ಶಾರದಾ ಸ್ಕೂಲ್ ರಸ್ತೆಯಲ್ಲಿರುವ ಶಾದಿ ಮಹಲ್ ಕಟ್ಟಡ ಖಾಲಿ ಇದ್ದು ಅದರಲ್ಲಿ ಟ್ರಾಮಾ ಕೇರ್ ಸೆಂಟರ್ – ಆರಂಭಿಸಲು ಸಚಿವರಲ್ಲಿ ಮನವಿ.
ಮಾನ್ವಿ ಮಾ.16

@ ಮಾನ್ವಿ ಬೃಹತ್ ಆರೋಗ್ಯ ಮೇಳ ಸಚಿವರು ಶ್ರೀ ದಿನೇಶ್ ಗುಂಡೂರಾವ್ ರವರಿಗೆ ಮನವಿ ಕೊಟ್ಟ ಕ್ಷಣ 🙏❤️🙏
ಪಟ್ಟಣದ ಶಾರದಾ ಸ್ಕೂಲ್ ರಸ್ತೆಯಲ್ಲಿರುವ ಶಾದಿ ಮಹಲ್ ಕಟ್ಟಡ ಖಾಲಿ ಇರುತ್ತದೆ. ಸದರಿ ಕಟ್ಟಡದಲ್ಲಿ ಅಪಘಾತದಲ್ಲಿ ಗಾಯ ಗೊಂಡವರ ತುರ್ತು ಚಿಕಿತ್ಸೆಗಾಗಿ ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ಹಾಗೂ ವಕ್ಸ್ ಆಸ್ಪತ್ರೆ ಆರಂಭ ಗೊಂಡಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವ ಮೂಲಕ ಅಪಘಾತ ಗೊಳಗಾದವರ ಪ್ರಾಣ ರಕ್ಷಣೆ ಸಾಧ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.ಜಿಲ್ಲೆಯಲ್ಲಿ ನೂತನವಾಗಿ ಚತುಷ್ಪಥ ರಸ್ತೆ ನಿರ್ಮಾಣ ವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿ ಅನೇಕ ಅಮಾಯಕರು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣ ಸಾವಿಗೀಡಾದ ಪ್ರಸಂಗಗಳು ಉಂಟು.ಕಾರಣ ರಾಯಚೂರು-ಸಿಂಧನೂರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಯಚೂರು-ಲಿಂಗಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದಾದರೂ ಅನಾಹುತ, ಅಪಘಾತ ಜರುಗಿದ್ದಲ್ಲಿ ಮಾನವಿ ಪಟ್ಟಣದಲ್ಲಿ ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ಸೆಂಟರ್ ಹಾಗೂ ವಕ್ಸ್ ಆಸ್ಪತ್ರೆ ವೈದ್ಯರು ಅಪಘಾತದಲ್ಲಿ ಗಾಯ ಗೊಂಡವರಿಗೆ ಚಿಕಿತ್ಸೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಒಂದು ಸೆಂಟರ್ ನಲ್ಲಿ ಎಲಬು & ಮೂಳೆ ತಜ್ಞರು, ಅರವಳಿಕೆ ತಜ್ಞರು ಸೇರಿದಂತೆ ಕನಿಷ್ಟ 4-5 ವಿವಿಧ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಹಾಗೆಯೇ ಅತ್ಯಾಧುನಿಕ ಎಕ್ಸ-ರೇ ಉಪಕರಣಗಳು ಸುಸಜ್ಜಿತ 20 ಹಾಸಿಗೆಗಳ ಸೌಲಭ್ಯಯುಳ್ಳ ಐ.ಸಿ.ಯು ಶಸ್ತ್ರಚಿಕಿತ್ಸಾ ಕೊಠಡಿ, ಕೃತಕ ಉಸಿರಾಟದ ವ್ಯವಸ್ಥೆ ಹಾಗೂ ತುರ್ತು ನಿಗಾ ಘಟಕವನ್ನು ಸ್ಥಾಪಿಸಬೇಕು. ಗಾಯಾಳುಗಳ ಪ್ರಾಣ ರಕ್ಷಣೆಯನ್ನೇ ಗುರಿಯಾಗಿಟ್ಟು ಕೊಂಡು ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ಹಾಗೂ ವಕ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ದಲ್ಲಿ ತರಬೇತಿ ಪಡೆದ ವೈದ್ಯರು ಪ್ರಾಣ ರಕ್ಷಣೆಯ ನಿಟ್ಟಿನಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡುವುದು ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ದ ವಿಶೇಷವಿರುತ್ತದೆ.ಜಿಲ್ಲೆಗೆ ಅತ್ಯಗತ್ಯ, ಜಿಲ್ಲೆಯಲ್ಲಿ 3 – ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಅನೇಕ ಉದಾಹರಣೆಗಳು ಶಾಲಾ ವಿದ್ಯಾರ್ಥಿಗಳು, ರೈತರು ಕೂಲಿ ಕಾರ್ಮಿಕರು ಮಹಿಳೆಯರು ಈ ಹೆದ್ದಾರಿಗಳಲ್ಲಿ ಅಪಘಾತಗಳಾದರೆ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ಸಮಯ ವಿಳಂಬವಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲಾಗದೆ ಅತಿ ಹೆಚ್ಚು ಮರಣ ಹೊಂದಿದ ಉದಾಹರಣೆಗಳುಂಟು. ಜಿಲ್ಲೆಯ 3 – ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕೆಲವು ಕಡೆಗಳಲ್ಲಿ ಖಾಸಗಿ ಟ್ರಾಮಾ ಸೆಂಟರಗಳು ಇವೆ ಯಾದರೂ ಇಲ್ಲಿ ಅಪಘಾತಕ್ಕೊಳಗಾದ ಬಡವರಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ಹೊರೆ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಟ್ರಾಮಾ ಸೆಂಟರ್ ಹಾಗೂ ವಕ್ಸ್ ಆಸ್ಪತ್ರೆ ಪ್ರಾರಂಭಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಕಾರಣ ದಯಾಳುಗಳಾದ ತಾವುಗಳು ಬಡವರ ಪ್ರಾಣ ರಕ್ಷಣೆಗಾಗಿ ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾ ಕೇಂದ್ರ) ಹಾಗೂ ವಕ್ಸ್ ಆಸ್ಪತ್ರೆಯನ್ನು ಮಾನವಿ ಪಟ್ಟಣದ ಶಾರದಾ ಸ್ಕೂಲ್ ರಸ್ತೆಯಲ್ಲಿರುವ ಶಾದಿ ಮಹಲ್ ಕಟ್ಟಡದಲ್ಲಿ ಪ್ರಾರಂಭಿಸಿ ಅನುಕೂಲ ಮಾಡಿ ಕೊಡಬೇಕೆಂದು ಪತ್ರಿಕಾ ಮಾಧ್ಯಮದ ಮೂಲಕ ಮಹೇಶ ಛಲವಾದಿ ಬೆಟ್ಟದೂರು ಜಿಲ್ಲಾ ಪ್ರಕಾರ್ಯದರ್ಶಿ, ವಿನೋದಕುಮಾರ ನಾಯಕ ಬೆಟ್ಟದೂರುಜಿಲ್ಲಾ ಉಪಾಧ್ಯಕ್ಷರು, ಪ್ರೋ, ಚಂದ್ರಶೇಖರ ಮಾನವಿ ರಾಜ್ಯ ಸಲಹೆಗಾರರು, ಚಂದ್ರಶೇಖರ ನೀರಮಾನ್ವಿ ತಾ.ಸಂ.ಕಾರ್ಯದರ್ಶಿ, ಜಾವೀದ ಖಾನ್ ರಾಜ್ಯಾಧ್ಯಕ್ಷರು,ಮಹಾ ಕಲ್ಲೂರು ಗ್ರಾಫ್.ಅಧ್ಯಕ್ಷರು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ