ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಮೊಳಕಾಲ್ಮೂರು ತಾಲೂಕಿನಲ್ಲಿ ಹೊಸದಾಗಿ ವಿದ್ಯುತ್ ಇಲಾಖೆಗೆ – ಬಿಲ್ಡಿಂಗ್ ಭೂಮಿ ಪೂಜೆ ನೆರವೇರಿಸಿದ ಶಾಸಕರು.
ಮೊಳಕಾಲ್ಮುರು ಮಾ.28

ಮೊಳಕಾಲ್ಮೂರು ಪಟ್ಟಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಬೆ.ವಿ.ಕಂ ಉಪ-ವಿಭಾಗ ಕಚೇರಿ ಹಾಗೂ ಶಾಖಾ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕ್ಷೇತ್ರಕ್ಕೆ ಈಗ ಹಲವಾರು ಯೋಜನೆಗಳನ್ನು ತಂದು ಬೆಳಕು ಮಾಡಿದ್ದಾರೆ. ಶಾಸಕರು ಇನ್ನೂ ಮೂರು ವರ್ಷ ಕಾಲಾವಕಾಶ ಇದೆ ಒಳ್ಳೆ ಒಳ್ಳೆ ಯೋಜನೆಗಳನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ಮಾಡಬೇಕೆಂದು ಶಾಸಕರ ಮನಸ್ಸಿನಲ್ಲಿ ಇದೆ ಅದಕ್ಕೆ ಕ್ಷೇತ್ರದ ಮತದಾರರು ಇಂಥ ಒಳ್ಳೆ ಶಾಸಕರನ್ನು ಯಾರು ಅನ್ಯಥಾ ಬಯಸಿದಂತೆ ಮಾತನಾಡಬಾರದು. ಕುಡಿಯುವ ನೀರಿನ ಯೋಜನೆ ಮತ್ತು ಭದ್ರ ಮೇಲ್ದಂಡೆ ಯೋಜನೆ ಮೊಳಕಾಲ್ಮೂರು ತಾಲೂಕಿಗೆ ತರಬೇಕೆಂದು ಶಾಸಕರು ಮುಂದಾಳತ್ವದಲ್ಲಿ ಹಾಕಿ ಕೊಂಡುದ್ದಾರೆ ಏಕೆಂದರೆ ಮತದಾರರು ಋಣ ತೀರಿಸಬೇಕೆಂದು ಇಂತಹ ಯೋಜನೆಗಳನ್ನು ಶಾಸಕರು ಮಾಡಿಸುತ್ತಾರೆ ಈಗ ಅಂದಾಜು ವೆಚ್ಚ 2 ಕೋಟಿ 88 ಲಕ್ಷ ಕೆಇಬಿ ಇಲಾಖೆ ಬಿಲ್ಡಿಂಗನ್ನು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಭೂಮಿ ಪೂಜೆ ಮಾಡಿದಂತ ಶಾಸಕರು ಈ ಸಂದರ್ಭದಲ್ಲಿ ತಹಸಿಲ್ದಾರ್ ಟಿ.ಜಗದೀಶ್ ಬೆ.ವಿ.ಕಂ.ಇಲಾಖೆ ಸಿಬ್ಬಂದಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರೈತ ಸಂಘದ ಮುಖಂಡರು ಪ್ರಮುಖರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು