“ರಿಕಾರ್ಡ ಕೋಣೆ” ಯಲ್ಲಿನ ಲಂಚಾವತಾರ ತೊಲಗಿಸಿ – ಶಿವಾನಂದ ಹರಿಜನ ಆರೋಪ.
ಇಂಡಿ ಮಾ.11

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿನಿ ವಿಧಾನ ಸೌಧದ ತಹಶೀಲ್ದಾರ್ ಕಛೇರಿಯ ರಿಕಾರ್ಡ ಕೋಣೆಯಲ್ಲಿ ಜನನ/ಮರಣ/ಅಲಭ್ಯ ಪ್ರಮಾಣ ಪತ್ರವನ್ನು ಸಾರ್ವಜನಿಕರು ಆಗಮಿಸಿ ಸಂಬಂಧಿಸಿದ ಪ್ರಮಾಣ ಪತ್ರ ಪೂರೃಸ ಬೇಕೆಂದು ಅರ್ಜಿ ಕೊಟ್ಟಾಗ ಆಗ ಅಲ್ಲಿಯ ಕೆಲ ಸಿಬ್ಬಂದಿಗಳು ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿ ಸಾರ್ವಜನಿಕರಿಗೆ ಯಾಮಾರಿಸುತ್ತಿದ್ದಾರೆ.
ಆದರೆ ಮೇಲ್ಕಾಣಿಸಿದ ಪ್ರಮಾಣ ಪತ್ರ ಪೂರೈಸಲು ಒಂದು ಪ್ರಮಾಣ ಪತ್ರಕ್ಕೆ 20 ರೂಂ.ಗಳಿದ್ದು ಆ ಹಣ ಪಡೆದು ಪ್ರತಿಯಾಗಿ ರಿಸೀದಿ ಕೊಡಬೇಕೆಂಬ ನಿಯಮವಿದೆ. ಆದರೆ ಅಲ್ಲಿಯ ಲಂಚಾವತಾರ ಕೆಲ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಂಬಂಧಿಸಿದ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕರ್ತವ್ಯ ಲೋಪದಡಿ ಕಾನೂನು ಕ್ರಮ ಕೈಗೊಳ್ಳ ಬೇಕು. ಇಲ್ಲವಾದರೆ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯ ವಾಗುತ್ತದೆ ಎಂದು ಆರ್.ಪಿ.ಆಯ್ (ಅಂಬೇಡ್ಕರ್) ಘಟಕದ ಜಿಲ್ಲಾ ಕಾರ್ಯದರ್ಶಿ ಶಿವಾನಂದ.ಹರಿಜನ ಆರೋಪಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ. ಇಂಡಿ