ್ ಕಂಪನಿಯ ಪರ ಬೆನ್ನಿಗೆ ನಿಂತಿರುವ ಗುಲಾಮ್ ಅಧಿಕಾರಿಗಳು ಅಧಿಕಾರಿಗಳಿಗೆ ಸರ್ಕಾರ ಸಂಬಳ ಕೊಟ್ಟರು ಗ್ರಾಮಸ್ಥರ ಸಂಕಷ್ಟವನ್ನು ಅರ್ಥ ಮಾಡಿ ಕೊಳ್ಳದೆ ಸೌತೆಕಾಯಿ ಸೀಡ್ಸ್ ಕಂಪನಿಗೆ ಜೈ ಅನ್ನುತಿರುವ ಅಧಿಕಾರಿಗಳು ಶೀಘ್ರದಲ್ಲಿ ಸೌತೆಕಾಯಿ ಸೀಡ್ಸ್ ಕಂಪನಿಯನ್ನು ನಿಲ್ಲಿಸದಿದ್ದರೆ ಮರೂರು ಗ್ರಾಮದ ಎಲ್ಲಾ ಹೆಣ್ಣು ಮಕ್ಕಳು ಗಂಡು ಮಕ್ಕಳು ಹಾಗೂ ಊರಿನ ಮುಖಂಡರುಗಳು ಕಂಪನಿಯು ಮುಚ್ಚುವವರೆಗೂ ಕಂಪನಿಯ ಮುಂದೆ ಧರಣಿ ಕೂಡಲು ಎಚ್ಚರಿಕೆ ನೀಡಿದ್ದಾರೆ ಮಾನ್ಯ ಜಿಲ್ಲಾಧಿಕಾರಿಗಳೇ ನಮ್ಮ ಮರೂರ ಗ್ರಾಮವನ್ನು ಸೌತೆಕಾಯಿ ಕಂಪನಿಯಿಂದ ಕಾಪಾಡಿ ಎಂದು ಕೇಳಿ ಕೊಳ್ಳುತ್ತಿರುವ ಜನರು ಜನರ ಕಷ್ಟವನ್ನು ಹೇಳಿಕೊಂಡರು ಕೇಳಿಸಿ ಕೊಂಡರೂ ನಿರ್ಲಕ್ಷ್ಯ ತೋರುತ್ತಿರುವ ಹೆಚ್.ಬಿ ಹಳ್ಳಿ ಶಾಸಕರು ಮಾಧ್ಯಮದವರಿಗೂ ಸ್ಪಂದಿಸದ ಸೌತೆಕಾಯಿ ಸೀಡ್ಸ್ ಕಂಪನಿಯ ಮಾಲೀಕ ಚೇತನ್ ಹಾಗೂ ಸೆಕ್ಯೂರಿಟಿ ಗಾರ್ಡ್ ಕಂಪನಿಯ ವಿರುದ್ಧ ಮರೂರು ಗ್ರಾಮಸ್ಥರು ವಿರೋಧವಿದ್ದರೂ ಮಾನ್ಯ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಜನರಿಗೆ ನ್ಯಾಯ ಕೊಡಿಸುವರೋ, ಕಂಪನಿ ಬಿಸಿನೆಸ್ ಮಾಡಲು ಮುಂದಾಗಿರುವುದಕ್ಕೆ ಬ್ರೇಕ್ ಹಾಕುವರೋ ಕಾದು ನೋಡಬೇಕಿದೆ. ಗ್ರಾಮಸ್ಥರ ಆರೋಪ ಶಾಲಾ ಮಕ್ಕಳಿಗೆ ಈ ಕಂಪನಿಯ ತಯಾರಿಸುತ್ತಿರುವಂತಹ ಮಿಡಿ ಸೌತೆಕಾಯಿ ಸೀಡ್ಸಿಗೆ ಕೆಮಿಕಲ್ಸ್ ಹಾಕುವುದರಿಂದ ದುರ್ವಾಸನೆ ಮಕ್ಕಳು ಕುಡಿದು ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಎದುರಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

