“ಜೀವನ ಜೋಪಾನದ ಘಂಟಾ ನಾದ”…..

ಸೂರ್ಯ ಚಂದ್ರರ ನಿತ್ಯ ಕಾಯಕವೇ
ವಿಶ್ವ ಜೀವರಾಶಿಗಳ ಜಾಗೃತ ದೃಷ್ಠಿ
ತಾಯಿ ತಂದೆ ವಂಶವೃಕ್ಷ ಸುರಕ್ಷಿತ
ಜೋಪಾನ ಮಾಡುವ ದೇವರು
ರೈತರು ಸೈನಿಕರು ದೇಶದ
ಜನಸಮೂಹದ ಜಾಗುರೂಕ ರಕ್ಷಕರು
ಶ್ರೀಮಂತ ಬಡವ ಪ್ರತೀಷ್ಠೆ
ದುಡಿಮೆಗೆ ಇರುವ ಬೆಳಕು
ಕನಿಷ್ಠ ಗರಿಷ್ಠ ಸ್ವಾರ್ಥ ಲಾಭದ ಜತನಗಳು
ಪ್ರಜಾ ರಾಜನು ಸರ್ವಜನ
ಸಮಾನತೆಯ ರೂವಾರಿ
ಆಡಳಿತಾತ್ಮಕವಾಗಿ ಮೇಲ್ದರ್ಜೆ
ಕೇಳದರ್ಜೆ ಎನ್ನದೇ
ಸೇವಾಭಾವ ಇರಿಸುವುದು ಉತ್ತಮತನ
ಸೃಷ್ಠಿಯಲಿ ಸರ್ವಜೀವಸಂಕುಲಗಳು
ನೆಲ ಜಲ ವಾಯು ಅಗ್ನಿ ಬೆಳಕು ಬೇದ
ಅರಿಯದ ಜಗದ ಜೋಪಾನದ ಸಿರಿಗಳು
ಸರ್ವ ಜೀವ ರಾಶಿಗಳ ಜೀವಿತವು
ಶೃಂಗಾರದ ಮೆರಗು ಬೆರಗು
ಜೀವನ ಜೋಪಾನದ ಘಂಟಾ ನಾದ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.