ಅನಾಥಾಶ್ರಮದಲ್ಲಿ ಜನನಿ ನಾಯ್ಡು ರವರ – ಹುಟ್ಟು ಹಬ್ಬದ ಆಚರಣೆ.
ಕೊಟ್ಟೂರು ಮಾ.16

ಪ್ರಸ್ತುತ ಈ ದಿನಗಳಲ್ಲಿ ಅನೇಕ ಶ್ರೀಮಂತರು ವೈಭೋಗದ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಾರೆ. ಆದರೆ ಕೊಟ್ಟೂರಿನ ಶ್ರೀಮತಿ ರಮ್ಯಾ ಗೋಪಾಲಕೃಷ್ಣ ರವರ ಮಗಳಾದ ಜನನಿ ನಾಯ್ಡು ರವರು 11 ವರ್ಷದ ಹುಟ್ಟು ಹಬ್ಬವನ್ನು ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿ ಕೇಕ್ ಕಟ್ ಮಾಡುವುದರ ಬದಲಾಗಿ ದೀಪ ಬೆಳಗುವುದರ ಮೂಲಕ ರೈತರ ಜೀವ ನಾಡಿಗಳಾದ ಹಣ್ಣು ಹಂಪಲು ಗಳನ್ನು ಕತ್ತರಿಸಿ ಶ್ರೀಮತಿ ರಮ್ಯಾ ಗೋಪಾಲಕೃಷ್ಣ ಇವರ ತಮ್ಮ ಮಗಳಾದ ಜನನಿ ನಾಯ್ಡು ಆಸೆಯಂತೆ ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಸಮಾಜಕ್ಕೆ ಮಾದರಿ ಯಾದರು ಅಂಗವಿಕಲರಿಗೂ ಅನಾಥರಿಗೂ ಹಾಗೂ ವೃದ್ಧರಿಗೂ ಹಣ್ಣು ಹಂಪಲುಗಳನ್ನು ಪ್ರಸಾದ ವಿನಿಯೋಗ ಮಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು