ಕೂಡ್ಲಿಗಿ ಕಾರ್ ಸ್ಟ್ಯಾಂಡ್ ಯುವಕರು ಉಪವಾಸ ಇರುವ ಮುಸ್ಲಿಂ ಸಮುದಾಯದ ಮಸೀದಿಗೆ ಊಟ ನೀಡಿ – ಆ ಮೂಲಕ ದೇವರನ್ನು ಕಂಡ ಯುವಕರು.
ಕೂಡ್ಲಿಗಿ ಮಾ.29





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಕಾರ್ ಸ್ಟ್ಯಾಂಡ್ ವತಿಯಿಂದ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತವಾಗಿ ಜಾತಿ ಧರ್ಮವೆನ್ನದೆ ಮಾನವೀಯ ದೃಷ್ಟಿಯಿಂದ ಧರ್ಮ ದಾರಿತವಾಗಿ ನಡೆದು ಕೊಳ್ಳುವ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಆಚರಣೆ ದಿನವಿಡಿ ಉಪವಾಸ ಪ್ರಾರ್ಥನೆ ಸಲ್ಲಿಸುವಂತಹ ಮುಸ್ಲಿಂ ಬಾಂಧವರಿಗೆ ಕೂಡ್ಲಿಗಿ ಪಟ್ಟಣದ ಕಾರ್ ಸ್ಟ್ಯಾಂಡ್ ಕೂಡ್ಲಿಗಿಯ ಅಕ್ಕ ಪಕ್ಕದ ಗ್ರಾಮಗಳ ಮೂರು ಮಸೀದಿಗಳಿಗೆ ಹಿಂದೂ ಯುವಕರು ಈಚಲ ಬೊಮ್ಮನಹಳ್ಳಿ, ಕೈವಲ್ಯಾಪುರ ಬೀರಲುಗುಡ್ಡ, ಗ್ರಾಮಗಳಲ್ಲಿ ಬರುವ ಮಸೀದಿಗೆ ದಿನವಿಡಿ ಉಪಾಸನ ಪ್ರಾರ್ಥನೆ ಮಾಡುವಂತಹ ಮುಸ್ಲಿಂ ಬಾಂಧವರಿಗೆ ಹಿಂದೂ ಯುವಕರು ಊಟ ಕೊಡುವುದರೊಂದಿಗೆ ದೇವರು ಒಬ್ಬನೇ ನಾಮ ಹಲವು ಎಂಬಂತೆ ಮಾನವೀಯತೆ ದೃಷ್ಟಿಯಲ್ಲಿ ವಾಹನ ಚಾಲಕರು ಹಗಲು ರಾತ್ರಿಎನ್ನದೆ.

ಚಲಿಸುವಂತಹ ಎಲ್ಲ ಕಾರ್ ಸ್ಟ್ಯಾಂಡಿನ ಯುವಕರು ಯಾವುದೇ ಧರ್ಮದ ದೇವರು ಪ್ರತಿಯೊಬ್ಬ ಮಾನವನಿಗೂ ಒಳ್ಳೆಯದನ್ನೇ ಬಯಸುವ ಒಂದು ಬಹುದೊಡ್ಡ ನಂಬಿಕೆ ಎಂಬ ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡು ಶ್ರದ್ಧಾ ,ಭಕ್ತಿ, ನಂಬಿಕೆ, ಯಿಂದ ದಿನ ಪೂರ್ತಿ ಉಪವಾಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ಬಾಂಧವರಿಗೆ ಕಾರ್ ಸ್ಟ್ಯಾಂಡಿನ ಯುವಕರುಗಳು ಪ್ರತಿ ವರ್ಷವೂ ಕೆಲವಾರು ಮಸೀದಿಗಳಿಗೆ ಮಫ್ತರ್, ಊಟವನ್ನು ನೀಡುತ್ತಿರುವ ಹಿಂದೂ ಯುವಕರಿಗೆ ಮುಸ್ಲಿಂ ಬಾಂಧವರು ಸಂತೋಷ ವ್ಯಕ್ತಪಡಿಸಿರು. ಹಾಗೆ ದೇವರು ಅವರ ಕುಟುಂಬಗಳಿಗೆ ಊಟ ಕೊಟ್ಟಂತ ವರಿಗೆ ಹಾರ್ದಿಕವಾಗಿ ಸಾಮಾಜಿಕವಾಗಿ ಉತ್ತಮ ಒಳ್ಳೆಯ ಅಭಿವೃದ್ಧಿ ಬೆಳವಣಿಗೆ ಕಾಣುವಂತೆ ಆಶಿಸಿದ್ದಾರೆ.

ಹೀಗೆ ದೇಶದಲ್ಲಿ ಪ್ರತಿಯೊಬ್ಬ ಮಾನವನು ಜಾತಿ ಭೇದ, ಧರ್ಮ ಎನ್ನದೆ ಮಾನವೀಯ ದೃಷ್ಟಿಯಲ್ಲಿ ಮನುಷ್ಯನನ್ನು ಕಾಣುವಂತೆ ಪ್ರತಿಯೊಬ್ಬ ಸಮುದಾಯದವರು ದೇವರು ಒಬ್ಬನೇ ನಾಮ ಹಲವು ಎಂಬ ನಾಣ್ಣುಡಿಯನ್ನು ತಿಳಿದಿರುವಂತ ವಚನಕಾರರು ಇಂತಹ ಸೇವೆಯನ್ನು ಕಂಡು ಮಹಾನ್ ಚೇತನರು ಹೇಳಿರುವುದು ತಿಳಿಯ ಬಹುದಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ