ತಾಯಿ ಮಗು ಲಸಿಕಾ ವಂಚಿತರಾಗದಂತೆ ಜಾಗೃತಿ ವಹಿಸುವುದು – ಮುಖ್ಯ ಎಸ್.ಎಸ್ ಅಂಗಡಿ.
ಹೊನ್ನಾಕಟ್ಟಿ ಮಾ.12

ಬಾಗಲಕೋಟೆ ಜಿಲ್ಲೆಯ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ರಾಷ್ಟ್ರೀಯ ಲಸಿಕಾಕರಣ ಪ್ರಗತಿ ಸಾಧನೆಗೆ ಲಸಿಕಾಕರಣ ಕ್ರಿಯಾ ಯೋಜನೆಗೆ ಫಲಾನುಭವಿ ಮಕ್ಕಳ ನಿಖರ ಮಾಹಿತಿಗಾಗಿ ಸಾರ್ವತ್ರಿಕ ಲಸಿಕಾಕರಣ ಫಲಾನುಭವಿಗಳ ಗರುತಿಸಲು, ಮನೆ ಮನೆ ಸಮೀಕ್ಷೆ ಕಾರ್ಯ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿವರು ಸಮೀಕ್ಷೆ ಕಾರ್ಯ ಮರು ಪರೀಕ್ಷಿಸಿ ಸಾರ್ವಜನಿಕರಿಗೆ ಪಾಲಕರಿಗೆ ಸಮಗ್ರ ಲಸಿಕಾ ಅಭಿಯಾನದ ವಿವರಿಸಿದರು. 0-5 ವಯೋ ಮಾನದ ಮಕ್ಕಳಲ್ಲಿ ಮಾರಕ ರೋಗಗಳಾದ ಪೋಲಿಯೋ ಬಾಲ ಕ್ಷಯ, ನಾಯಿ ಕೆಮ್ಮು, ಗಂಟಲು ಮಾರಿ ನಂಜು ರೋಗ, ವಾಂತಿ ಬೇಧಿ, ಬಿಳಿ ಕಾಮಾಲೆ ನ್ಯೊಮೆನಿಯಾ, ಮೆದಳು ಜ್ವರ ತಡೆಗೆ ವಯೋಮಾನ ಅನುಸಾರ ಲಸಿಕೆ ಹಾಕಲಾಗುವುದು ಗರ್ಭಿಣಿಯರಿಗೆ ನಂಜು ನಿರೋಧಕ ಲಸಿಕಾಕರಣ, ಪ್ರತಿ ಶತ ಸಾಧನೆ ಯಾವುದೇ ಮಗು ಲಸಿಕೆ ವಂಚಿತವಾಗುವದನ್ನು ತಡೆಯಲು, 0-5 ವಯೋ ಮಾನದವರ ಗರ್ಭಿಣಿಯರ ಫಲಾನುಭವಿಗಳ ಗುರುತಿಸಲು.

ಮನೆ ಸಮೀಕ್ಷೆ ಕಾರ್ಯವನ್ನು ಗ್ರಾಮಕ್ಕೆ ಸಂಬಂಧ ಪಟ್ಟ ಆಶಾ ಮನೆ ಮನೆ ಸಮೀಕ್ಷೆ ಮೂಲಕ ನಿಖರ ಮಾಹಿತಿ ದತ್ತಾಂಶ ಸಂಗ್ರಹಿಸಿ ಉಪಕೇಂದ್ರ ಸಲ್ಲಿಕೆ ನಂತರ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಪರೀಶೀಲಸಿ ರಾಷ್ಟ್ರೀಯ ಚುಚ್ಚುಮದ್ದು ಕ್ರಿಯಾ ಯೋಜನೆ ತಯಾರಿಸಿ ಲಸಿಕಾ ಯಶಸ್ವಿ ಗೊಳಿಸಲಾಗುವುದು ಸಾರ್ವತ್ರಿಕ ಲಸಿಕಾಕರಣ ಅಭಿಯಾನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳು ನಿಯಮಿತವಾಗಿ ಜರಗುವುದು ಇದರ ಸದುಪಯೋಗ ಪಡೆಯ ಬೇಕೆಂದರು. ರಾಷ್ಟ್ರೀಯ ಲಸಿಕಾ ಕರಣ ಫಲಾನುಭವಿಗಳ ಸಮೀಕ್ಷೆ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಪಾಲಕರು ಫಲಾನುಭವಿಗಳು ಭಾಗವಹಿಸಿದ್ದರು.