ನಗರದ ಪುರ ಸಭೆಯವರಿಗೆ ಚೆಲ್ಲಾಟ, ಸಾರ್ವಜನಿಕರಿಗೆ ಪ್ರಾಣ ಸಂಕಟ – ಸಾರ್ವಜನಿಕರಿಂದ ಆಕ್ರೋಶ.
ರೋಣ ಆ.08





ಹೌದು ಪ್ರಿಯ ಓದುಗರೇ ಈ ಭೂಮಿ ಮೇಲೆ ಜೀವ ಹಾಗೂ ಜೀವನ ಇರೋದು ಒಂದೆ ಸರಿ ಅಲ್ವಾ ಏನಿದು ಅಂತಾ ಯೋಚನೆ ಮಾಡ್ತಾ ಇದ್ದೀರಾ ಆತ್ಮೀಯ ಓದುಗರೇ…..
ರೋಣ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ತುಂಬಿ ತುಳುಕುತ್ತಿರುವ ಚರಂಡಿ, ನಗರದ ಹಲವಾರು ವಾರ್ಡಗಳಲ್ಲಿ ವಿಲೇವಾರಿಯಾಗದ ಕಸ ಚರಂಡಿಯಲ್ಲಿ ಹುಳು ತುಂಬಿದ ಚರಂಡಿಗಳು ಗಬ್ಬೆದ್ದು ನಾರುತ್ತಿದೆ ಹೀಗೆ ಹೇಳುತ್ತಾ ಸಾಗಿದರೇ ಸಾಕಷ್ಟಿವೆ. ಆತ್ಮೀಯ ಓದುಗರೇ…..
ರೋಣ ನಗರದಲ್ಲಿ ಅದೆಷ್ಟೋ ನಗರಗಳು ಅಭಿವೃದ್ದಿ ಕಾಣದೆ ಮರಿಚಿಕೆಯಾಗಿಯೇ ಉಳಿಯುತ್ತಿವೆ. ಅದರಲ್ಲಿ 11 ನೇ. ವಾರ್ಡ್ ಮೈನಾರಿಟಿ ಹಾಸ್ಟೆಲ್ ಹತ್ತಿರದ ನಗರದ ಜನರ ಜೀವನ ಚಿಂತಾಜನಕ ಸ್ಟೋರಿಯೊಂದನ್ನ ನೋಡೋಣ ಬನ್ನಿ…
ಈ 11 ನೇ. ವಾರ್ಡ್ ನ ಜನರ ಸಮಸ್ಯೆಯನ್ನು ಎಳೆ ಎಳೆಯಾಗಿ ತೋರಿಸ್ತಿವಿ ನೋಡಿಈ 11 ನೇ. ವಾರ್ಡ್ ನಲ್ಲಿ ಮಳೆ ಬಂದರೆ ಮನೆಗಳ ಒಳಗೆ ಹಾಗೂ ಮನೆಯ ಮುಂದೆ ಕೆಸರು ಗದ್ದೆಯಂತಾಗಿದ್ದು ರಸ್ತೆಗಳಲ್ಲಿ ಸಾರ್ವಜನಿಕರು, ವೃದ್ದರು, ರೋಗಿಗಳು ದನ ಕರುಗಳು ಈ ರಸ್ತೆಯಲ್ಲಿ ಸಂಚರಿಸ ಬೇಕೆಂದರೇ ಜೀವವನ್ನು ಅಂಗೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಈ ಹಿಂದೆ ನಮ್ಮ ವಾರ್ಡನ್ನು ಅಭಿವೃದ್ಧಿ ಪಡೆಸುವವರು ಎಂಬ ನಂಬಿಕೆ ಯಿಂದ ಪುರ ಸಭೆಯ ಜನ ಪ್ರತಿನಿದಿಗಳನ್ನು ನಮ್ಮ ವಾರ್ಡ್ ಗೆ ಬರಮಾಡಿ ಕೊಂಡು ಅವರಿಗೆ ನಮ್ಮ ಅಮೂಲ್ಯ ವಾದ ಮತವನ್ನು ಹಾಕಿದ್ದೇವೆ ಆದರೆ ಈ ವಾರ್ಡ್ ಗೆ ಸಂಬಂಧಿಸಿದವರು ಪುರ ಸಭೆಯ ಅಧಿಕಾರಿಗಳು ಈ ವಾರ್ಡ್ ಕಡೆ ಗಮನ ಕೊಡದೆ ನಮ್ಮ ಅಮೂಲ್ಯ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದುಃಖ್ಖ ಬರಿತವಾಗಿ ನಮ್ಮ ಸಿಹಿ ಕಹಿ ಮಾಧ್ಯಮ ದೊಂದಿಗೆ ತಮ್ಮ ಭಾವನೆಗಳನ್ನು ಹಂಚಿ ಕೊಂಡಿದ್ದಾರೆ ಆದರೆ ಈ ವಾರ್ಡ್ ಅಷ್ಟೇ ಅಲ್ಲಾ ಆತ್ಮೀಯ ಓದುಗರೇ…..
ನಮ್ಮ ರೋಣ ಪಟ್ಟಣ ಅಭಿವೃದ್ಧಿ ಕಂಡಿಲ್ಲಾ ಎಂದು ಅಲ್ಲಿನ ನಿವಾಸಿಗರು ವೃದ್ಧರು ಮಕ್ಕಳು ಆಕ್ರೋಶ ವ್ಯಕ್ತಪಡೆಸಿದ್ದಾರೆ. ಆತ್ಮೀಯ ಓದುಗರೇ…
ಹಾಗಾದ್ರೆ ಈ ಜನ ಪ್ರತಿನಿದಿಗಳು ಕಷ್ಟಕ್ಕೆ ಕರೆಯ ಬೇಡಿ ಊಟಕ್ಕೆ ಮರೆಯ ಬೇಡಿ ಎಂಬಂತೆ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರಾ ಎಂಬ ಗಾದೆ ಮಾತನ್ನು ನಿಜ ಮಾಡಿದ್ದಾರೆ ಆತ್ಮೀಯ ಓದುಗರೇ…
ರೋಣ ಪಟ್ಟಣದಲ್ಲಿನ 11 ನೇ. ವಾರ್ಡ್ ಸೇರಿದಂತೆ ಇನ್ನೂ ಕೇಲವೊಂದಿಷ್ಟು ವಾರ್ಡಗಳಲ್ಲಿ ಅಭಿವೃದ್ದಿ ಮರಿಚಿಕೆ ಯಾಗಿದ್ದು. ರೋಣ ಅಭಿವೃದ್ಧಿ ಕಾಣದ ಪಟ್ಟಣ ಎಂಬ ಶೀರ್ಷಿಕೆ ಪಡೆದು ಕೊಳ್ಳುತ್ತಿದೆ. ಬೇರೆ ತಾಲೂಕಗಳಿಗೆ ಹೋಲಿಸಿದರೆ ನಮ್ಮ ರೋಣ ನಗರ ಏಳ್ಳಷ್ಟು ಅಭಿವೃದ್ಧಿ ಕಾಣುತಿಲ್ಲಾ ಅಭಿವೃದ್ಧಿ ಯಾವಾಗ ಆಗುವುದೋ ಇಲ್ಲೊವೋ ಎಂಬ ಸಂಶಯವೂ ಉಂಟಾಗಿದೆ. ಅದರಲ್ಲೂ ವಿಶೇಷವಾಗಿ ಈ 11 ನೇ. ವಾರ್ಡಿನಲ್ಲಿ ಮೈನಾರಿಟಿ ಹಾಸ್ಟೇಲ್ ಕೂಡಾ ಇದ್ದು ಈ ಹಾಸ್ಟೇಲ್ ಮುಂದೆ ಈಗಾಗಲೇ ರಸ್ತೆ ನಿರ್ಮಾಣವಾಗಿದ್ದು. ಆ ರಸ್ತೆ ನಿರ್ಮಾಣ ಆದಾಗಿಂದಲೂ ಈ ವಾರ್ಡ್ ನ ಕೆಲವು ಮನೆಗಳು ಮಳೆ ಪ್ರಾರಂಭ ವಾಯಿತೆಂದರೆ ನೀರೆಲ್ಲಾ ಮನೆಯಲ್ಲಿ ನಿಲ್ಲುತ್ತೆ ಕಾರಣ ಈ ನೂತನವಾಗಿ ನಿರ್ಮಾಣ ಗೊಂಡ ರಸ್ತೆ ಇದು ನಿರ್ಮಾಣ ಎತ್ತರ ಪ್ರದೇಶ ಆಗಿರುವುದರಿಂದ ಈ ರಸ್ತೆಯ ಪಕ್ಕದಲ್ಲಿ ಇರುವ ಮನೆಗಳ ಹರಿಯುವ ನೀರು ಬೇರೆ ಎಲ್ಲೂ ಹರಿಯಲು ಜಾಗವಿಲ್ಲದೆ ರಸ್ತೆ ಬದಿಯಲ್ಲಿ ಆವೃತವಾಗಿ ಕೆರೆಯಂತೆ ಕಾಣಲಾರಂಭಿಸುತ್ತದೆ ಹೀಗಾಗಿ ಇಲ್ಲಿಯ ಜನ ಪರದಾಡುವಂತಾಗಿದೆ. ಅಷ್ಟೇ ಅಲ್ಲಾ ಪ್ರಿಯ ಓದುಗರೇ…
ಇಲ್ಲಿರುವ ಸಾರ್ವಜನಿಕರು ಎಷ್ಟೋ ಸಾರಿ ಈ ಸಮಸ್ಯೆಗೆ ಸಂಬಂಧ ಪಟ್ಟಂತೆ ಇಲ್ಲಿನ ಜನ ಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ಹಲವಾರು ಬಾರಿ ಮನವಿ ಮಾಡಿ ತಿಳಿಸಿದರು. ಪ್ರಯೋಜನಯಾಗಿಲ್ಲಾ ಎನ್ನುತ್ತಾರೆ ಈ ಕಾಲೋನಿಯ ನಿವಾಸಿಗಳು. ಇಲ್ಲಿ ಮತ ತಗೆದು ಕೊಂಡು ಚುನಾಯಿತ ಗೊಂಡ ಜನ ಪ್ರತಿನಿಧಿ ಕೇಳಿದರೆ ನೀವು ಜಾಗ ಯಾರಿಂದ ಖರೀದಿ ಮಾಡಿದ್ದಿರೋ ಅವರ ಜೊತೆ ಸರಿ ಮಾಡಿಸಿ ಕೊಳ್ಳಿ ಎಂದು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಿರುವ ಉದಾಹರಣೆಗಳು ಇವೆ ಈ ರೀತಿ ಹಲವಾರು ಸಮಸ್ಯೆಗಳಿಂದ ಬೇಸತ್ತು ಸಾರ್ವಜನಿಕರು ನಮ್ಮ ಸಿಹಿ ಕಹಿ ಮಾಧ್ಯಮ ದೊಂದಿಗೆ ಮಾತನಾಡಿ ನಮಗೆ ರೋಡ್ ಬೇಡ ಒಂದೆರಡು ಹಡಗುಗಳನ್ನು ಕೊಡಿಸಿ ನಾವು ಅದರಲ್ಲಿ ಮಳೆ ಬಂದಾಗ ಪ್ರಯಾಣ ಬೆಳೆಸುತ್ತೇವೆ ಎಂದು ದುಃಖ ದಿಂದ ಮಾತನಾಡಿದರು. ಹೌದು ಆತ್ಮೀಯ ಓದುಗರೇ…
ನಮ್ಮ ಸಿಹಿ ಕಹಿ ಪತ್ರಿಕೆ ವರದಿ ಕಂಡ ಮೇಲಾದರೂ ಈ ವಾರ್ಡಿಗೆ ಸಂಬಂಧಿಸಿದ ಜನ ಪ್ರತಿನಿಧಿಗಳು ಹಾಗೂ ಪುರ ಸಭೆಯ ಅಧಿಕಾರಿಗಳು ಈ ವಾರ್ಡಿನ ಅತ್ತ ಗಮನ ಹರಿಸುವರೋ ಇಲ್ಲವೋ ಕಾಯ್ದು ನೋಡೋಣ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ.ಗದಗ