14 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಈರಮ್ಮ….!
ಓಬಳಶೆಟ್ಟಿಹಳ್ಳಿ ನವೆಂಬರ್.18





ಸುಮಾರು 6 ದಶಕಗಳಿಂದ ಗರ್ಭಿಣಿಯರಿಗೆ ಹೆರಿಗೆಯಲ್ಲಿ ತೊಡಗಿ ಸಿಕೊಂಡು ಸುಮಾರು 14 ಸಾವಿರಕ್ಕೆ ಹೆಚ್ಚು ಹೆರಿಗೆ ಹಾಗೂ ಕಣ್ಣುಗಳಲ್ಲಿ ಬಿದ್ದಂತಹ ಕಸ, ಧೂಳ್ ಮತ್ತು ಸಣ್ಣ ಹರಳು ಕೊಳವೆಯ ಮೂಲಕ ತೆಗೆಯುವುದು ಮತ್ತು ಬಟ್ಟೆ ನೆಯ್ಯುವುದು ಇವರ ಸಮಾಜ ಸೇವೆ. ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಸೂಲಗಿತ್ತಿ ಈರಮ್ಮ 30ನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದು ಕೊಳ್ಳುತ್ತಾಳೆ ಅವಾಗಿನಿಂದ ಇಲ್ಲಿಯವರೆಗೂ ಹಳ್ಳಿಗಳಲ್ಲಿ ಗರ್ಭಿಣಿಯರಿಗೆ ಹೆರಿಗೆಯಲ್ಲಿ ತೊಡಗಿಸಿ ಕೊಂಡರು. ಆಗಿನ ಕಾಲದಲ್ಲಿ ವೈದ್ಯರ ಸೇವೆ ಅಷ್ಟಕ್ಕಷ್ಟೇ, ಜನರು ಯಾವುದೇ ರೋಗ ರುಜಿನಗಳು ಬಂದರೂ ಹಳ್ಳಿ ಮದ್ದುಗಳೇ ಬೇಕು, ಆಸ್ಪತ್ರೆಗಳೆಂದರೆ ಜನರಿಗೂ ಅಲರ್ಜಿ ಇಂಥಹ ಕಾಲಘಟ್ಟದಲ್ಲಿ ಅಕ್ಷರ ಜ್ಞಾನವೂ ಇಲ್ಲದ ಗ್ರಾಮೀಣ ಮಹಿಳೆ. ಇವರಿಗೆ ಒಬ್ಬ ಗಂಡು ಮಗ ಇಬ್ಬರು ಹೆಣ್ಣು ಮಕ್ಕಳು ಮಗನಿಗೆ ಸುಮಾರು 70 ವರ್ಷಗಳು ಆಗಿದೆ ವೃದ್ಯಾಪೆ ವಿರಾಮ ವೇತನ ಪಡೆಯುತ್ತಿದ್ದಾನೆ. ಈಗ ಸೂಲಗಿತ್ತಿ ಈರಮ್ಮ ಅವರಿಗೆ 101 ವರ್ಷ ಪ್ರಾಯ. ಈಗ ಸದ್ಯಕ್ಕೆ ಈರಮ್ಮ ಸೂಲಗಿತ್ತಿ ಕಾಯಕವನ್ನು ಮೂರು ವರ್ಷದಿಂದ ನಿಲ್ಲಿಸಿದ್ದಾರೆ. ವಯಸ್ಸಾದ ಕಾರಣ ನಿಲ್ಲಲು ಕೂತುಕೊಳ್ಳಲು ಶಕ್ತಿ ಇಲ್ಲ, ಈ ಕಾಲದಲ್ಲಿ ಜನರಿಗೆ ಸೂಲಗಿತ್ತಿಯ ಬಳಿ ಹೆರಿಗೆ ಮಾಡಿಸುವ ಕೆಲಸಕ್ಕೂ ಬ್ರೇಕ್ ಹಾಕಿದ್ದಾರೆ. ನನ್ನನ್ನು ಜನ ಗುರುತಿಸದೇ ಇರಬಹುದು ಆದರೆ ಸೇವೆ ಮಾಡಿದ ತೃಪ್ತಿ ನನಗೆ ಸದಾ ಸಂತೋಷವನ್ನು ಕೊಡುತ್ತದೆ ಎನ್ನುತ್ತಾರೆ ಈರಮ್ಮ. 65 ವರ್ಷದ ಹಿಂದೆ ಆಸ್ಪತ್ರೆಗಳು ಇಷ್ಟೊಂದು ಇರಲಿಲ್ಲ. ಆ ಸಮಯದಲ್ಲಿ ಹಳ್ಳಿಗಳಲ್ಲಿ ಇವರೇ ಡಾಕ್ಟರ್ ಅಂತ ಹೆಸರು ಪಡೆದಿದ್ದರು. ಯಾವುದೇ ತರಬೇತಿ ಪಡೆಯದೆ ಈರಮ್ಮ ಕೈಯ್ಯಲ್ಲಿ ಒಂದೇ ಒಂದು ಮಗು ಅಥವಾ ತಾಯಿಯ ಪ್ರಾಣಕ್ಕೆ ಹಾನಿಯಾಗದೇ ಇರುವುದು ಈರಮ್ಮರ ಸೇವಾ ಮನೋಭಾವಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಹೆರಿಗೆ ಮಾಡಿಸಿದರೆ ಹೆಣ್ಣು ಅಥವಾ ಗಂಡು ಮಗು ಹುಟ್ಟಿದರೆ ಒಂದು ಮರ ರಾಗಿ ಕೊಡುತ್ತಿದ್ದರು. ಕಡು ಬಡತನದಲ್ಲೇ ಕಾಲ ಕಳೆದ ಈರಮ್ಮ ಒಂದು ರೂ. ದಕ್ಷಿಣೆಯಾಗಿಯೂ ಪಡೆದು ಕೊಂಡಿಲ್ಲ. ಒಟ್ಟಾರೆಯಾಗಿ ಇಂತಹ ಒಂದು ಸಮಾಜಮುಖಿ ಸೇವೆಯನ್ನು ಮಾಡಿರತಕ್ಕಂತ ಶತಾಯುಷಿ ಸೋಲಗಿತ್ತಿ ಈರಮ್ಮನವರನ್ನು ಗೌರವಿಸದು ನಮ್ಮ ನಿಮ್ಮೆಲ್ಲರ ಧರ್ಮ ಅಲ್ಲದೆ ಕರ್ನಾಟಕ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು, ಸಂಘ ಸಂಸ್ಥೆಗಳು ಇಂಥಹ ಸಮಾಜ ಸೇವಕರನ್ನು ಗುರುತಿಸಿ ಪ್ರಶಸ್ತಿ ಗೌರವಿಸಿದರೆ ಅದುವೇ ಅವರಿಗೆ ನೀಡುವ ದೊಡ್ಡ ಸನ್ಮಾನ, ಗೌರವವಾಗಿದೆ.*ವೈದ್ಯರಿಗಿಂತ ಕಮ್ಮಿಯಿಲ್ಲ ಇವರ ಕಾರ್ಯಶೈಲಿ:* 65 ವರ್ಷಗಳ ಕಾಲ ಸೇವೆಯಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ. ಈರಮ್ಮರೇ ಹೇಳುವ ಪ್ರಕಾರ ಒಂದೇ ದಿನದಲ್ಲಿ ಮೂರು-ನಾಲ್ಕು ಹೆರಿಗೆ ಮಾಡಿಸಿದ್ದೂ ಇದೆ. ಈರಮ್ಮರು ಬಂದರೆ ಎಲ್ಲರಿಗೂ ಧೈರ್ಯ, ವೈದ್ಯರ ಅವಶ್ಯಕತೆ ಅಲ್ಲಿ ಬೇಕಾಗಿಲ್ಲ. ಒಂದು ಜೀವವೂ ಬಲಿಯಾಗಿಲ್ಲ. ಹೆರಿಗೆ ಬೇನೆ ಬಂದಿದೆ ಎಂದು ಮಧ್ಯ ರಾತ್ರಿ ಬಂದು ಕರೆದರೂ ನಡೆದು ಕೊಂಡೇ ಕಿ ಮೀ ದೂರಕ್ಕೂ ನಡೆದು ಕೊಂಡು ಹೋಗುವ ಮೂಲಕ ಸೇವೆ ಮಾಡಿದ ಖ್ಯಾತಿ ಇವರದ್ದು.*ಸೂಲಗಿತ್ತಿ ಈರಮ್ಮ ಡಾಕ್ಟರ್ ಗೆ ಸಲಹೆ:* ಕಾಳಿಂಗರಾವ್ ಎಂಬ ಡಾಕ್ಟರ್ ಇವರ ಸಹಾಯ ಪಡೆದು ಕೊಂಡಿದ್ದರು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಕಾಳಿಂಗರಾವ್ ಅವರ ಪುತ್ರ ಅವರು ಸಹ ವೈದ್ಯರಾಗಿದ್ದು ಸೂಲಗಿತ್ತಿ ಈರಮ್ಮನವರು ನನಗೆ ತಿಳಿದುಬಂದಂತೆ 7,000 ಕ್ಕೂ ಹೆಚ್ಚು ಹೆರಿಗೆಗಳನ್ನು ನನಗೆ ತಿಳಿದಂತೆ ಮಾಡಿಸಿದ್ದಾರೆ. ಅದಲ್ಲದೆ ನನ್ನ ತಂದೆಯವರು ವೈದ್ಯರಾಗಿ ನಿಂದಲೂ ಸೂಲಗಿತ್ತಿ ಈರಮ್ಮನವರು ನನ್ನ ತಂದೆಯ ಕಾಲದಿಂದಲೂ ನಮ್ಮ ಆಸ್ಪತ್ರೆಯಲ್ಲಿ ಹೆರಿಗೆಗಳನ್ನು ಮಾಡಿಸಿಕೊಂಡು ಬಂದಿದ್ದಾರೆ. ಅವರ ಹೆರಿಗೆಗಳನ್ನು ಮಾಡಿಸುವುದು ನೋಡಿದರೆ ಯಾವ ಎಂಬಿಬಿಎಸ್ ಮಾಡಿದ ಡಾಕ್ಟರ್ ಗಿಂತ ಕಡಿಮೆ ಇಲ್ಲ ಎಂದು ಅವರ ಬಗ್ಗೆ ವರ್ಣಿಸಿದ್ದಾರೆ.ಈರಮ್ಮರಂತ ಸಮಾಜ ಸೇವಕಿಯನ್ನು ಇನ್ನು ಕಾಣಲು ಸಾಧ್ಯವಿಲ್ಲ, ತನ್ನ ಆಯುಷ್ಯವನ್ನು ಇನ್ನೊಬ್ಬರಿಗೆ ಸೇವೆ ಮಾಡಲೆಂದೇ ಮುಡಿಪಾಗಿಟ್ಟ ಮಾಹಾತಾಯಿ ಅವರು. ಸಮಾಜ ಅವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಬೇಕಿತ್ತು. ಆದರೆ ಎಲೆಮರೆ ಕಾಯಿಯಾಗೇ ಉಳಿದ ವೆಂಕಮ್ಮರನ್ನು ಇನ್ನಾದರೂ ಜನ ಇವರನ್ನು ಗುರುತಿಸಿ ಗೌರವಿಸಿದರೆ ಸಮಾಜ ಸೇವೆ ಮಾಡುವವರಿಗೂ ಒಂದು ಪ್ರೇರಣೆಯಾಗುತ್ತದೆ ಎಂದು ಪ್ರಗತಿಪರರು ಮತ್ತು ಜನಪರ ಹಿತ ಚಿಂತಕರು ಕೆ. ತಿಪ್ಪೇಸ್ವಾಮಿ. ಹೊಸಮನಿಯವರ ಅಭಿಮತವಾಗಿದೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ