ಗ್ರಾ.ಪಂ ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿ ಭೂಮಿ ಪೂಜೆ – ಶಾಸಕ ರಾಜುಗೌಡ ಪಾಟೀಲ.
ಕೋರವಾರ ಮಾ.25

ಹಳ್ಳಿಗಳು ಸುಧಾರಣೆಗೆ ಗ್ರಾಮ ಪಂಚಾಯತಿ ಅತ್ಯಂತ ಮಹತ್ವದ ಪಾತ್ರ ಸಾರ್ವಜನಿಕರು ಗ್ರಾಮ ಪಂಚಾಯತಿಯಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಸದಾ ಪಾಲ್ಗೊಳ್ಳಬೇಕು ಆವಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ, ಕುದರಿ ಸಾಲವಾಡಗಿ ಯವರು ಹೇಳಿದರು, ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ, ಜಿಲ್ಲಾ ಪಂಚಾಯತ ವಿಜಯಪುರ ತಾಲೂಕ ಪಂಚಾಯತಿ ಸಿಂದಗಿ ಇವರು ಸಹಯೋಗ ದಲ್ಲಿ 2022/23 ನೇಯ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ನೂತನ ಗ್ರಾಮ ಪಂಚಾಯತಿ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳನ್ನು ಶಾಸಕರಾದ ರಾಜುಗೌಡ ಪಾಟೀಲ ಅವರು ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ಗ್ರಾಮಕ್ಕೆ ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಮಾಡುತ್ತೇನೆ. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ 50 ಲಕ್ಷ ಮೊತ್ತದ ಸಿ.ಸಿ ರಸ್ತೆ ಹಾಗೂ 05 ಲಕ್ಷ ಮೊತ್ತದ ಹನುಮಾನ್ ದೇವಸ್ಥಾನ ಸಮುದಾಯ ಭವನ ಭೂಮಿ ಪೂಜಾ ನೆರವೇರಿಸಿದರು. ಗ್ರಾಮಸ್ಥರಿಂದ ಶಾಸಕರಿಗೆ ವಿಶೇಷ ಸನ್ಮಾನ ಮಾಡಿದರು. ನಂತರ ಕೋರವಾರವನ್ನ ಹೋಬಳಿ ಕೇಂದ್ರವಾಗಿಸಲು ಬೇಕಾಗುವ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಸಂಬಂದಪಟ್ಟ ಇಲಾಖೆಗೆಯವರು ಸಚಿವರನ್ನ ಭೇಟಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕರು ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಯಾದ ಸೈಶಾಜಬಿ ಬ್ಯಾಕೋಡ ವಹಿಸಿದರು. ಹಾಗೂ ದಿವ್ಯ ಸಾನಿಧ್ಯವನ್ನು ಚೌಕಿಮಠದ ಪರಮ ಪೂಜಾ ಶ್ರೀ ಕಾಶಿಲಿಂಗ ಮಹಾ ಸ್ವಾಮಿಯವರು ವಹಿಸಿದರು. ಪ್ರಾಸ್ತಾವಿಕವಾಗಿ ಪಿಡಿಓ ಎಸ್.ಎಸ್ ಗಣಾಚಾರಿ ಮಾತನಾಡಿದರು. ಹಾಗೂ ಜಿಲ್ಲಾ ಪಂಚಾಯತ ಸಿಂದಗಿ ಎ.ಇ.ಇ ಯಾದ ಮುರಾಳ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿಗಳಾದ ಕಾಶೀನಾಥ್ ಕಡಕಭಾವಿ, ಉಪಾಧ್ಯಕ್ಷರಾದ ಮಹಾದೇವಪ್ಪ ರಾಮನಳ್ಳಿ, ಲ್ಯಾಂಡ್ ಅರ್ಮಿ ಅಧಿಕಾರಿಯಾದ ಪ್ರಪುಲಕುಮಾರ ಕ್ಯಾತನ, ಅಭಿಯಂತರಾದ ಎಂ.ಎ ಮಾರುಡಗಿ, ಹಾಗೂ ಗ್ರಾಮದ ಮುಖಂಡರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ನಿರೂಪಣೆ ಹಾಗೂ ಸ್ವಾಗತ ದಲಿತ ಜಿಲ್ಲಾ ಮುಖಂಡರಾದ ಅರುಣಕುಮಾರ ಅವರು ನೆರವೇರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ