“ಸ್ತ್ರೀ ಶಕ್ತಿ ಜಗದ ಚೈತನ್ಯ”…..

ಸೃಷ್ಠಿಯಲಿ ಮಹಿಳೆಯು
ಮಮತೆಯು ಸಾಗರದಷ್ಟು
ವಿಶಾಲ ವಿಶ್ವದ ಸರ್ವ ಮಹಿಳಾ
ಮಣಿಗಳ ಜವಾಬ್ದಾರಿಗೆ ಅಭಾರಿ
ಸಕಲ ಸುಕಲಾ ವಲ್ಲಭೆ ಸಬಲೆ
ಸಹನೆ ಸ್ನೇಹ ಜೀವಿ ದಿಟ್ಟ ನಡೆ
ವಿಶ್ರಾಂತೆಗೆ ಶ್ರಮ ನೀಡಿದ
ನಿತ್ಯ ಕಾಯಕಜೀವಿ
ಕಷ್ಠ ತಾಪತ್ರಯ ಬಹು ವೇಷಧಾರಿ
ತಾಯಿಯ ಮಮತೆ ಅಕ್ಕನ ಅಕ್ಕರೆ
ತಂಗಿಯ ಒಲವು ಮಗಳ ಕಕುಲತೆ
ಪತಿಗೆ ಆದರ್ಶತನದ ಸತಿ ದೇವಿ
ಐಶ್ವರ್ಯ ಸಿರಿಯ ಶ್ರೀಲಕ್ಷ್ಮೀದೇವಿ
ಸುಗುಣದ ಶ್ರೀಗೌರಿ ವಿದ್ಯಾಸಿರಿಯ
ಶ್ರೀಸರಸ್ವತಿ ದೇವಿ
ಅನ್ನದಾತನಿಗೆ ಭೂದೇವಿಯ ಕೃಪೆ
ಮನುಜ ಕುಲದ ಆದರ್ಶತನ
ಸ್ತ್ರೀ ಶಕ್ತಿ ಜಗದ ಚೈತನ್ಯ
ವಿಶ್ವ ಮಹಿಳಾ ದಿನದ
ಸಕಲ ಮಹಿಳಾ ಮಣಿಗಳಿಗೆ
ಶುಭ ಹಾರೈಕೆಗಳೊಂದಿಗೆ
ನನ್ನದೊಂದು ಗೌರವದ ಸಲಾಂ.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.