ಹೋಳಿ, ರಂಜಾನ್ ಹಬ್ಬದ ನಿಮಿತ್ತವಾಗಿ – ಮಾನ್ವಿಯಲ್ಲಿ ಶಾಂತಿ ಸಭೆ.
ಮಾನ್ವಿ ಮಾ.12

ಮಾನ್ವಿ ಅಂದರೆ ಶಾಂತಿಯತೆಯ ಊರು ಎಂದು ಪ್ರತೀತಿ ಇದೆ. ಹೀಗಾಗಿ ಹೋಳಿ ಹಾಗು ರಂಜಾನ್ ಹಬ್ಬವನ್ನು ಶಾಂತಿಯಿಂದ ಆಚರಿಸಿ ಎಂದು ಪಿ.ಎಸ್.ಐ ಸಣ್ಣ ಈರೇಶ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಹೋಳಿ ಹಾಗು ರಂಜಾನ್ ಹಬ್ಬದ ನಿಮಿತ್ತ ನಡೆದ ಶಾಂತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಯಾರೋ ಕಿಡಿಗೇಡಿಗಳು ಮಾಡುವ ಕೆಲಸಕ್ಕೆ ನಾವೆಲ್ಲರೂ ತಲೆ ತಗ್ಗಿಸುವ ವಿಚಾರ ಇದ್ದು, ಇದಕ್ಕಾಗಿ ಸಮಾಜದ ಮುಖಂಡರು ತಮ್ಮ ಯುವಕರಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದರು.
ಹಿರಿಯ ವಕೀಲ ಗುಮ್ಮ ಬಸವರಾಜ ಮಾತನಾಡಿ, ಮಾನ್ವಿಯಲ್ಲಿ ಹಿಂದೂ ಹಾಗು ಮುಸ್ಲಿಂ ಸಮಾಜದವರು ಅಣ್ಣ ತಮ್ಮಂದಿರಾಗಿ ಇದ್ದಾರೆ. ಉದಾಹರಣೆ ಎಂದರೆ ನಮ್ಮ ತಾಯಿಯ ಊರು ದೇವದುರ್ಗ ಆದರೆ ಆ ಊರಲ್ಲಿದ್ದ ಮುಸ್ಲಿಂ ಸಮಾಜದವರು ಬಾರಪ್ಪ ಅಳಿಯ ಎಂದು ಪ್ರೀತಿಯಿಂದ ಕರೆಯುತ್ತಾರೆ ಅಂದರೆ ಇದುವೆ ಪ್ರೀತಿ ಬಾಂಧವ್ಯ ಎಂದರು.
ವಕೀಲ ಶಾಮಸುಂದರ್ ನಾಯಕ ಮಾತನಾಡಿ, ಹೋಳಿ ಹಾಗು ರಂಜಾನ್ ಹಬ್ಬ ಬಂದರೆ ಸಾಕು ನಾವೆಲ್ಲರೂ ಪ್ರೀತಿಯಿಂದ ಇರುತ್ತೇವೆ. ಹೋಳಿ ಬಂದರೆ ನಾವು ಪ್ರೀತಿ ಇರುವ ವ್ಯಕ್ತಿಗೆ ಬಣ್ಣ ಹಚ್ಚುತ್ತೇವೆ. ಹೀಗಾಗಿ ನಾವೆಲ್ಲರೂ ಒಂದಾಗಿ ಆಚರಿಸೋಣ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ