ದಲಿತ ವಿರೋಧಿ ಇಂಡಿ ಡಿ.ವೈ.ಎಸ್ಪಿ ಅವರನ್ನು ವರ್ಗಾವಣೆ ಮಾಡಿ – ಜಿತೇಂದ್ರ ಕಾಂಬಳೆ.
ಇಂಡಿ ಮಾ.11

ತಾಲೂಕಿನ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಹೆಚ್.ಎಸ್ ಜಗದೀಶ ದಲಿತರು ಬಡವರು ಅವರ ಬಳಿ ನ್ಯಾಯಕ್ಕಾಗಿ ಹೋದರೆ, ನ್ಯಾಯ ಒದಗಿಸಿ ಕೊಡದೇ ಅವರ ಎಜಂಟರ್ ಮೂಲಕ ಹಣ ಪಡೆದು ಅನ್ಯಾಯ ಮಾಡುತ್ತಿದ್ದಾರೆ. ಜಿತೇಂದ್ರ ಕಾಂಬಳೆ ಅವರು ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ. ಡಿವೈಎಸ್ಪಿ ಅವರು ಜಾತಿ ವಿರೋಧಿ ಕೆಲಸ ಮಾಡುತ್ತಿದ್ದು, ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಜಿಲ್ಲೆಯ ವರಿಷ್ಠಾಧಿಕಾರಿಗಳ ಮಾತು ಕೇಳದ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಎಂದು ಆರೋಪಿಸಿದ ಅವರು, ಶಿರಗೂರ ಇನಾಂ ಗ್ರಾಮದ ಒರ್ವ ದಲಿತನ ಭೂಮಿ ಬೇರೆಯವರು ಬಡ್ಡಿಯಲ್ಲಿ ಒತ್ತೆಯಾಗಿ ಇಟ್ಟು ಕೊಂಡಿದ್ದು. ಈ ಕುರಿತು ಎಸ್ಪಿ ಸಾಹೇಬರ ಬಳಿ ಹೋದಾಗ ಅವರು ಡಿವೈಎಸ್ಪಿ ಅವರಿಗೆ ಕರೆ ಮಾಡಿ, ಆ ಜಮೀನು ಭೂ ಸುಧಾರಣೆ ಕಾಯ್ದೆಯಲ್ಲಿ ಎಸ್ಸಿ/ಎಸ್ಟಿ ಅವರಿಗೆ ನೀಡಿದ ಭೂಮಿಯಾಗಿದ್ದು ಅದನ್ನು ಮರುಳಿ ಕೊಡಿಸಲು ಪ್ರಯತ್ನಿಸ ಬೇಕು ಎಂದು ಹೇಳಿದರು ಅವರ ಮಾತಿಗೆ ಬೆಲೆ ಕೊಡದೇ. ದಲಿತರ ವಿರುದ್ಧ ಇರುವ ಸವರ್ಣೀಯರಿಂದ ಹಣ ಪಡೆದು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ,ದಲಿತರು ದೌರ್ಜನ್ಯಕ್ಕೆ ಒಳಗಾಗಿ ದಲಿತರ ಮೇಲೆ ಹಲ್ಲೆಯಾಗಿ, ಅವರ ಮೇಲೆ ದೌರ್ಜನ್ಯ ಮಾಡಿದರು ಸಹ ಅವರ ವಿರುದ್ಧ ಯಾವುದೇ ದೂರು ದಾಖಲಿಸಲು ನಿರಾಕರಿಸುತ್ತಾರೆ. ನ್ಯಾಯಕ್ಕಾಗಿ ಡಿವೈಎಸ್ಪಿ ಅವರ ಬಳಿ ಬಂದರೆ ಅವರು ಪ್ರಕರಣ ದಾಖಲಿಸಿ ಕೊಳ್ಳದಂತೆ ವಿಳಂಬ ಮಾಡಿಸುತ್ತಿದ್ದಾರೆ. ಇನ್ನೊಂದು ಪಾರ್ಟಿಯ ಹಣ ನೀಡುತ್ತಾರೆ ಎಂದು ಕಾದು ಪ್ರಕರಣ ದಾಖಲಿಸಿ ಕೊಳ್ಳದೆ ವಿಳಂಬ ಮಾಡುತ್ತಿದ್ದು, ರೌಡಿ ಸೀಟರಗಳನ್ನು ತಂದು ಅವರಿಂದ ಹಣ ಪಡೆದು ಅವರನ್ನು ಬಿಡುತ್ತಿದ್ದಾರೆ.ವಿಜಯಪುರದ ಖಡಕ್ ಎಸ್ಪಿ ಸಾಹೇಬರು ಜಿಲ್ಲೆಯಲ್ಲಿ ಅಕ್ರಮ ಮಧ್ಯೂ ಮಾರಾಟಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮಧ್ಯ ಮಾರಾಟವಾಗುವುದನ್ನು ತಡೆಯಲು ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ ಆದರೆ ಇವರು ತಾಲೂಕಿನಾದ್ಯಂತ ಅಕ್ರಮ ಮಧ್ಯ ಮಾರಾಟ ಗಾರರಿಂದ ಹಣ ಪಡೆದು ಅಕ್ರಮ ಮಧ್ಯ ಮಾರಾಟ ವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ದಲಿತರ ಮೇಲೆ ಹಲ್ಲೆ ಆದಾಗಲೆಲ್ಲ ದೂರು ದಾಖಲು ಮಾಡಬೇಕೆಂದರೆ ಇವರ ಕಚೇರಿಯ ಮುಂದೆ ಧರಣಿ ಮಾಡ ಬೇಕಾಗುತ್ತದೆ ಮಾಡಿದಾಗ ಮಾತ್ರ ಅವರು ದೂರು ತೆಗೆದು ಕೊಳ್ಳುತ್ತಿದ್ದಾರೆ ಸವರ್ಣೀಯರು ದೂರು ಕೊಟ್ಟರೆ ಯವುದೇ ಮುಲಾಜಿಲ್ಲದೆ ದೂರು ತೆಗೆದು ಕೊಳ್ಳುತ್ತಾರೆ ಆದರೆ ದಲಿತರು ಮಾತ್ರ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ.ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಇಂಡಿ ಡಿವೈಎಸ್ಪಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಕೊಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ವಾರದೊಳಗಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಮಾಡ ಬೇಕಾಗುತ್ತದೆ ಎಂದು ಹೇಳಿದರು. ಆರ್.ಪಿ.ಐ (ಎ) ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ, ಪರಶುರಾಮ ಉಕ್ಕಲಿ, ಸುಖದೇವ ಮೇಲಿನಕೇರಿ, ಫಾರುಕ್ ಶಾವಣ್ಣನವರ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ. ಇಂಡಿ