ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಘೋಷಣೆ ಕೂಗಿದ್ದಕ್ಕೆ – ದಲಿತ ಹೋರಾಟಗಾರರ ಬಂದನ, ಬಿಡುಗಡೆ.
ಬಾಗಲಕೋಟೆ ಮಾ.11

ಏಳನೇ ತಾರೀಕು ಬಜೆಟ್ ಅಧಿವೇಶನದಲ್ಲಿ ಸಿ.ಎಂ ಸಿದ್ಧರಾಮಯ್ಯರವರು ಬಜೆಟ್ ಮಂಡನೆ ಸಂಧರ್ಬದಲ್ಲಿ ಸ್ವಾಭಿಮಾನಿ ಮಾದಿಗ ಸಮುದಾಯ ಮುಖಂಡರಾದ ಶ್ರೀ ಎ.ವಿಜಯಕುಮಾರ ಆನೇಕಲ್ ಹಾಗೂ ಶ್ರೀ ಎಸ್.ವಿ ಸುರೇಶ್, ಶ್ರೀ ವೇಣುಗೋಪಾಲ. ಎನ್, ಶ್ರೀ ವಿಜಯಶಂಕರ್ ಎಸ್.ಎಸ್, ಶ್ರೀ ಶ್ರೀನಿವಾಸ ಎಸ್.ಡಿ, ಶ್ರಿಸತ್ಯೇಂದ್ರಕುಮಾರ, ಶ್ರೀ ಎಂ.ರಾಜರತ್ನಂ ಒಟ್ಟು ಏಳು ಜನ ಗಂಡು ಗಲಿಗಳ ದಂಡು ಸಿ.ಎಂ ರವರನ್ನು ಏಕಾಏಕಿ ವಿಚಲಿತ ರನ್ನಾಗಿಸಿದ್ದು. ಒಂದೇ ಧ್ವನಿ ಅದು “ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಿ” ಎನ್ನುವ ಹಕ್ಕೊತ್ತಾಯದ ಕೂಗಿಗೆ ಬಜೆಟ್ ಮಂಡನೆ ಧ್ವನಿ ಗಾಬರಿಯಾಗಿ ಸ್ಥಬ್ಧ ವಾಗುತ್ತದೆ. ನಂತರದ ಬೆಳವಣಿಗೆಗಳನ್ನು ದೃಶ್ಯ ಮಾಧ್ಯಮದಲ್ಲಿ ಎಲ್ರು ನೋಡಿದ್ದೇವೆ. ಬಂಧುಗಳೇ ಈ ಸುದ್ಧಿ ಬಿತ್ತರವಾಗುತ್ತಿದ್ದಂತೆ ಬೆಂಗಳೂರಲ್ಲೇ ಇರುವ ನಮ್ಮ ನ್ಯಾಯವಾದಿಗಳ ಟೀಮ್ ತುಂಬಾ ಎಚ್ಚರಿಕೆ ಯಿಂದ ಕಾರ್ಯಪ್ರವೃತ್ತವಾಗಿದೆ. ನಿಜಕ್ಕೂ ಅಭಿನಂದನೀಯ. ಇವರದೇ ಸರಕಾರದಲ್ಲಿ 2016 ರಲ್ಲಿ ಹುಬ್ಬಳ್ಳಿ ಸಮಾವೇಶದಲ್ಲಿ ಸದಾಶಿವ ವರದಿ ಜಾರಿ ಮಾಡಿ ಕೊಡುತ್ತಾರೆನ್ನುವ ಸುದ್ಧಿ ಎಬ್ಬಿಸಿ 7. ಜನರನ್ನು ಬಾಗೇವಾಡಿ ಸಹೋದರರು ಹೋರಾಟಗಾರರನ್ನು ಸಾಯಿಸಲು ಪ್ರೇರಣೆ ಪ್ರಚೋದನೆ ನೀಡಿದ ಸಿದ್ದರಾಮಯ್ಯ ರವರು ಇಂದೂ 7 ಜನರ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಶಾಂತಿ ಭಂಗ ಮಾಡಿದ್ದಾರೆಂದು ಶಾಸಕರ ಭವನದ ಸ್ಟೇಷನದಲ್ಲಿ ಮಾರ್ಶಲ್ಲಗಳ ಮುಖಾಂತರ ಫಿರ್ಯಾದಿ ದಾಖಲು ಮಾಡಿಸಿದ್ದಾರೆ….7 ಜನರ ಬೆನ್ನು ಹಿಂದೆ 36 ಲಕ್ಷ ಮಾದಿಗರಿದ್ದೇವೆ ಎಚ್ಚರಿಕೆ ಇರಲಿ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ