ನೆಹರು ಯುವ ಕೇಂದ್ರ ದಿಂದ ಸಂವಿಧಾನ ದಿನಾಚರಣೆ.
ಮಾನ್ವಿ ನ.28

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಖಿಲ್ ಸಿದ್ದಿಖಿಯವರು “ದೇಶದಲ್ಲಿ ಪರಸ್ಪರ ಚರ್ಚೆ, ವಿಮರ್ಶೆಗಳು ಸಂವಿಧಾನದ ತಳಹದಿ ಆರೋಗ್ಯಕರ ಚರ್ಚೆಗಳು ದೇಶದ ಒಳಿತಿಗೆ ಮೆಟ್ಟಿಲುಗಳು ಇಂತಹ ಚರ್ಚೆಗಳಲ್ಲಿ ಯುವಜನರು ಭಾಗವಹಿಸುವುದರ ಮೂಲಕ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಹೇಳಿದರು.ಮಾನವಿಯ ಶಾಸಕರ ಭವನ ಸಭಾಂಗಣದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ರಾಯಚೂರು ವಂದೇ ಮಾತರಂ ಯುವ ಸಂಘ ಮದ್ಲಾಪುರ, ಪಯೋನಿಯರ್ ಸರ್ವಭಿವೃದ್ಧಿ ಬಳಗ ಮಾನವಿ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಖಾಸಗಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ ನಾಯಕ ನಸ್ಲಾಪುರ ಮಾತನಾಡಿ “ಯುವಕರು ರಾಜಕೀಯಕ್ಕೆ ಬರಬೇಕು, ಎಲ್.ಎಲ್.ಬಿ ಓದಬೇಕು, ನಮ್ಮ ದೇಶದ ಚುಕ್ಕಾಣಿ ಹಿಡಿದು ವಿನೂತನ ರೀತಿಯಲ್ಲಿ ಅಭಿವೃದ್ಧಿಯ ಆಡಳಿತ ಮಾಡಬೇಕು. ರಾಷ್ಟ್ರ ವಿಶ್ವ ಮಟ್ಟದಲ್ಲಿ ಎಲೆ ಎತ್ತಿ ನಿಲ್ಲುವ ಸಾಧನೆ ಕಾಣಬೇಕಿದೆ” ಎಂದರು.ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಮಹ್ಮದ್ ಬೇಗ್ “ಈ ಕಾರ್ಯಕ್ರಮದ ಉದ್ದೇಶ ವಿಧ್ಯಾರ್ಥಿ ಮತ್ತು ಯುವಜನರಲ್ಲಿ ಆರೋಗ್ಯಕರ ಚರ್ಚಾ ಮನೋಭಾವನೆಯನ್ನು ಉತ್ತೆಜಿಸುವುದು ಮತ್ತು ಸಂವಿಧಾನದ ಮೂಲ ಆಶಯವನ್ನು ತಿಳಿಸುವಂತಾದಗಿತ್ತು ಎಂದರು..ಯುವ ಸಂಸತ್ತು, ಒಂದು ದೇಶ ಒಂದು ಚುನಾವಣೆ ವಿಷಯದ ಕುರಿತು ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಶ್ಯಾಮಸುಂದರ್, ದ್ವಿತೀಯ ಫಿರದೋಸ್ ಭಾನು, ತೃತೀಯ ನಾಗರಾಜ್, ಬಂದೇ ನವಾಜ್ ಸ್ಥಾನ ಪಡೆದಿರುತ್ತಾರೆ.ನಿರೂಪಣೆ ಸಮೀರ್, ಮಹ್ಮದ್ ಹುಸೇನ್, ಸ್ವಾಗತ ಉದಯ್ ಪತ್ತಾರ್, ವೀರೇಶ್ ವಂದಿಸಿದರು ಯುವಕ-ಯುವತೀಯರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ