ಹಿಟ್ನಳ್ಳಿ ಗ್ರಾಮದಲ್ಲಿ ಮಹಿಳಾ – ದಿನಾಚರಣೆ ಆಚರಣೆ.
ಹಿಟ್ನಳ್ಳಿ ಮಾ.11

ದೇವರ ಹಿಪ್ಪರಗಿ ತಾಲ್ಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಇಂದು ಸ್ತ್ರೀ ಶಕ್ತಿ ಮಹಿಳಾ ಸಂಘದ ಒಕ್ಕೂಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ, ಕೆ.ಪಿ.ಸಿ.ಸಿ ರಾಜ ಪ್ರಧಾನ ಕಾರ್ಯದರ್ಶಿಳಾದ ಡಾ, ಪ್ರಭುಗೌಡ, ಲಿಂಗದಳ್ಳಿ ಅವರ ಧರ್ಮ ಪತ್ನಿಯಾದ ಮಾಲಿನಿ ಲಿಂಗದಳ್ಳಿ ಅವರು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.


ಈ ಕಾರ್ಯಕ್ರಮದ ಸಂಧರ್ಭದಲ್ಲಿ ಪರಮ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿ ಯವರು ಶ್ರೀ ಲಿಂಗರಾಜ ಮಹಾರಾಜರು ಹಾಗೂ ಇಂದುಮತಿ ಸಾಲಿಮಠ,ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಸುಜಾತಾ ಕಳ್ಳಿಮನಿ ಗೌರಮ್ಮ ಮುತ್ತತ್ತಿ, ಹಾಗೂ ಗ್ರಾಮದ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳೆಯರು ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ