ಕರ್ನಾಟಕ ಯುವ ರಕ್ಷಣಾ ವೇದಿಕೆಯ – ಪದಾಧಿಕಾರಿಗಳ ಆಯ್ಕೆ.
ಕೆ.ಆರ್ ಪೇಟೆ ಮಾ.28

ತಾಲೂಕಿನ ಅಧ್ಯಕ್ಷರಾದ ಜಾವಿದ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯಲಿ ಮಾತನಾಡಿದ ತಾಲೂಕ ಅಧ್ಯಕ್ಷರಾದ ಜಾವಿದ್, ಸಂಘಟನೆಗೆ ಸೇರಿ ಕೊಂಡರೆ ಒಂದು ಬಲ ವಿರುತ್ತದೆ ಯಾರಿಗಾದರೂ ಅನ್ಯಾಯವಾದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಬಹುದು ನಿಮ್ಮಿಂದ ನಾಲ್ಕಾರು ಜನರಿಗೆ ಒಳ್ಳೆಯದು ಆಗುತ್ತದೆ ಎಂದರು.ನಂತರ ಮಾತನಾಡಿದ ಮಹಿಳಾ ಅಧ್ಯಕ್ಷರಾದ ರೋಷನ್ ಬಾನು ಇತ್ತೀಚಿಗೆ ಮಹಿಳೆಯರು ಸಂಘಟನೆಗೆ ಸೇರಿ ಕೊಳ್ಳಲು ತುಂಬಾ ಆಸಕ್ತಿ ವಹಿಸುತ್ತಾ ಇದ್ದಾರೆ ಇದು ಖುಷಿಯ ವಿಷಯ ಎಂದರು.ನಂತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕ ಕಾರ್ಯಧ್ಯಕ್ಷರಾಗಿ ಮೋಹನ್, ಸಂಘಟನಾ ಕಾರ್ಯದರ್ಶಿಯಾಗಿ ನಿಸಾರ್, ಉಪಧ್ಯಕ್ಷರಾಗಿ ಅಬ್ದುಲ್ ಮುತಾಲಿಬ್, ಉಪಾಧ್ಯಕ್ಷರಾಗಿ ಮಂಜುನಾಥ್ ಬಿ.ಟಿ ಕಾರ್ಯದರ್ಶಿಯಾಗಿ ರಮೇಶ್, ನಗರ ಘಟಕ ಉಪಾಧ್ಯಕ್ಷರಾದ ಬನ್ನಾರಿ ಕೆ.ಆರ್ ಮಹಿಳಾ ಘಟಕ ತಾಲೂಕ ತಾಲೂಕು ಉಪಾಧ್ಯಕ್ಷರಾಗಿ ಲೀಲಾವತಿ ರವರನ್ನು ಆಯ್ಕೆ ಮಾಡಲಾಯಿತು, ಈ ಸಂದರ್ಭದಲ್ಲಿ ತಾಲೂಕ ಮಹಿಳಾ ಅಧ್ಯಕ್ಷರಾದ ರೋಷನ್ ಬಾನು, ರವಿ ರಂಗನಾಥ್ ಮೋಹನ್ ದೇವರಾಜ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗೋವಿಂದರಾಜು.ಕೆ.ಕೂಡಲಕುಪ್ಪೆ.ಕೆ.ಆರ್ ಪೇಟೆ