ಬಲಗೈ ಪಂಗಡದ ವರಿಂದ ಒಳ ಮೀಸಲಾತಿಗೆ ಆಗ್ರಹಿಸುತ್ತಿರುವ ಮಾದಿಗರನ್ನ ಕಾನೂನಿನ ಸುಳಿಯಲ್ಲಿ – ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ.
ಕುಷ್ಟಗಿ ಮಾ.15
ಈ ಬಲಗೈ ಪಂಗಡದವರು ಮಾದಿಗರನ್ನ ಕಾನೂನಿನ ಸುಳಿಯಲ್ಲಿ ಸಿಲುಕಿಸುವ ಪ್ರಯತ್ನ ಷಡ್ಯಂತ್ರ ರೂಪಿಸುತ್ತಿದ್ದಾರೆ.ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ, ಎಂಬ ಪದಗಳ ಅಡಿಯಲ್ಲಿ ಹೊಲೆಯ/ಹೊಲೆಯರು, ಛಲವಾದಿ, ಹಾಗೂ ಮಾದಿಗ/ಮಾದರ ಜಾತಿಗಳವರು ಇರುತ್ತಾರೆ. ಆದರೇ ಹೊಲೆಯ ಛಲವಾದಿ ಜನಾಂಗದವರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸುಮಾರು 30 ಲಕ್ಷ ಚಲವಾದಿ/ಹೊಲೆಯರು ಜನರು ಆದಿ ಕರ್ನಾಟಕ ಆದಿ ಆಂದ್ರ ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಆದ್ದರಿಂದ ಹೊಲೆಯ/ಚಲುವಾದಿ ಜನಾಂಗ ದವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಒಳ ಮೀಸಲಾತಿ ನಿಗದಿ ಪಡಿಸಬೇಕು ಎಂಬುದು ಅವರ ವಾದ ಮತ್ತು ಈ ವಿಷಯವನ್ನು ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮಾಡ ಬೇಕಾದರೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಇವರ ಕುತಂತ್ರ ರೂಪಿಸುತ್ತಿದೆ. ಆದ್ರೆ ಈ ಆದಿ ಕರ್ನಾಟಕ ಆದಿ ಆಂದ್ರ ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಇರುವ ಮಾದಿಗ ಸಮುದಾಯದವರು ತುಂಬಾ ಸರಳವಾಗಿ ಮಾದಿಗ ಎಂದು ಮೂಲ ಜಾತಿಯ ಕಾಲಂ ನಲ್ಲಿ ಸೇರಿಸಿ ಮಾದಿಗ ಎಂದು ಜಾತಿ ಪ್ರಮಾಣ ಪತ್ರ ಪಡೆದರೆ ಅಲ್ಲಿಗೆ ಮುಗಿಯಿತು.

ಸಮಸ್ಯೆ ಸಂಪೂರ್ಣ ಮುಕ್ತಾಯ ವಾಗುತ್ತದೆ, ಆದರೇ ಈ ಹೊಲೇಯರು ವಿನಾಃ ಕಾರಣ ಈ ವಿಷಯವನ್ನು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವ ಮೂಲಕ ಅಲ್ಲಿ ಸಂಸತ್ ನಲ್ಲಿ ನಿರ್ಣಯ ಮಾಡಬೇಕು ಎಂದು ಆದರೆ ಈ ಮೇಲಿನ ಪ್ರಕಾರ ಮಾಡ ಬೇಕಾದರೇ 1/3 ಮೇಜಾರಿಟಿ ಸಂಸತ್ ಸದಸ್ಯರು ಒಪ್ಪಿಗೆ ಬೇಕು, ಇದು ಬಹಳ ಕಷ್ಟವಾದ ಕಾರ್ಯವಾಗಿದ್ದು. ಇದರ ಮೂಲಕ ಮಾದಿಗರನ್ನು ಕಾನೂನಿನ ಸುಳಿಯಲ್ಲಿ ಸಿಲುಕಿಸಿ ಒಳ ಮೀಸಲಾತಿ ಜಾರಿಯನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಷಡ್ಯಂತ್ರ ರೂಪಿಸಿದ್ದಾರೆ. ಎಂದು ಇದೆ ವಿಷಯವನ್ನು ಖ್ಯಾತ ವಕೀಲರಾದ ಶ್ರೀ ಅರುಣ ಕುಮಾರ ಸರ್ ಅವರು ಮಾದಿಗ ಸಮುದಾಯದ ಒಳ ಮೀಸಲಾತಿ ಹೋರಾಟಗಾರರಿಗೆ ಒತ್ತಿ ಒತ್ತಿ ಹೇಳಿದ್ದಾರೆ.
ಶಿವಕುಮಾರ ದೊಡ್ಡಮನಿ ವಕೀಲರು ಕುಷ್ಟಗಿ