ಕಾನಾಮಡುಗು ಶ್ರೀ ಶರಣ ಬಸವೇಶ್ವರ ರಥೋತ್ಸವ ಸಡಗರದಿಂದ ಜರುಗಿತು.
ಕಾನಾಮಡುಗು ಡಿಸೆಂಬರ್.23

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡುಗು ಶ್ರೀ ಶರಣ ಬಸವೇಶ್ವರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಶ್ರೀ ಶರಣ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ. ಬಾಳೆಹಣ್ಣು. ಉತ್ತುತ್ತಿ .ಮಂಡಕ್ಕಿ. ಎಸೆದು ಭಕ್ತಿ ಸಮರ್ಪಿಸಿದರು. ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ.ಶರಣಾರ್ಯರು. ಚನ್ನಗಿರಿಯ ಕೇದಾರಲಿಂಗ ಶಿವಾಚಾರ್ಯ ಸ್ವಾಮಿಗಳು. ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ರಥೋತ್ಸವದ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದರು.ಶ್ರೀ ಸ್ವಾಮಿಯ ಪಟ್ಟವನ್ನು ಕಾನಾಮಡುಗು ಗ್ರಾಮದ ಡಿ ಎಚ್ ಶರಣಪ್ಪ ಇವರು ರೂ 100000 ಕ್ಕೆ ಪಡೆದು ಕೊಂಡರು. ಇದೇ ಸಂದರ್ಭದಲ್ಲಿ ಹುಲಿಕೆರೆ. ಸಕಲಾಪುರದಹಟಿ .ಹೊಸಹಳ್ಳಿ. ಆಲೂರು. ಹಿರೇಕುಂಬಳಗುಂಟೆ. ಪಕ್ಕದ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಭಕ್ತರು ಸೇರಿದಂತೆ ಸುತ್ತ ಮುತ್ತಲ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ