ಮಾನ್ವಿ ನಗರದ ಬಾಷುಮಿಯ್ಯ ಸಾಹುಕಾರ ಸರಕಾರಿ – ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜನೆ.
ಮಾನ್ವಿ ಮಾ.15


ಇಂದು ಆಯೋಜಿಸಲಾಗಿದ್ದ ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ಮಾತ್ರ ನೀಡಿದೆ. ಇದು ಒಟ್ಟಾರೆ ಬಜೆಟ್‌ನ ಶೇ 2. ರಷ್ಟು ಮಾತ್ರ. ಕಳೆದ 10 ವರ್ಷ ಗಳಿಂದಲೂ ಇದೇ ರೀತಿ ಅನ್ಯಾಯ ಮಾಡಲಾಗುತ್ತಿದೆ.

ದೇಶದ ಎಲ್ಲಾ ರಾಜ್ಯಗಳಲ್ಲಿ ಏಮ್ಸ್ ಇವೆ. ಕರ್ನಾಟಕಕ್ಕೆ ಮಾತ್ರ ಏಮ್ಸ್ ನೀಡಿಲ್ಲ. ರಾಜ್ಯದ 28 ಸಂಸದರ ನಿಯೋಗ ದೊಂದಿಗೆ ರಾಯಚೂರಿಗೆ ಏಮ್ಸ್ ನೀಡುವಂತೆ ಪ್ರಧಾನಿ ಬಳಿ ನಿಯೋಗ ಕರೆದು ಕೊಂಡು ಹೋಗಲಾಗುವುದು ಎಂದು ತಿಳಿಸಿದೆ.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ Dinesh Gundu Rao ಅವರು, ಸಚಿವರಾದ ಶ್ರೀ N S Bose Raju ಅವರು ಮಾನ್ವಿ ಶಾಸಕರಾದ ಶ್ರೀ ಹಂಪಯ್ಯ ನಾಯಕ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ