200 ಬೆಡ್ಡು ಇರುವ ಹಾಸ್ಪಿಟಲ್ ಹೊಸದಾಗಿ ಯೋಜನೆ ರೂಪಿಸಲು – ಮುಂದಾದ ಶಾಸಕರು.
ಮೊಳಕಾಲ್ಮುರು ಮಾ.08

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮತ್ತು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಹಾನಗಲ್ ಗ್ರಾಮದ ಹತ್ತಿರ 200 ಬೆಡ್ ಇರುವ ಹಾಸ್ಪಿಟಲ್ ಹೊಸದಾಗಿ ಸರ್ಕಾರ ದಿಂದ ಮಂಜೂರು ಮಾಡಿಸಿ ಕೂಡ್ಲಿಗಿ ಮತ್ತು ರಾಯದುರ್ಗ ಮೊಳಕಾಲ್ಮೂರು ತಾಲೂಕುಗಳಿಗೆ ಎಲ್ಲಾ ಬಡ ರೋಗಿಗಳಿಗೆ ಅನುಕೂಲವಾಗ ಲೆಂದು ಸರ್ಕಾರಕ್ಕೆ ಒತ್ತಡ ಹೇರಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 16 ನೇ. ಬಜೆಟ್ಟಿನಲ್ಲಿ ಘೋಷಣೆ ಸಹ ಆಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿಗೆ ದೊಡ್ಡ ಸಾಧನೆ ಆಗಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಮತದಾರರು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತು ಇದಲ್ಲದೆ ತುಂಗಭದ್ರ ಡ್ಯಾಮ್ ಇಂದಿನಿಂದ ಬರುವ ನೀರನ್ನು ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ಹರಿಸುವಾಗ ಮೊಳಕಾಲ್ಮೂರು ತಾಲೂಕಿಗೆ ಸಹ ಆ ನೀರು ಬರುವುದು ಖಚಿತ ಆದ ಮೇಲೆ ಮೊಳಕಾಲ್ಮೂರು ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಎನ್.ವೈ ಗೋಪಾಲಕೃಷ್ಣ ಶಾಸಕರು ಪ್ಲಾನ್ ಮಾಡಿ ಯೋಜನೆ ರೂಪಿಸಿದ್ದಾರೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು