ಇದು ಸಾಲರಾಮಯ್ಯ ನವರ ಬುರುಡೆ – ಎ.ಎಸ್ ಪಾಟೀಲ್ ನಡಹಳ್ಳಿ.
ಮುದ್ದೇಬಿಹಾಳ ಮಾ.08

ಇದು ಸಾಲ ರಾಮಯ್ಯ ನವರ ಬಜೆಟ್. ಬಜೆಟ್ ಮಂಡನೆಯಲ್ಲಿ ಸಿ.ಎಂ ಅವರು ವಿಶೇಷ ದಾಖಲೆ ಮಾಡಿದ್ದು. ಅತಿ ಹೆಚ್ಚು ಸಮಯ ಸಾಲದ ಬಜೆಟ್ ಮಂಡಿಸಿದ್ದಾರೆ. ಎಂದು ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಟೀಕಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು 3 ವರ್ಷದಲ್ಲಿ 3.05 ಲಕ್ಷ ಕೋಟಿ ಸಾಲ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈ ವರ್ಷ 1.16 ಲಕ್ಷ ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದಾರೆ. ಬಜೆಟ್ ನಲ್ಲಿ ಬರೀ ಬೊಗಳೆ ಬಿಟ್ಟಿದ್ದಾರೆ ಪೂರಕವಾದ ಬಜೆಟ್ ಅಲ್ಲ ಅಲ್ಪಸಂಖ್ಯಾತರ ಓಲೈಕೆಯನ್ನು ಬಿಟ್ಟರೆ ಬೇರೆಯವರಿಗೆ ಅನುದಾನ ಇಲ್ಲ ಎಂದು ತಿಳಿಸಿದ್ದಾರೆ. ಕೆ.ಬಿ.ಜೆ.ಎನ್.ಎಲ್ ಯೋಜನೆಗಳಿಗೆ ಬಿಡಿಗಾಸು ಕೊಟ್ಟಿಲ್ಲ ಪ್ರಮುಖ ಇಲಾಖೆಗಳಾದ ಇಂಧನ ನೀರಾವರಿಗೆ ಹಣ ಕೊಟ್ಟಿಲ್ಲ ಎಸ್ಸಿ/ಎಸ್ಟಿ ಸಮುದಾಯದವರಿಗೆ ಅನುದಾನ ಕಡಿತ ಗೊಳಿಸಿದ್ದು ಶೇ.9 ರಷ್ಟು ಮಾತ್ರ ಅನುದಾನವನ್ನು ಇಲಾಖಾವಾರು ನಿಗದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹಿಂದುಳಿದ ವರ್ಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಸಿ.ಎಂ ಪ್ರತಿ ನಿಧಿಸುವ ಕುರುಬ ಸಮುದಾಯಕ್ಕೆ ವಿಶೇಷ ಕೊಡುಗೆ ಇಲ್ಲ ಮುದ್ದೇಬಿಹಾಳ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಹಿಂದೆ ಸಿ.ಎಂ ಘೋಷಣೆ ಮಾಡಿದ್ದ ಕೃಷಿ ವಿಸ್ತರಣಾ ಕೇಂದ್ರಗಳನ್ನು ಮತ್ತೆ ಘೋಷಣೆ ಮಾಡಿದ್ದಾರೆ. ಇದೊಂದು ಬುರುಡೆ ಬಜೆಟ್ ಆಗಿದೆ ಎಂದು ಎ.ಎಸ್ ಪಾಟೀಲ್ ನಡಹಳ್ಳಿ ಮಾಜಿ ಶಾಸಕರು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ