771 ನೇ. ಕೆರೆ ನಾಮಫಲಕ ಉದ್ಘಾಟನೆ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮದ – ಉದ್ಘಾಟನಾ ಸಮಾರಂಭ ಜರುಗಿತು.
ಜಲಪುರ ಮಾ.16
ಪರಮ ಪೂಜ್ಯ ಡಾ, ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೋಶ್ರೀ ಡಾ, ಹೇಮಾವತಿ.ವೀ ಹೆಗ್ಗಡೆಯವರ ಜಲಪುರ್ ಗ್ರಾಮಕ್ಕೆ ಕೆರೆ ನಿರ್ಮಾಣ 771 ನೇ. ಕೆರೆ ನಾಮಫಲಕ ಉದ್ಘಾಟನೆ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ. ಉದ್ಘಾಟನಾ ಸಮಾರಂಭ ನೆರವೇರಿಸಿದ ಎಸ್.ಎಸ್ ಪಾಟೀಲ್ ಅಸ್ಕಿ ಇವರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿತು.

ಈ ಸಂದರ್ಭದಲ್ಲಿ ಯಾವ ಸರಕಾರ ಮಾಡದಂತ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಜಲಪೂರ ಗ್ರಾಮಕ್ಕೆ ಕೆರೆ ನಮ್ಮೂರ ಈ ಕೆರೆ ಎಲ್ಲಾ ರೈತರಿಗೆ ಜಾನವಾರುಗಳಿಗೆ ಕುಡಿಯುವ ನೀರಿನ ಪುಣ್ಯದ ಮುಂದೆ ಯಾವ ಪುಣ್ಯ ಅಂದರೆ ನೀರಿನ ಪುಣ್ಯ ದೊಡ್ಡದು ಎಂದು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ, ವೀರೇಂದ್ರ ಹೆಗ್ಗಡ ಇವರ ಇವರು ಮಾರ್ಗದಿಂದ ನಮ್ಮ ಜಲಪೂರ್ ಗ್ರಾಮಕ್ಕೆ ನಮ್ಮೂರ ಕೆರೆ ಎಂಬುದು ಗ್ರಾಮಸ್ಥರಲ್ಲಿ ಬಹಳ ಸಂತೋಷ ನೀಡಿತ್ತು ಎಂದು ತಿಳಿಸಿದರು. ದಿವ್ಯ ಸಾನಿಧ್ಯ ಶ್ರೀಟೋಪಯ್ಯಮುತ್ಯಾ. ಮಾಲಿಂಗೇಶ್ವರ ಮಠ ಜಲಪುರ. ಈ ಜಲಪುರ ಗ್ರಾಮದಲ್ಲಿ ಬಹಳ ದಿನದ ಆಸೆ ಈಗ ಆಸೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನೆರವೇರಿತು ಕೆರೆ ಸಮಿತಿ ಅಧ್ಯಕ್ಷರು ಜಲಪೂರ ಗ್ರಾಮದ ಸಿದ್ದೇಗೌಡ ಬಿರಾದಾರ ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಇನ್ನು 15 ದಿನದಲ್ಲಿ ಈ ಕೆರೆ ತುಂಬುತ್ತೇನೆ ಎಂದು ಅಧಿಕಾರಿಗಳು ಕೂಡ ನನಗೆ ತಿಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಂತೋಷ್ ಕುಮಾರ್ ಜಿಲ್ಲಾ ನಿರ್ದೇಶಕರು ಎಸ್.ಕೆ.ಡಿ. ಆರ್.ಡಿ.ಪಿ ಬಿಸಿ ಟ್ರಸ್ಟ್. ರಿ. ವಿಜಯಪುರ. ವೇದಿಕೆಯನ್ನು ಉದ್ದೇಶಿಸಿ ಎಲ್ಲಾ ಗ್ರಾಮಸರಿಗೆ ಎಲ್ಲಾ ತಾಯಂದಿರಿಗೆ ಸಂಘಗಳನ್ನು ಬೆಳೆಸಿ ಒಳ್ಳೆ ಹೆಸರುಗಳನ್ನು ಬೆಳೆಸಿ ಎಂದು ತಿಳಿಸಿದರು ಈ ಕೆರೆಗೆ ನಮ್ಮ ಧರ್ಮಸ್ಥಳದ ವತಿಯಿಂದ 11 ಲಕ್ಷ 40,000 ಈ ಕೆರೆಗೆ ಮಂಜೂರಾತಿ ಆಗಿದೆ ಅಚ್ಚು ಕಟ್ಟಾಗಿ ಕೆರೆ ನಿರ್ಮಾಣ ಆಗಿದೆ ಎಂದು ತಿಳಿಸಿದರು. ಜಯಂತ ಪೂಜಾರಿ ಮಾನ್ಶ ಪ್ರಾದೇಶಿಕ ನಿರ್ದೇಶಕರು ಕಲಬುರಗಿ. ಬಿನೋಯ ಕ್ಷೇತ್ರ ಯೋಜನಾಧಿಕಾರಿಗಳು ಸಿಂದಗಿ. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಭಾಗ್ಯಶ್ರೀ ರವೀಂದ್ರ ಸುಧಾಕರ್. ಈ ಸಂದರ್ಭದಲ್ಲಿ ರವೀಂದ್ರ ಸುಧಾಕರ್ ಅವರು ಜಲಪೂರ ಗ್ರಾಮದ ಕೆರೆ ನಿರ್ಮಾಣ ಮಾಡುವ ಸಲುವಾಗಿ ಗ್ರಾಮ ಪಂಚಾಯಿತಿ ಯಿಂದ ನಾವು ಅವರಿಗೆ ಬೆಂಬಲವನ್ನು ಕೊಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಬಿ.ಎಮ್. ಸಗರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು. ಜೈ ಭೀಮ್ ಹೊಸಮನಿ ಕಲಕೇರಿ. ಕೃಷಿ ಮೇಲ್ವಿಚಾರಕರು ಸುರೇಶ್ ತಳವಾರ್ ಕಲಕೇರಿ ವಲಯದ. ಮೇಲ್ವಿಚಾರಕರು ಸಿದ್ಲಿಂಗಪ್ಪ ಪಾಟೀಲ್. ಸ್ಥಳೀಯ ಸೇವಾ ಪ್ರತಿನಿಧಿ ನೀಲಮ್ಮ ಬಿರಾದಾರ್. ಹಾಗೂ ಎಲ್ಲಾ ಸೇವಾ ಪ್ರತಿನಿಧಿಗಳು ಸೇರಿದಂತೆ ಗ್ರಾಮದ ಹಿರಿಯರು ಗ್ರಾಮದ ತಾಯಂದಿರು ನಮ್ಮೂರ ಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ