“ಕರುನಾಡು ಕಂಡ ಕುವರ”…..

ಸದಾ ನಗುಮೊಗದ ರಾಜಕುಮಾರ ನಟಸಾರ್ವಭೌಮರ ನೆಚ್ಚಿನ ಕುವರಕನ್ನಡಿಗರ ಕಣ್ಮಣಿ ಪುನೀತಕುಮಾರ ಅಕ್ಷಿಗಳನ್ನು ದಾನ ಮಾಡಿದಂತ ದಾನಶೂರ
ರಾಜಣ್ಣನ ಪ್ರೀತಿಯ ಸುಪುತ್ರನಿವನುಮಗುವ ಮನದವನು ನಗುವ ಮುಖದವನು ಬದುಕಿ ತೋರಿದನು ಸಂತೋಷ ಹಂಚಿದವನು ನಟನೆಯಲ್ಲಿ ನೀತಿ ನಿಯಮ ಸಾರಿದವನು
ಅಂದಗಾರ ಚಂದಗಾರ ಸಿರಿನಾಡು ಮುದ್ದು ಮಗನಿವನುವೀರ ಕನ್ನಡಿಗ ಮುತ್ತಿನಂತ ಮಾತಿನವನುಅಳಿಯದಂತೆ ಎಲ್ಲರ ಹೃದಯದಿ ನಿಂತವನುಕನ್ನಡದ ಕಣ್ಮಣಿ ಧ್ರುವತಾರೆಯಾಗಿ ಮಿಂಚುತಿರುವನು
ಯುವಕರ ಕಣ್ಮಣಿ ಸರಳತೆಯ ಮೂರ್ತಿ ರಾಜ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಫಿಲ್ಮಫೇರ್ ಗಳ ಕೀರ್ತಿ
ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿ
ಕರ್ಣನ ಕವಚಕೆ ಇವ ಸಮಭಾರಅನಾಥ ಬಂಧುವಿಗೆ ಆಸರೆಯ ಸರದಾರವೃದ್ಧರ ಪಾಲಿನ ಒಲವಿನ ಮಂದಾರ ಜನಮನದಲ್ಲಿ ನೀವು ಯಾವಾಗಲೂ ಅಜರಾಮರ
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ/9980180487