“ತಂದೆ ತಾಯಿ ಶುಭ ಭಾವವೇ ಬಾಳಿನ ಬೆಳಕು”…..

ಜನ್ಮದಾತರು ಹೊತ್ತವರು ನಿಜ ದೇವರು
ಭೂಮಿಗಿಂತ ಮಿಗಿಲು ಬಾನಿಗಿಂತ ವಿಶಾಲ ತಂದೆ ತಾಯಿ
ಹೆತ್ತವರ ಸೇವೆ ನಿಜ ಪೂಣ್ಯ ಸಂಪಾದನೆ
ಅಮೃತ ಉಣಿಸಿದವರ ಏದಿರು ಕೈಕಟ್ಟಿ ನಿಲ್ಲು
ಹೆತ್ತವರ ಋಣ ಮುಕ್ತನಾಗುವುದು ಅಸಾಧ್ಯ
ಅವರ ಸೇವೆ ಸಾಧ್ಯ ಸಾಧಿಸುಸದಾ ಕ್ಷಣ ಅರಿವಿರಲಿ
ಅವಶ್ಯಕತೆ ಪೂರೈಸಿ ಪೋಷಿಸಿ ಬೆಳಸಿದವರನ್ನು ನೆನೆಯುವುದು
ನಿನ್ನ ಭಾಗ್ಯ ಶುಭಾಶೀರ್ವಾದ ಸ್ವೀಕರಿಸು
ದುಡಿತದಿ ಗಳಸಿದ ಹಣದಿ ಎಲ್ಲವೂ ಸಿಗಬಹುದು
ತಂದೆ ತಾಯಿ ಅವರ ಕಾಳಜಿ ಸಿಗುವದಿಲ್ಲ
ಹೆತ್ತವರ ಪಾದ ಸ್ಪರ್ಶಿಸಿ ನಮಸ್ಕರಿಸು ಜಗವೇ ನಿನ್ನನ್ನು ಪುರಸ್ಕರಿಸುವುದು
ಯಥಾ: ಭಾವ ತಥಾ: ಭಾಗ್ಯದಂತೆ ಮಾಡಿದ ಪುಣ್ಯ ಕರ್ಮದ ಫಲ
ಯಥಾ: ಕಾಯಕಂ ತಥಾ: ಫಲಂ ಆರೋಗ್ಯದಿ ಬಾಳಲು ಸುಚಿ ಮುಖ್ಯ
ತನು ಮನ ಚೈತನ್ಯಕ್ಕೆ ರುಚಿ ತಕ್ಕ ಉಪ್ಪು
ಸತ್ಯ ಮಿತ್ರ ಅಂತರಾತ್ಮದಲಿ ಹಿತ ಬಂಧುಗಳು
ತಂದೆ ತಾಯಿ ಶುಭ ಭಾವವೇ ಬಾಳಿನ ಬೆಳಕು
-ಶ್ರೀದೇಶಂಸು
ಶ್ರೀಸುರೇ ಶ್ರೀ ಶಂಕ್ರೆಪ್ಪ ಅಂಗಡಿ
ಬಾಗಲಕೋಟ