ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ – ತರೀಕೆರೆ ಎನ್.ವೆಂಕಟೇಶ್.
ತರೀಕೆರೆ ಮಾ.11

ರಾಜ್ಯದಲ್ಲಿ ದಲಿತ ಚಳುವಳಿ ಕಟ್ಟಿದವರು ಮಹಾತ್ಮ ಪ್ರೊಫೆಸರ್ ಬಿ.ಕೃಷ್ಣಪ್ಪ ನವರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಹೇಳಿದರು. ಅವರು ಸೋಮವಾರ ಸಂಜೆ 7. ಗಂಟೆಗೆ ಸೀತಾಪುರದಲ್ಲಿ ಏರ್ಪಡಿಸಿದ್ದ ಬಹುಜನ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ದಲಿತರು ಶೋಷಿತರು ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಆದ್ದರಿಂದ ಎಲ್ಲಾ ಶೋಷಿತ ಸಮಾಜದವರು ಸಂಘಟಿತರಾಗ ಬೇಕು ಎಂದು ಕರೆ ಕೊಟ್ಟರು.

ಮಹಾತ್ಮ ಪ್ರೊ. ಬಿ ಕೃಷ್ಣಪ್ಪನವರ ನೇತೃತ್ವದಲ್ಲಿ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಮಹಿಳೆಯರ ಬೆತ್ತಲೆ ಸೇವೆ ವಿರುದ್ಧ ಹೋರಾಟ ಮಾಡಿ ಮಹಿಳೆಯರ ಮಾನ ಉಳಿಸುವ ಕೆಲಸವನ್ನು ಮಾಡಿದರು ಜಾತ್ರೆಯನ್ನು ನಿಷೇಧ ಮಾಡಲಾಯಿತು. ಭೂಮಿ ಗೋಸ್ಕರ ಹೋರಾಟ ಮಾಡಿದ ಮೇಲೆ ಪರಭಾರೆ ನಿಷೇಧ ಕಾಯ್ದೆ ಜಾರಿ ಯಾಯಿತು, ಬೆಂಡಿಗೇರಿ ಪ್ರಕರಣದ ವಿರುದ್ಧ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅಟ್ರಾಸಿಟಿ ಕಾಯಿದೆ ಜಾರಿ ಯಾಯಿತು, ಹೆಂಡ ಸಾರಾಯಿ ಬೇಡ ನಮಗೆ ವಸತಿ ಶಾಲೆ ಬೇಕು ಎಂದು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಹೋಬಳಿ ಗೊಂದು ಮುರಾರ್ಜಿ ವಸತಿ ಶಾಲೆಗಳು ಅಂಬೇಡ್ಕರ್ ವಸತಿ ಶಾಲೆಗಳು ಮುಂತಾದ ವಸತಿ ಶಾಲೆಗಳು ಸ್ಥಾಪನೆಗಳಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಕೀಲರಾದ ಶಿವಶಂಕರ್ ನಾಯಕ್ ರವರು ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಅಂಬೇಡ್ಕರ್ ಸಿದ್ದಾಂತದ ಅಡಿಯಲ್ಲಿ ಹೋರಾಟ ಮಾಡಿ ಒಗ್ಗಟ್ಟಿನಿಂದ ಯಾವುದೇ ಅಧಿಕಾರಿಗಳಾಗಲಿ ರಾಜಕಾರಣಿ ಆಗಲಿ ನಮಗೆ ಸ್ಪಂದಿಸುತ್ತಾರೆ ಗ್ರಾಮದ ಅಭಿವೃದ್ಧಿಗೆ ಸಹಕಾರ ವಾಗುತ್ತದೆ. ಇಂದು ಉದ್ಘಾಟನೆಯಾದ ಸಂಘ ಬೃಹದಾಕಾರವಾಗಿ ಬೆಳೆಯಲಿ ಎಂದು ಹೇಳಿದರು.

ದಲಿತ ಮುಖಂಡರಾದ ಎಸ್ ಆನಂದ ಮಾತನಾಡಿ ಕಳೆದ 25 -30 ವರ್ಷಗಳ ಹಿಂದೆ ಈ ಭೂಮಿಗಾಗಿ ಕ.ದ.ಸಂ.ಸ ಹೋರಾಟ ಮಾಡಿದ ನೆನಪನ್ನು ತಿಳಿಸಿದರು. ಸಿದ್ದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ವೇಲಾಯುಧನ್ ಮತ್ತು ಎಸ್.ಟಿ ಮಂಜು, ಹಾಗೂ ಕೃಷ್ಣಾಪುರದ ಮಂಜು ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷರಾದ ಹೊನ್ನಪ್ಪ ಸೀತಾಪುರ ಗ್ರಾಮ ಶಾಖೆ ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷರಾದ ಅರ್ಜುನ, ಕಾರ್ಯದರ್ಶಿ ಪರಮೇಶ್, ಖಜಾಂಚಿ ಕರ್ಪ ರವರ ಆಯ್ಕೆಯನ್ನು ಘೋಷಣೆ ಮಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕರಾದ ಬೇಲೇನಹಳ್ಳಿ ಸಿದ್ದಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ಸಿಲ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು